ಮೈಸೂರಿನ ಶ್ರೀ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ದಸರಾ ಸಿ.ಎಂ. ಕಪ್ ಕ್ರೀಡಾಕೂಟದ ಖೋ-ಖೋ ಸ್ಪರ್ಧೆಯಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಪುರುಷರ ಖೋ-ಖೋ ತಂಡವು ಉತ್ತಮ ಪ್ರದರ್ಶನ ನೀಡಿ, ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವಿಜೇತತಂಡದ ಪರ ಭರತ್‍ಕುಮಾರ್ ಪಿ.ಬಿ., ವಿರೇಶ್ (ತಂಡ ನಾಯಕ) ಅರ್ಜುನ್, ಲಕ್ಷ್ಮಣ, ಶರತ್, ಮಹಮ್ಮದ್ ತಾಸೀನ್, ವೇಣುಗೋಪಾಲ್, ಶರೀಫ್, ಗಗನ್, ಸಿದ್ಧರೂಢ ಮತ್ತು ಲಂಕೇಶ್ ಇಲಾಖೆಯ ಖೋ-ಖೋ ತರಬೇತುದಾರ ರಾಮಲಿಂಗಪ್ಪ. ಜೆ ಮತ್ತು ಶ್ರೀಮತಿ ಸುನೀತಾ ಎಂ.ಸಿ.ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಕ್ರೀಡಾ ವಸತಿ ನಿಲಯದ ಖೋ-ಖೋ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಆರ್.ಜಯಲಕ್ಷ್ಮೀಬಾಯಿ, ಇಲಾಖೆಯ ಅಧೀಕ್ಷಕರಾದ ಅರ್ಪಿತ ಕೆ.ಜಿ., ಇಲಾಖೆಯ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.