ನ್ಯಾಮತಿ: ತಾಲೂಕ್ ಆಡಳಿತ ತಾಲೂಕು ಪಂಚಾಯಿತಿ ನ್ಯಾಮತಿ ಹಾಗೂ ಗ್ರಾಮ ಪಂಚಾಯಿತಿ ಗೋವಿನಕೋವಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ತಾಲೂಕಿನ 2ನೇ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ಹಾಗೂ ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಶಾಸಕರಾದ ಡಿಜಿ ಶಾಂತನಗೌಡ್ರು ಹಾಗೂ ಜಿಲ್ಲಾಧಿಕಾರಿ ಎಂವಿ ವೆಂಕಟೇಶ್ರವರು ಗೋವಿನಕೋವಿ ಗ್ರಾಮದಲ್ಲಿರುವ ನರಸಿಂಹಸ್ವಾಮಿ ದೇವರ ದರ್ಶನ ಪಡೆದು ತದಾದ ನಂತರ ಗ್ರಾಮಸ್ಥರು ಜೋಡೆತ್ತು ಸೇರಿದಂತೆ ಎತ್ತಿನಗಾಡಿಗೆ ಮದವಣಿಗಿತ್ತಿಯಂತೆ ಸಿಂಗರಿಸಿ, ಎತ್ತಿನ ಗಾಡಿಯಲ್ಲಿ ಜಿಲ್ಲಾಧಿಕಾರಿ ಶಾಸಕರು ಸೇರಿದಂತೆ ಪ್ರಮುಖ ರಾಜಭೀದಿಗಳಲ್ಲಿ ಹಲಗೆ ತಮಟೆಯೊಂದಿಗೆ ಮುತ್ತೈದೆಯರು ಪೂರ್ಣ ಕುಂಭಮೇಳದೊಂದಿಗೆ ಮೆರವಣಿಗೆ ಮುಖೇನ ಸ್ವಾಗತಿಸಿದರು.
ಪ್ರಾಸ್ತಾವಿಕ ನುಡಿಯನ್ನ ತಾಲೂಕು ಉಪಯುಭಾಗಾಧಿಕಾರಿ ಹುಲ್ಲಮನೆ ತಿಮ್ಮಣ್ಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಹಿಂದಿನ ರಾಜ ಮಹಾರಾಜರ ಕಾಲದಲ್ಲಿ ರಾಜರು ಮಾರು ವೇಷವನ್ನು ಧರಿಸಿ ಜನರ ಕಷ್ಟ ದುಮ್ಮಾನುಗಳನ್ನ ಆಲಿಸುವ ಪರಿಸ್ಥಿತಿ ಅಂದು ಇತ್ತು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜನರಿಂದ ಜನರಿಗೋಸ್ಕರ ಆಯ್ಕೆ ಆದಂತಹ ಶಾಸಕರುಗಳು ಇಂದು ಸರ್ಕಾರದ ಜನಪರ ಜನತಾದರ್ಶನ ಕಾರ್ಯಕ್ರಮ ಮಾಡುವ ಮೂಲಕ ಮಧ್ಯವರ್ತಿಗಳ ನಿರ್ಮೂಲನೆ ಮಾಡಿ ನೇರವಾಗಿ ಜನರಿಗೆ ಅಧಿಕಾರಿಗಳ ಮೂಲಕ ಕೆಲಸ ಕಾರ್ಯವನ್ನು ಮಾಡಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ರವರು ಜನತಾದರ್ಶನ ಕಾರ್ಯಕ್ರಮ ಕುರಿತು ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನಪರ ಕಾಳಜಿ ಇಟ್ಟುಕೊಂಡು ಜನತಾದರ್ಶನದ ಮೂಲಕ ಜನರ ಮನೆ ಬಾಗಿಲಿಗೆ ಅಧಿಕಾರಿಗಳೇ ತೆರಳಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕೆಂದು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಗೊಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದುರು. ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಜಾಗದಸಿಗದೆ ಕಾಮಗಾರಿ ಕುಂಠಿತಗೊಂಡಿತ್ತು, ಈಗ 4 ಎಕರೆ ಜಾಗ ಸಿಕ್ಕಿದೆ ಸಾರ್ವಜನಿಕರು ಭಯಪಡುವ ಆತಂಕ ಬೇಡ ಎಂದು ತಿಳಿಸಿದರು.
ಶಾಸಕರಾದ ಡಿ ಜಿ ಶಾಂತನಗೌಡ್ರು ಅವರು ಜನತಾದರ್ಶನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನ್ಯಾಮತಿ ತಾಲೂಕಿನ ಪ್ರಥಮವಾಗಿ ಗುಡ್ಡಹಳ್ಳಿ ಗ್ರಾಮದಲ್ಲಿ ಜನತಾದರ್ಶನ ಯಶಸ್ವಿಯಾಗಿ ನಡೆದಿತ್ತು. ಇಂದಿನ ದಿವಸ ಎರಡನೇ ಜನತಾದರ್ಶನ ಕಾರ್ಯಕ್ರಮವನ್ನು ಗೋವಿನಕೋವಿ ಗ್ರಾಮದಲ್ಲಿ ನಡೆಯುತ್ತಿದೆ, ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದಂತಹ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳಿಗೂ ಈ ಕಡೆ ಭಾಗದ ಜನಪ್ರತಿನಿಧಿಗಳಿಗೂ ಸಾರ್ವಜನಿಕರಿಗೂ ಕಾರ್ಯಕ್ರಮಕ್ಕೆ ಯಶಸ್ಸುಗೊಳಿಸಲಿಕ್ಕೆ ಕಾರಣೀಬೂತರಾದ ತಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿ, ಸುಮಾರು 55 ದಿನಗಳಿಂದ ಮಳೆಬಾರದೇ ರಾಜ್ಯವೇ ಬರಗಾಲ ಎದುರಿಸುತ್ತಿದೆ,
ರಾಜ್ಯ ಸರ್ಕಾರ ಹೊನ್ನಾಳಿಮತ್ತು ನ್ಯಾಮತಿ ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಿದೆ ಬಿತ್ತಿದಂತ ಬೆಳೆಗಳು ಮಳೆ ಇಲ್ಲದೆ ಬೆಳೆ ಬಾರದೆ ಒಣಗಿರುವ ಬೆಳೆಗಳನ್ನು ರಾಜ್ಯ ಸರ್ಕಾರ ಸಮೀಕ್ಷೆ ಮಾಡಿಸಿ, ವರದಿ ಅಧಿಕಾರಿಗಳಿಂದ ತರಿಸಿಕೊಂಡಿದೆ ಹಾಗಾಗಿ ಯಾರು ಕೂಡ ಭಯ ಪಡುವ ಅವಶ್ಯಕತೆ ಇಲ್ಲ ನೂರಕ್ಕೆ ನೂರರಷ್ಟು ಬೆಳೆ ಪರಿಹಾರ ರೈತರಿಗೆ ಸಿಗುತ್ತದೆ ಎಂದು ಆತ್ಮಸ್ಥೈರ ತುಂಬಿದರು.
ರೈತರಿಗೆ ಹಗಲು-3 ಗಂಟೆ ರಾತ್ರಿ 2 ಗಂಟೆ ಪಂಪಶಟ್ ಗಳಿಗೆ ಇಲಾಖೆಯಿಂದ ವಿದ್ಯುತ್ ನೀಡಲಾಗುತ್ತಿದೆ ಎಂದರು. ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಲವಾರು ಇಲಾಖೆಗಳ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಡತಗಳು ಬಂದಿದ್ದವು ಅದನ್ನು ಅಧಿಕಾರಿಗಳು ತಕ್ಷಣವೇ ಸ್ಪಂದಿಸುವ ಕೆಲಸ ಮಾಡಿದರು. ಕೆಲವೊಂದು ವಿಲೇವಾರಿ ಆಗದೆ ಇರುವು ಪ್ರಕರಣಗಳನ್ನು ಸಮಯ ತೆಗೆದುಕೊಂಡು ನಂತರ ಮಾಡುತ್ತೇವೆ ಎಂದು ಶಾಸಕರ ಎದುರುಗಡೆ ಸಾರ್ವಜನಿಕರಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೆÇೀಷಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಶಿಬಿರ ಏರ್ಪಡಿಸಲಾಗಿತ್ತು. ಪೆÇೀಷಣ ಅಭಿಯಾನ ಯೋಜನೆಯಲ್ಲಿ 9 ಜನ ಮೊದಲನೇ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು. ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಆಯ್ಕೆಗೂಂಡ 6 ಮಕ್ಕಳುಗಳಿಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಂದ ಪಾಸ್ ಬುಕ್ ವಿತರಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಗೋವಿಂದಪ್ಪ ಎಚ್ ಬಿ, ಪೆÇಲೀಸ್ ಇನ್ಸ್ಪೆಕ್ಟರ್ ರವಿ ಎನ್ ಇ, ಇಇಒ ರಾಘವೇಂದ್ರ ಎಚ್, ಸಿಡಿಪಿಓ ಮಹಾಂತ ಸ್ವಾಮಿ ಪೂಜಾರ್, ಎಸಿಡಿಪಿಓ ಫಾತಿಮಾ, ಗೋವಿನಕೋವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಾನೇಶ್, ಉಪಾಧ್ಯಕ್ಷರಾದ ಶಶಿಕಲಾ ನಟರಾಜ್, ಸರ್ವ ಗ್ರಾಮ ಪಂಚಾಯಿತಿ ಸದಸ್ಯರುಗಳು, ಹಾಗೂ ರುದ್ರೇಶ್ ಬಿ ಹೆಚ್, ಆರ್ ಐ ಸಂತೋಷ್, ಪಿಡಿಒಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು, ಫಲಾನುಭವಿಗಳು, ಸಾರ್ವಜನಿಕರು ಶಾಲಾ ಸಿಬ್ಬಂದಿ ವರ್ಗದವರು ಗೋವಿನಕೋವಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.