ನ್ಯಾಮತಿ: ರಾಜ್ಯ ಸರ್ಕಾರ ನ್ಯಾಮತಿ ತಾಲೂಕನ್ನು ಬರಬೇಡಿ ತಾಲೂಕಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ರೈತ ಸಂಘ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಉಪಯುಭಾಗಾಧಿಕಾರಿ ಹುಲ್ಲು ಮನೆ ತಿಮ್ಮಣ್ಣ ನಂತರ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಮಳೆಗಾಲ ಕೈ ಕೊಟ್ಟು ಬಿತ್ತಿದ ಬೆಳೆ ಬಾರದೆ ತೀವ್ರ ಬರಗಾಲ ಎದುರಿಸುತ್ತಿರುವ ರೈತರುಗಳು ಬ್ಯಾಂಕಿನಲ್ಲಿ ಸಾಲವನ್ನು ತೆಗೆದುಕೊಂಡು ಬೆಳೆಯು ಬಾರದೆ ಮಳೆಯಾಗದೆ ಕಂಗಲಾಗಿದ್ದಾರೆ ಹಾಗಾಗಿ ನ್ಯಾಮತಿ ಬೆಳಗುತ್ತಿ ಸವಳಂಗ ಚೀಲೂರು ಗೋವಿನ ಕೋಗಿ ಗ್ರಾಮಗಳಲ್ಲಿ ಇರುವಂತಹ ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಎಸ್‍ಬಿಐ ಡಿಸಿಸಿ ಧರ್ಮಸ್ಥಳ ಸಂಘ ಸೇರಿದಂತೆ ಸುಮಾರು 18 ಬ್ಯಾಂಕುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವ.ಈ ಬ್ಯಾಂಕುಗಳಿಗೆ ಸೇರಿದ ಮ್ಯಾನೇಜರ್ ರವರಿಗೆ ಪ್ರಸಕ್ತ ಸಾಲಿನಲ್ಲಿ ನಿಮ್ಮ ಬ್ಯಾಂಕಿನಲ್ಲಿ ಬೆಳೆ ಸಾಲ, ಕೈ ಸಾಲ,ಸಾಲವನ್ನ ರೈತರು ಪಡೆದುಕೊಂಡಿದ್ದಾರೆ. ಮಳೆಯು ಬಾರದೆ ಬೆಳೆಯು ಬಾರದೆ ಇರುವುದರಿಂದ ತೆಗೆದುಕೊಂಡ ಸಾಲಕ್ಕೆ ನೋಟಿಸ್ ಅನ್ನು ಕೊಡಬಾರದು ಕೊಟ್ಟ ಪಕ್ಷದಲ್ಲಿ ಕಾನೂನು ರೀತಿಯ ಕ್ರಮವನ್ನು ಬ್ಯಾಂಕಿನ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ವೃದ್ಯಾಪ ವೇತನ ವಿಧವಾ ವೇತನ ಹಿರಿಯರಿಗೆ ಬರುವ ಸಾಲಗಳನ್ನು ಬ್ಯಾಂಕಿನವರು ಸಾಲಕ್ಕೆ ಮುರಿದುಕೊಳ್ಳಬಾರದು. ಕೆಲವೊಂದು ಸಂದರ್ಭಗಳಲ್ಲಿ ಈ ಯೋಜನೆಗಳಿಗೆ ಬಂದಂತಹ ಸಂಬಳದಿಂದ ಶುಗರ್ ಬಿಪಿ ಇನ್ನು ಮುಂತಾದ ಕಾಯಿಲೆಗಳಿಗೆ ಹಿರಿಯರು ತುತ್ತಾಗುತ್ತಾರೆ. ಹಾಗಾಗಿ ಸರ್ಕಾರದಿಂದ ಬಂದಂತ ವೇತನದಿಂದ ಹಿರಿಯರು ಬದುಕುವಂತಹ ಸ್ಥಿತಿ ನಮ್ಮ ಕಣ್ಣು ಎದುರುಗಡೆ ಕಾಣುತ್ತಿದೆ ಯಾವುದೇ ಕಾರಣಕ್ಕೂ ಸಾಲಕ್ಕೆಬ್ಯಾಂಕಿನವರು ಆ ಹಣವನ್ನು ಬಳಕೆ ಮಾಡಬಾರದು ಎಂದು ಎಸಿ ಹುಲ್ಲಮನೆ ತಿಮ್ಮಣ್ಣ ಆದೇಶಿಸಿದರು.
ತಹಸಿಲ್ದಾರ್ ಗೋವಿಂದಪ್ಪ ಎಚ್ ಬಿ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸರ್ಕಾರದಿಂದ ಬಂದಂತಹ ಯೋಜನೆಗಳನ್ನು ತತ್ತಕ್ಷಣವೇ ಅನುಷ್ಠಾನಕ್ಕೆ ಕಂದಾಯ ಇಲಾಖೆ ಮಾಡುತ್ತದೆ. ರೈತರುಗಳು ಕಂದಾಯ ಇಲಾಖೆ ಸಂಬಂಧಪಟ್ಟ ವಿ ಎ, ಆರ್ ಐ, ನನ್ನನ್ನು ಸೇರಿದಂತೆ ರೈತರುಗಳಿಗೆ ಅಲೆದಾಡಿಸದೆ ತಕ್ಷಣವೇ ಅವರ ಕೆಲಸವನ್ನು ಮಾಡಿಕೊಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಖಂಡ ರೈತ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ ಇಂಥ ಕಷ್ಟ ದಿನಗಳು ಎಂದು ಬಂದಿರಲಿಲ್ಲ ರೈತರ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ತಮ್ಮ ಬ್ಯಾಂಕುಗಳಿಗೆ ಬಂದಾಗ ಯೋಚನೆ ಮಾಡದೆ ಸಾಲವನ್ನು ಕೊಡಬೇಕು, ಬರಗಾಲದಿಂದ ರೈತರು ತತ್ತರಿಸಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳಿಗೆ ವಿದ್ಯಾಲಕ್ಷ್ಮಿ ಯೋಜನೆಯಡಿಯಲ್ಲಿ ಸಾಲವನ್ನು ನೀಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಭೆಯಲ್ಲಿ ಮ್ಯಾನೇಜರ್ ಅವರಿಗೆ ಮನವಿ ಮಾಡಿದರು.
ಲೀಡ್ ಬ್ಯಾಂಕಿನ ಮ್ಯಾನೇಜರ್ ಪ್ರಕಾಶ್ ರವರು ಸಭೆಯ ಪೂರ್ಣಗೊಂಡ ನಂತರ ಮಾತನಾಡಿ ಪ್ರತಿಯೊಂದು ಬ್ಯಾಂಕಿನ ಮ್ಯಾನೇಜರ್ ಅವರಿಗೆ ರೈತರ ಸಾಲಕ್ಕೆ ನೋಟಿಸ್ ಕೊಡಬಾರದು. ವಿದ್ಯಾಲಕ್ಷ್ಮಿ ಸಾಲಕ್ಕ ಬಂದಂತ ವಿದ್ಯಾರ್ಥಿಗಳಿಗೆ ಸಾಲವನ್ನು ತಕ್ಷಣ ಕೊಡುವಂತ ಕೆಲಸ ಮಾಡಬೇಕು, ಈ ಸಭೆಯಲ್ಲಿ ಮಾಡಿದ ನಡವಳಿಯನ್ನ ಪ್ರತಿಯೊಬ್ಬ ಬ್ಯಾಂಕಿನವರು ಚಾಚು ತಪ್ಪದೇ ಪಾಲಿಸಬೇಕು ಎಂದು ಆದೇಶ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಗಣೇಶ್ ರಾವ್, ಪೆÇಲೀಸ್ ಇನ್ಸ್ಪೆಕ್ಟರ್ ರವಿ ಎನ್ ಇ, ಕೃಷಿ ನಿರ್ದೇಶಕರಾದ ಪ್ರತಿಮಾ, ನ್ಯಾಮತಿ ತಾಲೂಕಿನ ರೈತರ ಸಂಘದ ಅಧ್ಯಕ್ಷರುಗಳು ತಾಲೂಕು ಮಟ್ಟದ ಅಧಿಕಾರಿ ವರ್ಗದವರು, ಬ್ಯಾಂಕಿನ ಸಿಬ್ಬಂದಿ ವರ್ಗದವರು ರೈತರು ಸಹ ಭಾಗಿಯಾಗಿದ್ದರು.
21 ಎನ್ ಎಮ್ ಟಿ ಪೋಟೋ ಸುದ್ದಿ4

Leave a Reply

Your email address will not be published. Required fields are marked *