ನ್ಯಾಮತಿ: ತಾಲೂಕ ಆಫೀಸ್ ಕಚೇರಿ ಆವರಣದಲ್ಲಿಂದು ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಇವರ ಅಧ್ಯಕ್ಷತೆಯಲ್ಲಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಪಟಾಕಿ ಮಾರುವ ಅಂಗಡಿ ಮಾಲೀಕರ ಜೊತೆ ಪೂರ್ವಭಾವಿ ಸಭೆ ನಡೆಸಲಾಯಿತು.
ತಹಶೀಲ್ದಾರ್ ಎಚ್ ಬಿ ಗೋವಿಂದಪ್ಪನವರು ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿ ಈ ಹಿಂದೆ ಬೆಂಗಳೂರಿನಲ್ಲಿ ಪಟಾಕಿಯಿಂದ ಅವಘಡ ಸಂಭವಿಸಿ ಕೋಟ್ಯಾಂತರ ರೂ ಆಸ್ತಿ ಹಾನಿಯಾಗಿ ಜೀವವನ್ನು ಕಳೆದುಕೊಂಡಿದ್ದರು ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಇದನ್ನು ಮನಗಂಡು ಪಟಾಕಿ ಮಾರುವವರ ಅಂಗಡಿಯ ಮಾಲೀಕರು ಸಾರ್ವಜನಿಕರು ವಾಸಿಸುವ ಜಾಗಗಳಲ್ಲಿ ಪಟಾಕಿ ಮಾರುವಂತಿಲ್ಲ ಹಾಗೂ ಗೋಡನಗಳಲ್ಲಿ ಪಟಾಕಿ ಸಂಗ್ರಹಿಸುವ ಆಗಿಲ್ಲ. ಪಟಾಕಿ ಮಾರುವಂಥವರು ಸರ್ಕಾರ ದಿಂದ ಪರವಾನಿಗೆ ಪಡೆದಿರಬೇಕು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಅಗ್ನಿಶಾಮಕದಳದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ತಮ್ಮ ದಾಖಲೆಗಳನ್ನು ಪರೀಕ್ಷಿಸಿ ನಮಗೆ ಆದೇಶ ಪ್ರತಿ ಬಂದ ನಂತರ ಸ್ಥಳವನ್ನು ಪೆÇಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ದಾಖಲೆ ಇದ್ದಲ್ಲಿ ಪರವಾನಿಗೆ ನೀಡುತ್ತಾರೆ ಎಂದು ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಎನ್ ಇ ರವಿಯವರು ಮಾತನಾಡಿ ಪಟಾಕಿ ಇಡುವ ಜಾಗ ಗುರುತಿಸುವುದು ನಮ್ಮ ಜವಾಬ್ದಾರಿ,ಅಗ್ನಿ ಶಾಮಕ ಇಲಾಖೆಯ ಅನುಮತಿ ಪಡೆಯಬೇಕು. ಮನೆಯ ಮುಂದೆ ಅಂಗಡಿಗಳಲ್ಲಿ ಪಟಾಕಿ ಮಾರಲಿಕ್ಕೆ ಇಟ್ಟುಕೊಂಡರೆ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಇದರ ಜೊತೆ ಪಟ್ಟಣದಲ್ಲಿರುವ ಪಟಾಕಿ ಮಾರುವ ಅಂಗಡಿಯ ಮಾಲೀಕರು ನಿಶಬ್ದ ಇರುವ ಜಾಗದಲ್ಲಿ ಪಟಾಕಿ ಮಾರಬೇಕೆಂದ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್ ಪಿ, ಪಟಾಕಿ ಮಾರುವ ಅಂಗಡಿಯ ಮಾಲೀಕರುಗಳಾದ ಎಚ್ ಎಸ್ ಅಶೋಕ್, ಎ ಪ್ರಸಾದ್, ಡಿ ಪಿ ಸಿದ್ದಪ್ಪ, ಇನ್ನು ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *