ನ್ಯಾಮತಿ: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಶುಕ್ರವಾರ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕ ಓದುವ ಹಾಗೂ ಗ್ರಂಥಾಲಯದ ನಂಟು ಬೆಳೆದರೆ ಆ ವಿದ್ಯಾರ್ಥಿ ಜ್ಞಾನದ ಹೂರಣವನ್ನೇ ಹೊಂದಬಲ್ಲ ಎಂದು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಅತಿ ಹೆಚ್ಚು ಗ್ರಂಥಗಳನ್ನು ಓದಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇದು ಭಾರತದ ಹೆಮ್ಮೆ ಎಂದರು.
ತಾಲ್ಲೂಕಿನವರಾದ ನಿಘಂಟು ಪ್ರಭಣ್ಣ, ಜಲತರಂಗ ಬಿ.ದೇವೇಂದ್ರಪ್ಪ, ಎಚ್.ಆರ್.ದೇವಿರಪ್ಪ, ಎಚ್.ಎಸ್.ರುದ್ರಪ್ಪ, ತಿಪ್ಪೇರುದ್ರಸ್ವಾಮಿ, ಸಾಹಿತಿ ಜೀನಹಳ್ಳಿ ಸಿದ್ದಲಿಂಗಪ್ಪ, ಸಂಶೋಧಕ ಕುರುವ ಬಸವರಾಜ ಹಾಗೂ ಬೆಳಗುತ್ತಿ ಅರಸರ ಬಗ್ಗೆ ತಿಳಿಸಿದರು.
ಗ್ರಂಥಪಾಲಕ ಜಿ.ಆರ್.ರಾಜಶೇಖರ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ಪುಸ್ತಕಗಳ ಪ್ರದರ್ಶನ ಕುರಿತು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಟಿ.ಎಸ್.ಭಾರತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಕೃಷಿಗೆ ಆಧ್ಯತೆ ನೀಡಬೇಕು. ಸಾಹಿತ್ಯ ಪುಸ್ತಕಗಳನ್ನು ಓದುವುದರ ಮೂಲಕ ಸಾ-ಹಿತವನ್ನು ಹೊಂದಬೇಕು ಎಂದರು.
ಕಸಾಪ ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಅಧ್ಯಾಪಕರಾದÀ ಜಿ.ಪಿ.ರಾಘವೇಂದ್ರ, ರೇವಣಸಿದ್ದಪ್ಪ, ಸಂಗಮೇಶ ಔರಸಂಗ, ಬಸವರಾಜ, ಸಿದ್ದಲಿಂಗಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *