ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ದೀಪಾವಳಿಯ ವರ್ಷದಹೊಡ್ಕು ದಿನದ ಅಂಗವಾಗಿ ರಾಮದೇವರು, ತಿಮ್ಮೇಶ್ವರ, ದೊಡ್ಡಯ್ಯ, ಕರಿದೇವರು, ಮರಿಯಮ್ಮದೇವಿ ಈ ಎಲ್ಲಾ ದೇವರುಗಳ ಮೂರ್ತಿಗಳನ್ನು ಗ್ರಾಮದ ಅರಳಿಕಟ್ಟೆ ಸ್ಥಳದಲ್ಲಿ ಒಟ್ಟಾಗಿ ಕುಳ್ಳಿರಿಸಿ ಪೂಜೆ ನೆರವೇರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ವರ್ಷದೊಡ್ಕು ದಿನದಂದು ಬೆಳಗಿನ ಜಾವ ಐದು ಗಂಟೆಗೆ ಅರಳಿಕಟ್ಟೆಯಲ್ಲಿ ಉತ್ಸವ ಮೂರ್ತಿಗಳನ್ನು ಕೂರಿಸಿ ದೇವರುಗಳಿಗೆ ಹಣ್ಣು ಕಾಯಿ ಮಾಡಿಸಿ ಹರಕೆ ಕಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಬಂದು ಪೂಜೋತ್ಸವ ನೆರವೇರಿಸಿದ ನಂತರ ಆಯಾಯ ದೇವರುಗಳು ಪಲ್ಲಕ್ಕಿ ಉತ್ಸವದೊಂದಿಗೆ ಮೂಲ ಸ್ಥಳಗಳಿಗೆ ಹೋಗಿ ಗದ್ದಿಗೆಗೊಂಡವು ಎಂದು ಗ್ರಾಮದ ಮುಖಂಡ ರಮೇಶ್ ಪಟೇಲ ತಿಳಿಸಿದರು. ಊರಿನ ಗ್ರಾಮಸ್ಥರು ಸುತ್ತಮುತ್ತಲಿನ ಭಕ್ತಾದಿಗಳು ಧರ್ಮದ ಕಾರ್ಯದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *