ನ್ಯಾಮತಿ: ಜಾಗತಿಕ ಲಿಂಗಾಯತ ಮಹಾಸಭಾ ನ್ಯಾಮತಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಯರಗನಾಳ್ ಎಚ್. ಮಹೇಶ್ವರಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಮಾದನಬಾವಿ ನಂಜಪ್ಪಗೌಡರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಪದಾಧಿಕಾರಿಗಳಾಗಿ ನಂಜಪ್ಪಗೌಡ ಗೌರವಾಧ್ಯಕ್ಷ, ಉಪಾಧ್ಯಕ್ಷರಾಗಿ ಜಿ.ಮೇಘರಾಜ, ಎಸ್.ಆರ್.ವೀರೇಂದ್ರ, ಎ.ನಾಗರಾಜಪ್ಪ, ಎಚ್.ಎಂ.ವಿನಯ.ಆರುಂಡಿ ಪಿ.ಜಿ. ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾಗಿ ಎಂ.ಎಚ್.ಬಸವರಾಜಪ್ಪ, ಪಿ.ಆರ್.ಪ್ರವೀಣ, ಕೆ.ಚೇತನಕುಮಾರ, ಬಿ.ಎನ್.ಸತೀಶ, ಮಧು, ದನ್ಯಕುಮಾರ, ಎಂ.ಕರಿಬಸಪ್ಪ,
ಎಸ್.ವೈ.ಪ್ರಕಾಶ, ಡಿ.ಪಿ.ರಂಗನಾಥ ಖಜಾಂಚಿ ಹಾಗೂ ಸದಸ್ಯರುಗಳಾಗಿ ಮಲ್ಲಿಕಾರ್ಜುನ, ಟಿ.ಎಂ.ಪ್ರಕಾಶ,ಎಸ್.ಜಿ.ಬಸವರಾಜಪ್ಪ, ಚನ್ನಪ್ಪ, ಸಿ.ಕೆ.ಸುರೇಶ,ಎ.ಮಹೇಶ,ಎಸ್.ಪಿ.ಮಹೇಶ, ಬಿ.ವಿ.ಚಂದ್ರು ಆಯ್ಕೆಯಾಗಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಧೇಯ್ಯೋದ್ದೇಶಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ, ತಾಲ್ಲೂಕು ಘಟಕವನ್ನು ರಚಿಸಲಾಗಿದೆ ಎಂದು ನೂತನ ಅಧ್ಯಕ್ಷ ಎಚ್.ಮಹೇಶ್ವರಪ್ಪ ತಿಳಿಸಿದರು.