ಪ್ರಸ್ತುತ ಕಾಲಮಾನದಲ್ಲಿ ವಿದ್ಯಾರ್ಹತೆ ಜೊತೆಗೆ ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ್ಯ, ವೃತ್ತಿ ನೈಪುಣ್ಯತೆ ಹೊಂದುವುದು ಅತಿ ಅವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ (16)ರಂದು ನಗರದ ಹೈಸ್ಕೂಲ್ ಮೈದಾನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಜನಸಂಖ್ಯೆ ಹೆಚ್ಚಿರುವ ಎರಡನೇ ದೇಶವಾಗಿದ್ದು, ಜಿಡಿಪಿ 5ನೇ ಸ್ಥಾನದಲ್ಲಿದೆ. ಅದರೂ ಸಹ ಇಲ್ಲಿನ ಉದ್ಯೋಗ ಸೃಜನತೆÉ ಹೆಚ್ಚಿನ ನಿರುದ್ಯೋಗ ಪ್ರಮಾಣ ಚರ್ಚಿತ ವಿಷಯವಾಗಿದೆ. ದೇಶದಲ್ಲಿ ಯುವಜನತೆ ಪ್ರಮಾಣ ಹೆಚ್ಚಿದೆ. ಅಲ್ಲದೆ ಇಲ್ಲಿ ಉತ್ಪಾದಕತೆ, ಯುವ ಮಾನವ ಸಂಪನ್ಮೂಲ ಮತ್ತು ಖರೀದಿ ಸಾಮಥ್ರ್ಯ ಅಧಿಕವಾಗಿರುವುದನ್ನು ಗಮನಿಸಿಯೇ, ವಿದೇಶಗಳ ಹಲವು ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರುತ್ತವೆ. ಹೀಗಾಗಿ ನಮ್ಮಲ್ಲಿನ ಯುವಜನತೆಯಲ್ಲಿ ವೃತ್ತಿ ನೈಪುಣ್ಯತೆ, ತಂತ್ರಜ್ಞಾನ, ಕೌಶಲ್ಯ ಹೆಚ್ಚಾಗಬೇಕು. ಇದನ್ನು ಮನಗಂಡಿರುವ ಸರ್ಕಾರ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ ಜಾರಿಗೊಳಿಸಿ, ಗ್ರಾಮೀಣ ಯುವಜನತೆಗೆ ಕೌಶಲ್ಯ ತರಬೇತಿ ಕೊಟ್ಟು, ಅವರಿಗೆ ಉದ್ಯೋಗ ದೊರಕಿಸಿಕೊಡವಂತಹ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಈ ಉದ್ಯೋಗ ಮೇಳವು ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಈ ಮೂಲಕ ಸ್ಥಳದಲ್ಲಿಯೇ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ದೊರಕಿಸಲಾಗುತ್ತದೆ. ಈ ಮೇಳದ ಸದುಪಯೋಗವನ್ನು ಜಿಲ್ಲೆಯ ಯುವಜನತೆ ಮಾಡಿಕೊಳ್ಳಬೇಕೆಂದರು. ಹಲವಾರು ಜನರಿಗೆ ಎಸ್.ವಿ ಇಂಡಿಯಾನ್ ಕಂಪನಿ, ಸರ್ವೇ ಇಂಡಿಯಾನ್ ಕಂಪನಿ, ಮತ್ತು ವಿಶ್ರಾ ಕಂಪನಿಗಳಿಂದ ಒಪ್ಪಿಗೆ ಪತ್ರ (ಆಫರ್ ಲೇಟರ್) ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಪ್ರಾಸ್ತವಿಕವಿಕವಾಗಿ ಮಾತಾನಾಡಿ, ಈ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಉದ್ಯೋಗ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದರು ಪದವಿ ಮುಗಿದ ನಂತರ ಮುಂದೆನೂ ಅಂತ ಯೋಚನೆ ಮಾಡುತ್ತಿರುವ ನಿರುದ್ಯೋಗಿಗಳಿಗೆ ಈ ಉದ್ಯೋಗ ಮೇಳ ತುಂಬಾ ಉಪಯುಕ್ತವಾಗಿದೆ. ಉದ್ಯೋಗಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ಆನ್‍ಲೈನ್‍ನಲ್ಲಿ ನೊಂದಣಿ ಹಾಗೂ ನೇರವಾಗಿ ಮೇಳದಲ್ಲಿ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ನೈಪುಣ್ಯತೆ, ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಅಪ್‍ಡೇಟ್ ಆಗಬೇಕು. ದಿನೇ ದಿನೇ ಜ್ಞಾನ, ಕೌಶಲ್ಯ ಹೆಚ್ಚಾಗಬೇಕು. ಆಗ ಮಾತ್ರ ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇಂದಿನ ಯುವಜನತೆ ಬಹಳಷ್ಟು ಬುದ್ದಿವಂತಿಕೆ ಹೊಂದಿದ್ದು, ನಮ್ಮ ದೇಶದ ಅರ್ಥ ವ್ಯವಸ್ಥೆಯನ್ನು ಉತ್ತುಂಗಕ್ಕೆ ತರುವಂತಹ ಸಾಮಥ್ರ್ಯ ಅವರಿಗಿದೆ ಎಂದರು. ಸುಮಾರು 1300 ಜನ ಆಪ್‍ಲೈನ್‍ನಲ್ಲಿ ನೊಂದಾಯಿಸಿರುತ್ತಾರೆ. 1050 ಜನ ಕ್ಯೂ.ಆರ್ ಕೋಡ್ ಮೂಲಕ ನೊಂದಾಯಿಸಿದ್ದು, ಜಿಲ್ಲೆಯಲ್ಲಿ ಸುಮಾರು 1000 ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಲಾಗಿದೆ. ಇದೀಗ ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ ಸುಮಾರು 75 ಕಂಪನಿಗಳು ಉದ್ಯೋಗ, ತರಬೇತಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಮೇಳ ಆಯೋಜಿಸುವ ಉದ್ದೇಶವಿದೆ ಎಂದರು.
ಪಾಲಿಕೆ ಮಹಾಪೌರರಾದ ವಿನಾಯಕ ಬಿ.ಹೆಚ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ ಇಟ್ನಾಳ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಕೌಶಲ್ಯಾಭಿವೃದ್ದಿ ಅಧಿಕಾರಿ ಬಸವನಗೌಡ, ದಾವಣಗೆರೆ ತಾಲ್ಲೂಕು ತಹಶಿಲ್ದಾರ್ ಡಾ. ಅಶ್ವತ್ ಎಂ.ಬಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಮಠದ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.