ನ್ಯಾಮತಿ: ತಾಲೂಕು ಕೊಡಚಕೊಂಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಪಸಂಖ್ಯಾತ ವಸತಿಯುತ ಶಾಲೆಗೆ ಒಂದು ಕೋಟಿ 50 ಲಕ್ಷ ವೆಚ್ಚದ ಕಾಂಪೌಂಡ್ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು ಸ್ಥಳ ವೀಕ್ಷಣೆಯನ್ನು ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ತಹಸಿಲ್ದಾರ್ ಗೋವಿಂದಪ್ಪ ಹೆಚ್ ಬಿ, ತಾಲೂಕು ಭೂಮಾಪನ ಅಧಿಕಾರಿ ಸುರೇಶ್, ಅರಮಗಟ್ಟೆ ರಮೇಶ್ ಶೇಖರಪ್ಪ, ಬಲರಾಮಣ್ಣ ಇನ್ನು ಮುಂತಾದವರು ಸಹ ಉಪಸ್ಥಿತಿಯಲ್ಲಿದ್ದರು.