ನ್ಯಾಮತಿ: ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲೂಕು ವಾಲ್ಮೀಕಿ ಸಮಾಜದ ಸಂಯುಕ್ತಆಶ್ರಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಮಹಾಂತೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಆಚರಿಸಲಾಯಿತು.
ಪಟ್ಟಣದಲ್ಲಿರುವ ಬೇಡರ ಕಣ್ಣಪ್ಪ ದೇವಸ್ಥಾನದಿಂದ ಟ್ರ್ಯಾಕ್ಟರ್‍ನಲ್ಲಿ ವಾಲ್ಮೀಕಿ ಪುತ್ತಳಿ ಇಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ಹಲಗೆ, ತಮಟೆ, ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಪಕ್ಷಾತೀತವಾಗಿ ಮೆರವಣಿಗೆ ಮೂಲಕ ತಾಲೂಕ್ ಆಡಳಿತದ ಕಚೇರಿಯವರೆಗೆ ತೆರಳಿ ಪುನಃ ಸಭೆ ನಡೆಯುವ ಸ್ಥಳದವರೆಗೆ ಬಂದು ಸ್ಟೇಜನಲ್ಲಿ ಪುತ್ತಳಿಯನ್ನು ಇಟ್ಟು ಸಬೆ ಕಾರ್ಯಕ್ರಮ ಪ್ರಾರಂಭವಾಯಿತು.
ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಅವರು ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಮತ್ತು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಪ್ರಾಸ್ತಾವಿಕ ನುಡಿಯನ್ನು ತಹಸಿಲ್ದಾರ್ ಎಚ ಬಿ ಗೋವಿಂದನಪ್ಪನವರು ಉದ್ದೇಶಿಸಿ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ಬರೆದು ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಸೀಗೇ ಹುಣ್ಣಿಮೆಯಂದು ಅವರ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಹೇಳುತ್ತಾ, ವಾಲ್ಮೀಕಿ ಸಮಾಜ ತಲೆಯೆತ್ತು ನಡೆಯುತ್ತಿದೆ ಎಂದರೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆಶೀರ್ವಾದದಿಂದ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಕುಂಕುಗ್ರಾಮದ ಸಮಾಜದ ಮುಖಂಡ ಜೀವಿಶಪ್ಪನವರು ನ್ಯಾಮತಿ ತಾಲೂಕಿಗೆ ತಹಶೀಲ್ದರಾಗಿ ಹೆಚ್ ಬಿ ಗೋವಿಂದಪ್ಪನವರನ್ನ ತಂದು ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಹೇಳಿದಾಗ ಸಭೆಯಲ್ಲೇ ತಹಸಿಲ್ದಾರ್ ಗೋವಿಂದಪ್ಪನವರು ಎದ್ದು ಬಂದು ಮಾನ್ಯ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ನನ್ನನ್ನು ಮಗನ ರೀತಿ ಕಾಣುತ್ತಿದ್ದಾರೆ, ನನ್ನ ಜೀವನದ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದೇನೆ ಇಂಥ ವ್ಯಕ್ತಿಯನ್ನು ನಾನು ಜೀವನದಲ್ಲಿ ಕಾಣಲಿಕ್ಕೆ ಸಾಧ್ಯ ಇಲ್ಲ ಎಂದು ಸಭಿಕರ ಮುಂದೆ ಹೇಳಿದರು.
ಮಹರ್ಷಿ ವಾಲ್ಮೀಕಿ ಋಷಿಯ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸವನ್ನು ಉಪನ್ಯಾಸಕರಾದ ಶಿವಮೊಗ್ಗದ ಬಸವರಾಜಪ್ಪನವರು ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಸಬಿಕರ ಮುಂದೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಶಾಸಕ ಡಿ ಜಿ ಶಾಂತನಗೌಡ್ರು ರಾಜ್ಯದಲ್ಲಿ ರಾಜ್ಯ ಸರ್ಕಾರದಿಂದ 133 ಜಯಂತಿಯನ್ನು ಆಚರಿಸುತ್ತೇವೆ, ಅದರಲ್ಲಿ ವಿಶೇಷವಾಗಿ ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಇಂತಹ ಮಹಾನ್ ನಾಯಕರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದಾಗ ಮಾತ್ರ ಅವರಿಗೆ ಗೌರವ ತಂದು ಕೊಟ್ಟಂತಾಗುತ್ತದೆ ಎಂದು ತಿಳಿಸಿ.
