ನ್ಯಾಮತಿ: ಪಟ್ಟಣದಲ್ಲಿ ಇಂದು ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಅದ್ದೂರಿಯಾಗಿ 68ನೇ ಕನ್ನಡ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ತಾಲೂಕು ತಹಶೀಲ್ದಾರ್ ಎಚ್ ಡಿ ಗೋವಿಂದಪ್ಪ ರವರು ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಕಸಾಪ ಕಚೇರಿಗೆ ತೆರಳಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖೇನ ನೆರವೇರಿಸಿದರು.
ಪಟ್ಟಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಿಂದ ಭುವನೇಶ್ವರಿ ಭಾವಚಿತ್ರವನ್ನು ವಾಹನದಲ್ಲಿ ಕುಳ್ಳರಸಿಸಿಕೊಂಡು ಅರಳಿಕಟ್ಟೆ ವೃತ್ತದಿಂದ ಡೊಳ್ಳು ಕುಣಿತ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕಲಾವಿದರ ತಂಡದೊಂದಿಗೆ ಕನ್ನಡಾಂಬೆಯ ಜೈಕಾರದೊಂದಿಗೆ ಗಾಂಧಿ ರಸ್ತೆಯ ಮುಖಾಂತರ ಎಪಿಎಂಸಿ ಆವರಣಕ್ಕೆ ಮೆರವಣಿಗೆ ಸಾಗಿತು. ಎಪಿಎಂಸಿ ಅವರಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕರಾದ ಡಿ ಜಿ ಶಾಂತನಗೌಡ್ರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನ ನೇತೃತ್ವದ ಸರ್ಕಾರ ಕರ್ನಾಟಕ ಎಂಬ ನಾಮಕರಣವನ್ನು ರಾಜ್ಯಕ್ಕೆ ಇಟ್ಟು ಇಂದಿಗೆ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ನಮ್ಮ ಸರ್ಕಾರದ ಯೋಜನೆಯಾಗಿದೆ ಅದೇ ರೀತಿ ಆ ಕಾರ್ಯಕ್ರಮ ಕೂಡ ಇಂದು ಯಶಸ್ವಿಯಾಗಿ ನಡೆಯಿತು. ನಮ್ಮ ಸರ್ಕಾರ ಕನ್ನಡಬಾಷೆ, ನೆಲ, ಜಲಕ್ಕೆ, ಧಕ್ಕೆ ಆಗುತ್ತದೆ ಎಂದು ಕಂಡು ಬಂದರೆ ಕನ್ನಡ ಸಂಘಟನೆಗಳು ಜೊತೆಗೂಡಿ ಕನ್ನಡ ಭಾಷೆಗೆ ದಕ್ಕೆಯಾಗದೇ ರೀತಿ ನಮ್ಮ ಸರ್ಕಾರ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಾಸ್ತವಿಕ ನುಡಿಯನ್ನ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಸಭೆ ಕುರಿತು ಮಾತನಾಡಿ ನೂರಾರು ಜಾತಿಗಳು ನಮ್ಮ ರಾಜ್ಯದಲ್ಲಿ ವಾಸವಾಗಿದ್ದರೂ ಸಹ ಜಾತ್ಯತೀತವಾಗಿ ಕನ್ನಡ ಭಾಷೆ ಪ್ರೀತಿ ಮಾಡುವಂತರಾಗಬೇಕು. ಅನ್ಯ ಭಾಷಿಗರು ಕನ್ನಡಿಗರಿಗೆ ಅವಮಾನ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸಲಿಕ್ಕೆಸಾಧ್ಯ ಇಲ್ಲ ಎಂದು ತಿಳಿಸಿ ಇಂದಿನ ಕಾರ್ಯಕ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೂ, ಕನ್ನಡಪರ ಸಂಘಟನೆಗಳಿಗೂ ತಾಲೂಕು ಮಟ್ಟದ ಅಧಿಕಾರಿಗಳಿಗೂ ರಾಜ್ಯೋತ್ಸವ ಶುಭಾಶಯ ಕೋರಿದರು.ಶಾಸಕರಾದ ಡಿ ಜಿ ಶಾಂತನಗೌಡ್ರು ಸೇರಿದಂತೆ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರುಗಳಿಗೆ ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಗಣೇಶರಾವ್ ,ಕಸಾಪ ಅಧ್ಯಕ್ಷ ಡಿ ಎಂ ಹಾಲರಾಧ್ಯ, ಪಿಎಸ್‍ಐ ಜಯನಾಯ್ಕ ನವಲೆ ಗಂಗಾಧರ್, ಕನ್ನಡ ರಾಜ್ಯೋತ್ಸವ ಉಪನ್ಯಾಸ ನೀಡಿದ ಕವಿರಾಜ್ ತಾಲೂಕ್ ಮಟ್ಟದ ಅಧಿಕಾರಿ ವರ್ಗದವರು ಕಂದಾಯ ಇಲಾಖೆ ಸಿಬ್ಬಂದಿಗಳು ಕನ್ನಡ ವಿವಿಧಪುರ ಸಂಘಟನೆಗಳು ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.