ನ್ಯಾಮತಿ: ವ್ಯವಸಾಯದಲ್ಲಿ ಹೊಸದು ಏನಾದರೂ ಮಾಡಬೇಕು ಎಂಬ ಆಸೆಯಿಂದ ಅಡಕೆ ತೋಟದಲ್ಲಿ ಏಲಕ್ಕಿ ಗಿಡಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಲು ಹೊರಟ ರೈತರುಅಪರಿಚಿತರಿಂದ ವಂಚನೆಗೊಳಗಾದ ಪ್ರಕರಣ ತಾಲ್ಲೂಕಿನಲ್ಲಿ ನಡೆದಿದೆ.
ಏಲಕ್ಕಿ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ.ನೀವು ಏಲಕ್ಕಿ ಬೆಳೆದು ಲಾಭ ಗಳಿಸಬಹುದು ಎಂದು ರೈತರಿಗೆ ನಂಬಿಸಿ.ಒಂದು ಗಿಡಕ್ಕೆರೂ. 88ರಂತೆ ರೈತರಿಗೆ ಸಸಿಗಳನ್ನು ಮಾರಾಟ ಮಾಡಿ, ಅವುಗಳ ಪೋಷಣೆ ಬಗ್ಗೆ ವಾರಕ್ಕೆ ಒಮ್ಮೆ ಬಂದು ಮಾರ್ಗದರ್ಶನ ನೀಡುತ್ತೇವೆ. ಒಂದುಗಿಡ 3 ಕೆ.ಜಿ. ಏಲಕ್ಕಿ ಕೊಡುತ್ತದೆ. ಒಂದು ಕೆಜಿಗೆರೂ.3 ಸಾವಿರ ಬೆಲೆ ಇದೆ. ಶಿವಮೊಗ್ಗ ಮತ್ತು ಸಕಲೇಶಪುರದಲ್ಲಿ ಏಲಕ್ಕಿ ಮಾರುಕಟ್ಟೆ ಇದೆ ಎಂದು ನಂಬಿಸಿ ಸುತ್ತಮುತ್ತಲ ಗ್ರಾಮಗಳ 14 ಜನರೈತರಿಗೆ 300 ರಿಂದ 500 ಸಸಿಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದಾರೆ.
ಸಸಿಗಳನ್ನು ನೆಟ್ಟು ಒಂದು ತಿಂಗಳಾದರೂ ಒಂದು ಗಿಡವು ಮೊಳಕೆ ಬಂದಿಲ್ಲ. ಆರೈಕೆ ಮಾಡಿದರೂ ಒಣಗಿ ಹೋಗಿದ್ದರಿಂದ ಆತಂಕಗೊಂಡು ಸಸಿ ಕೊಟ್ಟವರ ಮೊಬೈಲ್‍ಗೆಕರೆ ಮಾಡಿದರೆ ಅಸಡ್ಡೆಯ ಉತ್ತರ ನೀಡಿ ಕೊನೆಗೆ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದಾರೆ.ರೈತರಿಗೆ ವಂಚಿಸಿರುವ ರುದ್ರೇಶ,ಶ್ರೀನಿವಾಸ, ರೂಪ್ಲನಾಯ್ಕ, ಮದನ್ ಮತ್ತುಓಂಕಾರ ಎಂಬುವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಂಚನೆಗೊಳಗಾದ ರೈತರಾದ ಕೆ. ಶಿವಕುಮಾರ, ಬಿ.ವಿ.ಸತೀಶ, ಗಾಯತ್ರಮ್ಮ ಒಳಗೊಂಡಂತೆ 14 ಜನರುದೂರು ನೀಡಿದ್ದಾರೆ.
ನಕಲಿ ಏಲಕ್ಕಿ ಸಸಿಗಳನ್ನು ಪಡೆದು ನಾನು ಸಹ ಹಣ ಕಳೆದುಕೊಂಡಿದ್ದೇನೆ ಎಂದು ಹಸಿರುಸೇನೆ ರೈತ ಸಂಘಟನೆಯ ಮುಖಂಡ ಸಾಲಬಾಳು ಎಸ್.ಎನ್.ಗೋಪಾಲನಾಯ್ಕ ತಿಳಿಸಿದರು.