ನ್ಯಾಮತಿ:ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭುವನೇಶ್ವರಿಯ ಸೇವೆ ಮಾಡಲು ಪುಣ್ಯ ಮಾಡಿರಬೇಕು, ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಸಲ್ಲಿಸಿದರೆ ಆತ್ಮತೃಪ್ತಿ ಸಿಗುತ್ತದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ಸೌಹಾರ್ಧ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನ್ಯಾಮತಿ ತಾಲ್ಲೂಕು ಘಟಕ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಕಸಾಪದ ಕಾರ್ಯಕಲಾಪಗಳು ಹಾಗೂ ಮುಂದಿನ ದಿನಗಳಲ್ಲಿ ಹಮ್ಮಿಕೊಂಡರುವ ಯೋಜನೆಗಳ ಬಗ್ಗೆ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಮಾಹಿತಿ ನೀಡಿದರು.
ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ, ಬೆಳಗುತ್ತಿ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಕವಿರಾಜ, ಕಸಾಪ ನಿರ್ದೇಶಕರಾದ ಎಂ.ಲೋಕೇಶ್ವರಯ್ಯ, ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಭಾಗ್ಯಲಕ್ಷ್ಮೀ, ವೆಂಕಟೇಶನಾಯ್ಕ, ಸೈಯದ್ ಅಕ್ಬರ್‍ಬಾಷ, ಚಂದನಜಂಗ್ಲಿ ದಾನಿಹಳ್ಳಿ ಪಾಲಾಕ್ಷಪ್ಪ ಮಾತನಾಡಿದರು.

Leave a Reply

Your email address will not be published. Required fields are marked *