ನ್ಯಾಮತಿ: ತಾಲೂಕಿನ ತಹಸಿಲ್ದರಾದ ಎಚ್ ಬಿ ಗೋವಿಂದಪ್ಪ ಅವರಿಗೆ ಲೋಕಾಯುಕ್ತ ಕಚೇರಿ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದ್ದು ಈ ಬಗ್ಗೆ ನ್ಯಾಮತಿ ಪೆÇಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ತಹಸಿಲ್ದಾರ್ ಗೋವಿಂದಪ್ಪ ಅವರ ಮೊಬೈಲಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾನು ಲೋಕಾಯುಕ್ತ ಕಚೇರಿಯ ಡಿ ವೈ ಎಸ್ ಪಿ ಎಂದು ಪರಿಚಯ ಮಾಡಿಕೊಂಡು ಬಳಿಕ ಅವರ ವಿವರಗಳನ್ನು ಪಡೆದುಕೊಂಡು ನಿಮ್ಮ ಮೇಲೆ ಬೆಂಗಳೂರಿನ ಎಂಎಸ್ ಬಿಲ್ಡಿಂಗಿನಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ಎ???ಆರ್ ದಾಖಲಾಗಿದೆ. ಈ ಸಂಬಂಧ ಲೋಕಾಯುಕ್ತ ಎಸ್ಪಿ ಮತ್ತು ಅವರ ಸಿಬ್ಬಂದಿ ನೀವು ಕೆಲಸ ನಿರ್ವಹಿಸುತ್ತಿರುವ ಸ್ಥಳ ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಧಮ್ಕಿ ಹಾಕಿದ್ದಾನೆ.
ನಿಮ್ಮ ವಿಷಯದ ಬಗ್ಗೆ ವಿಚಾರಿಸಿದಾಗ ನೀವು ಒಳ್ಳೆಯವರು ಎಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಮೇಲಾಧಿಕಾರಿಗಳಿಗೆ ದಾಳಿ ಮಾಡದಂತೆ ತಿಳಿಸಿದ್ದೇನೆ. ಹಾಗಾಗಿ ನಾನು ಹೇಳಿದ ಎರಡು ಫೆÇೀನು ನಂಬರುಗಳಿಗೆ ತಕ್ಷಣವೇ ಎರಡು ಲಕ್ಷ ರೂ ಹಣ ಹಾಕಿ ಎಂದಿದ್ದಾನೆ.
ಅಂದೆ ದಿನ ಪದೇ ಪದೇ ಕರೆ ಮಾಡಿ ನನ್ನ ಫೆÇೀನಿಗೆ ಹಣ ಹಾಕಿ ಎಂದು ಒತ್ತಾಯಿಸಿದ್ದಾನೆ. ತಹಸಿಲ್ದಾರ್ ಗೋವಿಂದಪ್ಪನವರು ಹಣ ಹಾಕಲು ಒಪ್ಪದಿದ್ದಾಗ ನಿನಗೆ ಮುಂದೆ ಏನು ಮಾಡಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರಾಣ ಬೆದರಿಕೆ ಹಾಕಿದ ಘಟನೆ ನಡೆದ ಘಟನೆ ಆದರಿಸಿ ಪೆÇಲೀಸ್ ದೂರಿನಲ್ಲಿ ತಿಳಿಸಲಾಗಿದೆ. ನನಗೆ ಪ್ರಾಣ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಮತಿ ಪೆÇಲೀಸ್ ಠಾಣೆಯಲ್ಲಿ ದೂರನ್ನ ಕೊಟ್ಟಿದ್ದು ಪೆÇೀಲಿಸಿನವರು ಪ್ರಕರಣವನ್ನು ದಾಖಲಿಸಿದ್ದಾರೆ.