ನ್ಯಾಮತಿ; ತಾಲೂಕು ಗಂಗನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಾನೇಹಳ್ಳಿ ಗ್ರಾಮದಲ್ಲಿ 2022 23ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನೆ ಗ್ರಾಮ ಸಭೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಹಿಟ್ನಾಳ್ ಸಭೆಯ ಅಧ್ಯಕ್ಷತೆಯನ್ನ ವಹಿಸಿ ನಂತರ ಮಾತನಾಡಿದ ಅವರು ಕಳೆದ ವರ್ಷದಲ್ಲಿ ನರೇಗಾ ಯೋಜನೆ ಮತ್ತು 14 15 ಹಣಕಾಸಿನ ಯೋಜನೆಯಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದಾರೆ ಯಾವ ಯಾವ ಫಲಾನುಬವಿಗಳನ್ನು ಎಷ್ಟು ಮಾನವ ದಿನಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಪರಿಶೀಲಿಸಿದರು. ಪಂಚಾಯತಿಗೆ ಸಂಬಂಧಪಟ್ಟ ದೂರುಗಳು ಬಂದಿದ್ದು ಅವುಗಳನ್ನು ಸ್ಪೀಕೃತ ಮಾಡಿದ್ದೇವೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿ ಸಂಬಂಧಪಟ್ಟ ಹಳ್ಳಿಗಳಿಗ ಮೂಲ ಸೌಕರ್ಯಗಳನ್ನು ಒದಗಿಸುವ ನೀಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಮಾಡಿಸಿ ನನ್ನ ಬಳಿಗೆ ತಂದರೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಯಾವುದೇ ಸಂದರ್ಭದಲ್ಲಿ ಸಹ ನನ್ನನ್ನು ಭೇಟಿಯಾಗಿ ಯೋಜನೆಗಳಿಗೆ ಅನುಷ್ಠಾನವನ್ನು ಮಾಡಿಸಿಕೊಳ್ಳಬಹುದು ಎಂದು ಜನಪ್ರತಿನಿಧಿಗಳಿಗೆ ಆತ್ಮಸ್ಥೈದ ತುಂಬಿದರು. ಅಧಿಕಾರಿಗಳಿಗೆ ಸಮನ್ವಯದಿಂದ ಜನಪ್ರತಿನಿಧಿಗಳ ಜೊತೆಗೆ ಕೆಲಸ ಮಾಡಿಕೊಂಡು ಹೋದಾಗ ಪಂಚಾಯತಿ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಸ ಸಂಗ್ರಣಿ ವಿಚಾರದಲ್ಲಿ ಯಾವುದೇ ರೀತಿ ತಡ ಆಗಬಾರದೆಂದು ಇಂಜಿನಿಯರ್ ಅವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಲ್ಲಿ ಪ್ರತಿಯೊಂದು ಮನೆಗಳಲ್ಲಿ ಶೌಚಾಲಯ ಗುರುತಿಸುವ ಕಾರ್ಯ ತಕ್ಷಣವೇ ಮಾಡಬೇಕೆಂದು ಪಿಡಿಓ ರವರಿಗೆ ಆದೇಶಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರಭದ್ರ ಪಟೇಲ್ ನಂತರ ಮಾತನಾಡಿ 15ನೇ ಹಣಕಾಸಿನಲ್ಲಿ ನಮ್ಮ ಗ್ರಾಮ ಪಂಚಾಯಿತಿಯ ಪಿಡಿಓರವರಿಂದ ಪೀಠೋಪಕರಣ, ಕಂಪ್ಯೂಟರ್ ,ಪ್ರಿಂಟಿಂಗ್ ಮಿಷನ್, ಈ ಮೂರು ವಸ್ತುಗಳ ಖರೀದಿಯಲ್ಲಿ ಹಣ ದುರ್ಬಳಿಕೆಯಾಗಿದೆ ಎಂದು ಲೆಕ್ಕಪರಿಶೋಧನೆ ಇಲಾಖೆ ವರದಿಯನ್ನು ಸಹ ನೀಡಿದ್ದು ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಧ್ವನಿಯನ್ನು ಎತ್ತಿ ಇದಕ್ಕೆ ಸಹಮತ ವ್ಯಕ್ತಪಡಿಸಿ ಯಾರು ತಪ್ಪು ಮಾಡಿದ್ದಾರೋ ಅವರಿಂದ ಹಣವನ್ನು ರಿಕವರೀ ಮಾಡಿಸಬೇಕು .ತಪ್ಪಿದ್ದಲ್ಲಿ ಇಲಾಕ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಿಇಓ ರವರು ತಾಲೂಕು ನಿರ್ವಹಣಾಧಿಕಾರಿ ರಾಘವೇಂದ್ರ ಅವರಿಗೆ ತನಿಖಾ ಆದೇಶ ನೀಡಿದ್ದಾರೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಕೆ ಕರಿಯಮ್ಮ, ನರೇಗಾ ಆಡಳಿತ ಅಧಿಕಾರಿ ಸಂಗಮೇಶ್ , ಪಿಡಿಓ ಜ್ಯೋತಿ ಶೆಟ್ಟಿ ,ನರೇಗಾ ಕಾರ್ಮಿಕ ಅಧಿಕಾರಿ, ಮೀನುಗಾರಿಕೆ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕ್ ಮಟ್ಟದ ಇಲಾಖೆ ಅಧಿಕಾರಿಗಳು ಹಾಗೂ ಲೆಕ್ಕಪರಿಶೋಧನೆ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತಿ ಸರ್ವ ಸದಸ್ಯರುಗಳು ಗ್ರಾಮಸ್ಥರು ಸಹ ಉಪಸ್ಥಿತಿಯಲ್ಲಿದ್ದರು.