ನ್ಯಾಮತಿ: ಪಟ್ಟಣದ ಕುಂಬಾರ್ ಬೀದಿಯಲ್ಲಿರುವ ಶ್ರೀ ಅಮ್ಮನ ಮರದ ದೇವಿಯ 21ನೇ ವಿವಾಹ ವಾರ್ಷಿಕೋತ್ಸವದ ಮತ್ತು ಕಾಶಿಕೋತ್ಸವದ ಅಂಗವಾಗಿ ದೇವಿಗೆ ಮಹಾರುದ್ರಾಭಿಷೇಕ ಹಾಗೂ ಸಾಮೂಹಿಕ ವಿವಾಹ ಧರ್ಮ ಸಂದೇಶ ಸಮಾರಂಭ ಕಾರ್ಯಕ್ರಮ ಜರುಗಿತು.
ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಹೊನ್ನಾಳಿ ಹಿರೇಕಲ್ ಮಠದ ಪೀಠಾಧ್ಯಕ್ಷರಾದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿಯವರು ಮತ್ತು ಕೋಣಂದೂರ್ ಶ್ರೀಪತಿ ಪಂಡಿತಾರಾಧ್ಯ ಕೋಣಂದೂರು ಶ್ರೀಗಳು ಸೇರಿದಂತೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀಗಳು ನೂತನ ಸಂಸಾರಕ್ಕೆ ಕಾಲಿಟ್ಟ ನವ ಜೋಡಿಗಳು ಕುರಿತು ಮಾತನಾಡಿ ಶ್ರೀಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟದ್ದಿರಿ ನಿಮ್ಮ ತಂದೆ ತಾಯಿ ಮತ್ತು ಅತ್ತೆ ಮಾವಂದಿರ ಆಶೀರ್ವಾದದಿಂದ ವಿವಾಹ ದಾಂಪತ್ಯಕ್ಕೆ ಕಾಲಿಟ್ಟು ವಧು ಮತ್ತು ವರ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂಸಾರವನ್ನು ನಡೆಸಿಕೊಂಡು ಹೋದರೆ ನಿಮ್ಮ ಜೀವನ ಪಾವನವಾಗುತ್ತದೆ ಎಂದು ತಿಳಿಸಿ ಅತ್ತೆ ಮಾವ ತಮ್ಮ ಸೊಸೆ ಎನ್ನದೆ ತಮ್ಮ ಮಗಳಂತೆ ನೋಡಿಕೊಂಡು ಹೋದಾಗ ಮಗನ ಸಂಸಾರ ಸುಖಮಯವಾಗಿ ಇರಬಹುದು ಎಂದು ನವಜೋಡಿಗಳ ತಂದೆ ತಾಯಿಯಂದಿರಿಗೆ ಕಿವಿ ಮಾತನ್ನ ತಿಳಿಸಿದರು.
ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ನೂತನ ದಂಪತಿಗಳಿಗೆ ಆಶೀರ್ವದಿಸಿ ನವ ಜೋಡಿ ಕುರಿತು ಮಾತನಾಡಿದ ಅವರು ನ್ಯಾಮತಿ ಪಟ್ಟಣದಲ್ಲಿರುವ ಅಮ್ಮನ ಮರದ ದೇವಿಯ ದೇವಸ್ಥಾನ ಸೇವಾ ಟ್ರಸ್ಟಿನವರು ಸುಮಾರು 21 ವರ್ಷಗಳ ಕಾಲ ಸಾಮೂಹಿಕ ವಿವಾಹ ಧರ್ಮದ ಕಾರ್ಯಗಳ ಜೊತೆಗೆ ಬಂದಂತ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿರುವುದು ಮಹತ್ತರದ ಕೆಲಸವಾಗಿದೆ ಆ ದೇವಿಯು ಟ್ರಸ್ಟಿನವರಿಗೆ ಮತ್ತು ಗ್ರಾಮದ ಸದ್ಭಕ್ತರಿಗೆ ಒಳಿತನ್ನು ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟಿನವರು ಮಠಾಧೀಶರ ಒಳಗೊಂಡಂತೆ ಶಾಸಕ ಡಿ ಜಿ ಶಾಂತನಗೌಡ್ರು ಅವರಿಗೆ 75ನೇ ವರ್ಷದ ಜನ್ಮದಿನದ ಅಂಗವಾಗಿ ಕೇಕನ್ನು ತಂದು ಗುರುಗಳ ಸಮ್ಮುಖದಲ್ಲಿ ಕತ್ತರಿಸಿ ಗುರುಗಳೇ ಶಾಸಕರಿಗೆ ಕೇಕನ್ನ ತಿನ್ನಿಸಿದ್ದು ಧರ್ಮದ ಕಾರ್ಯದಲ್ಲಿ ವಿಶೇಷವಾಗಿತ್ತು.
ವಿಶ್ವರಾಧ್ಯ ಶಾಸ್ತ್ರಿಗಳು ಕೋಹಳ್ಳಿ ಮಠ ನ್ಯಾಮತಿ ಇವರುಗಳ ದಿವ್ಯ ಸಾನಿಧ್ಯದಲ್ಲಿ ಪೌರೋತ್ಯ ನಡೆಯಿತು.
ಮಠದ ಶ್ರೀಗಳಿಗೆ ಹಾಗೂ ಶಾಸಕ ಡಿಜಿ ಶಾಂತನಗೌಡ್ರು ಮತ್ತು ರೈತ ಮುಖಂಡ ಕರಬಸಪ್ಪ ಹಾಗೂ ದೇವಸ್ಥಾನಕ್ಕೆ ದೇಣಿಗೆ ಕೊಟ್ಟಂತ ಮಹನೀಯರಿಗೆ ಸನ್ಮಾನಿಸಲಾಯಿತು.
ಟ್ರಸ್ಟಿನ ಅಧ್ಯಕ್ಷರಾದ ಶಂಕ್ರಪ್ಪ ಹೊಸಮನೆ, ಸಹಕಾರದರ್ಶಿ ಮಲ್ಲಿಕಾರ್ಜುನ್ ಎಚ್, ಖಜಾಂಚಿ ಮಲ್ಲೇಶಪ್ಪ, ?ರ್ಯದರ್ಶಿ ಚೆನ್ನೇಶಪ್ಪ,ಎಚ್‍ಕೆ, ಸದಸ್ಯರುಗಳಾದ ಪ್ರವೀಣ್ ಕುಮಾರ್ ,ಸಿದ್ದಪ್ಪ, ಮಲ್ಲಿಕಾರ್ಜುನಪ್ಪ ಎಂಜಿ, ಯೋಗೇಶ್, ಪುಟ್ಟಪ್ಪ, ರೇಣುಕಪ್ಪ, ಚನ್ನಬಸಪ್ಪ, ಎಂ ಕರಬಸಪ್ಪ ದೇವಿಯ ಭಕ್ತಾದಿಗಳು ಗ್ರಾಮಸ್ಥರು ಮತ್ತು ನವಜೋಡಿಗಳು ಸಹ ಉಪಸ್ಥಿತಿಯಲ್ಲಿದ್ದರು.