ನ್ಯಾಮತಿ ಃ ತಾಯಿಯೇ ಮೊದಲ ಗುರು ಮನೆಯೆ ಮೊದಲ ಪಾಠ ಶಾಲೆ ತಾಯಿಯ ಸಂಸ್ಕಾರದಿಂದ ಮಾತ್ರ ವ್ಯಕ್ತಿ ,ಕುಟುಂಬ ನಾಡಿನ ಸಂಸ್ಕಾರವಂತ ಪ್ರಜೆ ಆಗಲು ಸಾಧ್ಯ ಇದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜೀ ಹೇಳಿದರು.
ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಗುರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸವಳಂಗ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ರಾಮೇಶ್ವರಗ್ರಾಮದ ವತಿಯಿಂದ ನಡೆದ ಸಾಮೂಹಿಕ ಸತ್ಯ ನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಯಾವ ಮನೆಯಲ್ಲಿ ಮಹಿಳೆ ಮನೆಯ ಅಭ್ಯೂಯದ್ಯಕ್ಕೆ ದುಡಿಯುತ್ತಾಳೋ ಆ ಮನೆ ಮನೆ ಅಭಿವೃದ್ಧಿ ಸಾಧ್ಯ ಇದ್ದು ತಾಯಿತಮ್ಮ ಮಕ್ಕಳನ್ನ ಸಂಸ್ಕಾರ ವಂತರಾಗಿಸುವ ಜವಬ್ದಾರಿ ಇದೆ ಇಂದಿನ ದಿನಮಾನಗಳಲ್ಲಿ ಜನರು ಆರ್ಥಿಕ ಸುಧಾರಣೆ ಆಗಿದ್ದಾರೆ ಆದರೆ ನೈತಿಕ ನೆಲಗಟ್ಟು ಕುಸಿದಿದೆ .ಎಂದರು.
ಮದ್ಯಪಾನದಿಂದ ಹಲವಾರು ಕುಟುಂಬಗಳು ಹಾಳಾಗುತ್ತಿದ್ದು ಸರ್ಕಾರ ಅದರ ಅರಿವಿದ್ದರು ಆದಾಯ ಕ್ಕೆಜೊತು ಬಿದ್ದು ನಿಷೇಧ ಮಾಡದ ಇರುವುದುದು ರ್ದೈವದ ಸಂಗತಿ. ಮಹಿಳೆಯರು ಮದ್ಯಪಾನ ನಿಷೇಧತ್ತ ಹೋರಾಟ ಮಾಡಬೇಕುಅದು ಮಹಿಳೆಯರಿಂದ ಮಾತ್ರ ಸಾಧ್ಯ ಇದೆ. ಇಂದಿನ ದಿನಮಾನಗಳಲ್ಲಿ ಕೆಲ ಮಹಿಳೆಯರು ಮದ್ಯಪಾನ ಸೇವನೆ ಮಾರ್ಗ ಹಿಡಿದಿರುವುದು ಬಗ್ಗೆ ವಿಷಾಧ ವ್ಯಕ್ತ ಪಡಿಸಿ ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿದರು.
ಕಾಯಕವೇ ಕೈಲಾಸ ಎಂಬ ಶರಣರತತ್ವ ಮಾರ್ಗದಲ್ಲಿ ಸರ್ಕಾರಗಳು ನಡೆಯಬೇಕೆ ಹೊರತಾಗಿಜನರನ್ನ ಬೇಡಿ ಬದುಕುವದಾರಿಗೆ ನೂಕಬಾರದು ಇಂದಿನ ದಿನಗಳಲ್ಲಿ ಸರ್ಕಾರಗಳೇ ಉಚಿತ ನೀಡುವ ಮೂಲಕ ಜನರನ್ನ ಬೇಡುವ ಸ್ಥಿತಿಗೆ ಕೊಂಡ್ಯೋಯುತ್ತಿದ್ದು ಬದಲಾಗಿ ಸರ್ಕಾರಗಳು ದುಡಿಯುವ ದಾರಿ ತೋರಬೇಕು ಇಲ್ಲವಾದಲ್ಲಿ ಜನರು ಬೇಡಿ ಬದುಕುವದಾರಿ ಹಿಡಿಯುತ್ತಾರೆ ಎಂದು ಉಚಿತ ಭಾಗ್ಯಗಳ ಕುರಿತು ಸಲಹೆ ನೀಡಿದರು.
ಶಾಸಕ ಡಿ.ಜಿ. ಶಾಂತನಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೂಜಾ ಸಮಿತಿಯ ಅಧ್ಯಕ್ಷ ಬಿ.ಮಲ್ಲೇಶಪ್ಪ ಅಧ್ಯಕ್ಷತೆ ªವಹಿಸಿಕೊಂಡಿದ್ದರು .ಪ್ರಾಸ್ತಾವಿಕ ಮಾತುಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಾಬು ಮಾತನಾಡಿದರು.
ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಡ ಧ್ವಜಸ್ತಂಭದಲ್ಲಿ ಶ್ರೀಗಳು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಗ್ರಾಮದ ಹಿರಿಯರಾದ ಡಿ.ತೀರ್ಥಲಿಂಗಪ್ಪ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಾಬು, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಶಿವ ಬ್ಯಾಂಕ್ ಅಧ್ಯಕ್ಷ ಚಂದ್ರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸವಿತಾ, ವಲಯ ಮೇಲ್ವಿಚಾರಕ ಜಿ.ಎಸ್.ಮಧುಸೂದನ, ಸೇವಾ ಪ್ರತಿನಿಧಿ ವೇದಾವತಿ ಸÀಮಿತಿ ಸದಸ್ಯರು ಉಪಸ್ಥಿತರಿದ್ದರು.