ನ್ಯಾಮತಿ:ತಾಲ್ಲೂಕು ಮಾದನಭಾವಿ ಗ್ರಾಮದ ಗವಿಸಿದ್ದೇಶ್ವರ ಸೇವಾ ಸಮಿತಿಟ್ರಸ್ಟ್ 18 ಹಳ್ಳಿ ಕಟ್ಟೆಮನೆದೊಡ್ಡಕಲ್ಲುಕಟ್ಟೆ ಹಾಗೂ ವಿವಿಧ ಸಮಿತಿಗಳು ಮತ್ತುರೈತರಿಂದಲೇ ನಡೆಯುತ್ತಿರುವದಸರಾ ಬನ್ನಿ ಕೃಷಿಮೇಳಕ್ಕೆ ಬುಧವಾರ ಚಾಲನೆ ನೀಡಲಾಗುವುದು.
ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಿ.ಜಿ.ಶಾಂತನಗೌಡರು ಮೇಳವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕರಾಜ್ಯರೈತ ಸಂಘದರಾಜ್ಯಅಧ್ಯಕ್ಷಎಚ್.ಆರ್.ಬಸವರಾಜಪ್ಪಅಧ್ಯಕ್ಷತೆ ವಹಿಸಲಿದ್ದು, ಇರುವಕ್ಕಿ ಕೃಷಿ ಮತ್ತುತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಕಾಂಗ್ರೆಸ್‍ಘಟಕದಅಧ್ಯಕ್ಷಎಚ್.ಬಿ.ಮಂಜಪ್ಪ, ಮುಖಂಡರಾದ ಎಚ್.ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ, ಎಚ್.ಬಿ.ಶಿವಯೋಗಿ, ಪಾಲಾಕ್ಷಪ್ಪ, ಕೆ.ಸಿ.ಬಸಪ್ಪ, ಡಿ.ಜಿ.ವಿಶ್ವನಾಥ, ನುಚ್ಚಿನ ವಾಗೀಶ, ಜಿ.ಬಿ.ವಿನಯಕುಮಾರ, ಜಯಪ್ಪ ಬಿದರಗಡ್ಡೆಆಗಮಿಸಲಿದ್ದಾರೆ.
ಮಧ್ಯಾಹ್ನ 2-30ಕ್ಕೆ ವೈದ್ಯ ಡಿ.ಬಿ.ಗಂಗಪ್ಪಅಧ್ಯಕ್ಷತೆಯಲ್ಲಿ ನಡೆಯುವರೈತಗೋಷ್ಠಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಹಾಸನ ಮಾಜಿ ಶಾಸಕ ಪ್ರೀತಂಗೌಡ, ಎಂಎಲ್‍ಸಿ ಡಿ.ಎಸ್.ಅರುನ, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ ಉಪಸ್ಥಿತರಿದ್ದು.
ಬೀಜಗಳ ಸಂರಕ್ಷಣೆ ಮತ್ತು ಬೀಜೋಪಚಾರಕುರಿತುಇರುವಕ್ಕಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದÀ ಎಚ್.ಸಿ.ದಿನೇಶ, ಸಿದ್ದಾರೂಡ ಸಿಂಗಾಡಿ, ರೇಷ್ಮೆಕೃಷಿಯಲ್ಲಿಆಧುನಿಕ ಸಂರಕ್ಷಣೆಕುರಿತು ತರಳಬಾಳು ಕೃಷಿ ವಿಜ್ಞಾ£ ಕೇಂದ್ರದÀ ಮಲ್ಲಿಕಾರ್ಜುನ, ತರಕಾರಿ ಸಸಿಗಳ ಸಂರಕ್ಷಣೆ ಹಾಗೂ ನರ್ಸರಿ ವ್ಯವಸ್ಥೆ ಬಗ್ಗೆ ರವಿಶಂಕರ ಪಾಟೀಲ್ ಹಾಗೂ ತರಕಾರಿ ಬೆಳೆಗಳಲ್ಲಿ ಸಮಗ್ರಕೀಟ ಮತ್ತುರೋಗನಿರ್ವಾಹಣೆಕುರಿತು ಎನ್.ಎಲ್.ನವೀನ ಉಪನ್ಯಾಸ ನೀಡಲಿದ್ದಾರೆ.