ನ್ಯಾಮತಿ: ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಹೆಣ ಹೂಳಲಿಕ್ಕೆ ರುದ್ರ ಭೂಮಿ ಇಲ್ಲ ಎಂದು ವಯೋಸಹಜವಾಗಿ ಮೃತಪಟ್ಟ ಗ್ರಾಮದ ದೊಡ್ಡಪ್ಪ (65) ಎಂಬವರ ಶವವನ್ನು ಗ್ರಾಮ ಪಂಚಾಯಿತಿಯಲ್ಲಿ ಒಳಗಡೆ ಇಟ್ಟು ಪ್ರತಿಭಟಿಸಿದ ಘಟನೆ ನಡೆಯಿತು.
ರುದ್ರ ಭೂಮಿಗೆ ನಿಗದಿಯಾಗಿದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ತೆರಳಿದ್ದ ಸಂದರ್ಭದಲ್ಲಿ ಬೇರೆ ಸಮುದಾಯದವರು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಹೆಣವನ್ನ ಗ್ರಾಮ ಪಂಚಾಯಿತಿ ಕಚೇರಿ ಒಳಗಡೆ ಇಟ್ಟು ಜಾಗ ಕೊಡುವವರೆಗೂ ತೆರಳುವುದಿಲ್ಲ ಎಂದು ಅಗ್ರಹಿಸಿದರು.
ಈ ಸುದ್ದಿ ತಿಳಿದ ತಕ್ಷಣವೆ ಸ್ಥಳಕ್ಕೆ ಬೇಟಿ ನೀಡಿದ ಶಾಸಕ ಡಿ ಜಿ ಶಾಂತನಗೌಡ್ರು ರವರು ತಾಲೂಕಿನ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಹಾಗೂ ಪೆÇಲೀಸ್ ಇಲಾಖೆ ಅವರನ್ನು ಕರೆಸಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಜೊತೆ ಮಾತೆಕತೆ ನಡೆಸಿದರು. ಆದರೂ ಸಹ ಸ್ಮಶಾನಕ್ಕೆ ಜಾಗ ನೀಡುವವರೆಗೂ ಶವವನ್ನ ಗ್ರಾಮ ಪಂಚಾಯಿತಿಯಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಶವ ತೆಗಿಲೇ ಇಲ್ಲ. ಆದರೂ ಸಹ ಶಾಸಕ ಡಿ ಜಿ ಶಾಂತನಗೌಡ್ರು ತಾಳ್ಮೆಯಿಂದ ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಸಂಬಂಧಪಟ್ಟೃ ಸರ್ವೆ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಅಧಿಕಾರಿಗಳನ್ನು ಕರೆಸಿ ರುದ್ರ ಭೂಮಿಯನ್ನು ಗುರುತಿಸಿ ಹದ್ದುಬಸ್ತು ಮಾಡಿಸಿಕೊಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿ ತೆರಳಿದರು. ಡಿ ವೈ ಎಸ್ ಪಿ ಪ್ರಶಾಂತ ಮುನ್ನೋಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯಲ್ಲಿ ಶವವನ್ನು ಇಡಬಾರದು. ಇದು ಕಾನೂನು ಬಾಹಿರ ಎಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ನಿಮ್ಮ ಗ್ರಾಮಕ್ಕೆ ರುದ್ರಭೂಮಿಯನ್ನು ಅಳತೆ ಮಾಡಿಸಿ ಕೊಡುತ್ತೇವೆ ಎಂದು ಮನವಿ ಮೇರೆಗೆ ಗ್ರಾಮ ಪಂಚಾಯಿತಿಯಲ್ಲಿಟ್ಟಿದ್ದ ಶವವನ್ನು ಹೊರಗಡೆ ತೆಗೆದುಕೊಂಡು ಹೋಗಿ ತಮ್ಮ ಜಮೀನಿನಲ್ಲೇ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಶವಸಂಸ್ಕಾರ ಮಾಡಲಾಯಿತು.