ಮಹರ್ಷಿ ವಾಲ್ಮೀಕಿ ಅವರು ರಾಮಾಯಾಣದಲ್ಲಿ 23,000 ಸಂಸ್ಕøತದಲ್ಲಿ ಶ್ಲೋಕಗಳನ್ನು ಬರೆದು ಕೊಟ್ಟಿದ್ದು ಸೂರ್ಯ, ಚಂದ್ರ, ವಾಯು, ಅಗ್ನಿ, ಯಾವ ರೀತಿ ಸೃಷ್ಟಿಯಾಗಿದೆಯೋ ಅದೇ ರೀತಿ ಭಗವಂತನೇ ಮಹರ್ಷಿ ವಾಲ್ಮೀಕಿಯನ್ನು ಸೃಷ್ಟಿ ಮಾಡಿ ಆಗಿನ ಕಾಲದ ಮಹಾಜ್ಞಾನಿ ದೇವತಾ ಮಾನವನಿಂದ ಮಾತ್ರ ಇಂತಹ ವiಹಾತ್ಕಾರ್ಯ ಮಾಡಲಿಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ನ್ಯಾಮತಿ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಬೇಕೆಂದು ಸಾರ್ವಜನಿಕರು ಬೇಡಿಕೆ ಇಟ್ಟರು. 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದಿನ ಸಂದರ್ಭದಲ್ಲಿ ರಾಜ್ಯದಲ್ಲಿ ಬಡವರಿಗೆ, ದೀನದಲಿತರಿಗೆ, ಆಹಾರದಿಂದ ನರಳಬಾರದು ಎಂದು ಸದುದ್ದೇಶದಿಂದ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದ್ದರು. ನಂತರ ನಮ್ಮ ಸರ್ಕಾರ ಹೋದ ಮೇಲೆ ಅದು ನಿಲುಗಡೆಯಾಗಿತ್ತು. ಈಗ ನಮ್ಮ ಸರ್ಕಾರ ಬಂದಿದೆ ಮುಖ್ಯಮಂತ್ರಿಗಳು ಸಿದ್ರಾಮಯ್ಯನವರೇ ಆಗಿದ್ದಾರೆ ಹಾಗಾಗಿ ನ್ಯಾಮತಿ ಮತ್ತು ಹೊನ್ನಾಳಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನನ್ನು ತೆರೆಯುವ ಕೆಲಸ ಮಾಡುತ್ತವೆ ಎಂದು ಸಭೆಯಲ್ಲಿ ಹೇಳಿದರು.
ಸಮಾಜದ ವತಿಯಿಂದ ಶಾಸಕ ಡಿಜಿ ಶಾಂತನಗೌಡ್ರುರವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಉಪತಹಿಸಿಲ್ದಾರ್ ನಾಗರಾಜಪ್ಪ, ಇಇಒ ರಾಘವೇಂದ್ರ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್, ಪೆÇಲೀಸ್ ಇನ್ಸ್ಪೆಕ್ಟರ್ ರವಿ ಎನ್ ಇ, ಸಿಡಿಪಿಓ ಮಹಾಂತ ಸ್ವಾಮಿ ಪೂಜಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಹಿಂದುಳಿದ ವರ್ಗದ ಅಧಿಕಾರಿ ಮೃತ್ಯುಂಜಯ ಸ್ವಾಮಿ, ಸಮಾಜದ ಅಧ್ಯಕ್ಷ ಸೋಮಣ್ಣ, ಗೌರವಾಧ್ಯಕ್ಷ ಜಿವೆಶಪ್ಪ, ಕಾಂಗ್ರೆಸ್ ಮುಖಂಡರಾದ ಷಣ್ಮುಖಪ್ಪ ರುದ್ರೇಶ್, ವಾಲ್ಮೀಕಿ ಸಮಾಜದ ಮುಖಂಡರುಗಳು ಮತ್ತು ಮಹಿಳೆಯರು ಜನಪ್ರತಿನಿಧಿಗಳು ತಾಲೂಕ್ ಮಟ್ಟದ ಅಧಿಕಾರಿಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *