ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಾಲೂಕಿನ ಮಾದನಬಾವಿ ರೈತರ ಜಮೀನುಗಳಿಗೆ ತೆರಳಿ ಬರಪೀಡಿತ ಸ್ಥಳವನ್ನು ವೀಕ್ಷಣೆ ಮಾಡಿ ಪರಿಶೀಲಿಸಿದರು.
ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ಬರವೀಕ್ಷಣೆ ಮಾಡಿದ ನಂತರ ದಾನೇಹಳ್ಳಿ ಗ್ರಾಮದ ವಾಸಿ 24 ವರ್ಷದ ಯುವಕ ಎರೆಕಟ್ಟೆ ಕಲ್ಲೇಶಪ್ಪನವರ ಪುತ್ರ ನಾಗರಾಜ್ ಒಂದು ತಿಂಗಳ ಹಿಂದೆ ಮುಂಗಾರಿನ ಸಮಯದಲ್ಲಿ ಜಮೀನಿನಲ್ಲಿ ಬಿತ್ತಿ ಬೀಜ ಮಳೆಯಬಾರದೇ ಬೆಳೆಯು ಕೈಗೆ ಸಿಗದೆ ಎದೆಗುಂದಿ ಯುವಕ ಸಾಲಕ್ಕೆ ಎದುರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ತಿಳಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತಂಡ ಮರಣ ಹೊಂದಿದ ರೈತರ ಮನೆಗೆ ತೆರಳಿ ಅವರ ತಂದೆ ತಾಯಿ ಅವರಿಗೆ ಸಾಂತ್ವಾನ ಹೇಳಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು.
ಸ್ಥಳದಲ್ಲೇ ಸಂಸದ ಜಿ ಎಂ ಸಿದ್ದೇಶ್ವರ್ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ, ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಫೆÇೀನಿನ ಮೂಲಕ ಕರೆ ಮಾಡಿ, ಸರ್ಕಾರದಿಂದ ಬರುವಂತಹ 5 ಲಕ್ಷ ಹಣ, ರಾಜ್ಯ ಸರ್ಕಾರದ ಒಂದು ಲಕ್ಷ,,ಕೇಂದ್ರ ಸರ್ಕಾರದ್ದು 4 ಲಕ್ಷ ಹಣವನ್ನು ತತಕ್ಷಣ ರೈತರ ಕುಟುಂಬಕ್ಕೆ ಪರಿಹಾರವನ್ನು ಕೊಡಬೇಕು ಎಂದು ಅಧಿಕಾರಿಗೆ ಸೂಚಿಸಿದರು.
ಉದಯವಾಣಿ ಪತ್ರಿಕೆ ವರದಿಗಾರ ಅರವಿಂದ ಎಸ್ ರವರ ಪ್ರಶ್ನೆಗೆ ಉತ್ತರಿಸಿದ ಜಿ ಎಂ ಸಿದ್ದೇಶ್ ರೈತರ ಜಮೀನಿನಲ್ಲಿ ಬೆಳೆಯು ಬಾರದೆ ರೈತರು ಕಂಗಾಲಾಗಿದ್ದಾರೆ ತಕ್ಷಣ ರಾಜ್ಯ ಸರ್ಕಾರ ಹಾಳಾದ ಬೆಳೆಗಳು ಕೈ ಸಿಗದಂತಾಗಿದೆ ಆದ ಕಾರಣ ರಾಜ್ಯ ಸರ್ಕಾರ ತಕ್ಷಣ ಕೊಡಬೇಕು. ಕೇಂದ್ರ ಸರ್ಕಾರದಿಂದ ಕೊಡೋ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದರು.
ಜಿಲ್ಲಾಧ್ಯಕ್ಷರಾದ ಅನವಾಡಿ ವೀರೇಶ್ , ಹರಿಹರ ಶಾಸಕ ಬಿಪಿ ಹರೀಶ್, ದಾವಣಗೆರೆ ಬಿಜೆಪಿ ವಿಭಾಗದ ಪ್ರಭಾವಿ ಕೆಎಚ್ ನವೀನ್, ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ ಪೆÇ್ರಫೆಸರ್ ಲಿಂಗಣ್ಣ, ಜಗದೀಶ್ ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಮಾಜಿ ಬಿಜೆಪಿ ಮಂಡಲದ ಅಧ್ಯಕ್ಷ ಎ ಬಿ ಹನುಮಂತಪ್ಪ ಕೆ ವಿ ಚನ್ನಪ್ಪ, ಸಿಕೆ ರವಿ, ನಟರಾಜ್, ಸಿದ್ದೇಶ್, ಅಜಯ್ ರೆಡ್ಡಿ ಇನ್ನು ಮುಂತಾದ ಪಕ್ಷದ ಕಾರ್ಯಕರ್ತರು ಮುಖಂಡರು ಸಹ ಭಾಗಿಯಾಗಿದ್ದರು.