ಜಿಲ್ಲೆಯಲ್ಲಿ ಆರ್‍ಟಿಸಿ ತಿದ್ದುಪಡಿ ಮಾಡಲು ಆಂದೋಲನವನ್ನು ಕೈಗೊಂಡು 5637 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ಕಂದಾಯ ಇಲಾಖೆ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ ಕಳೆದ ಆರು ತಿಂಗಳಲ್ಲಿ ಜನಸ್ನೇಹಿ ಆಡಳಿತ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಪಹಣಿ ತಿದ್ದುಪಡಿಯಡಿ 2023 ರ ಮೇ ಅಂತ್ಯಕ್ಕೆ 5,039 ಅರ್ಜಿಗಳು ಬಾಕಿ ಇದ್ದು ಜೂನ್ 23 ರಿಂದ ನವೆಂಬರ್ 23 ರವರೆಗೆ ಆರು ತಿಂಗಳಲ್ಲಿ ಹೊಸದಾಗಿ ಸ್ವೀಕೃತವಾದ 4438 ಅರ್ಜಿಗಳು ಸೇರಿದಂತೆ 9477 ಪಹಣಿ ತಿದ್ದುಪಡಿ ಅರ್ಜಿಗಳಲ್ಲಿ ಇದೇ ಅವಧಿಯಲ್ಲಿ 5637 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು 2023 ರ ನವಂಬರ್ 27 ರ ಅಂತ್ಯಕ್ಕೆ 3,840 ಅರ್ಜಿಗಳು ತಿದ್ದುಪಡಿ ಅರ್ಜಿಗಳು ಬಾಕಿ ಇದ್ದು ಈ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿ : ದಾವಣಗೆರೆ ಮತ್ತು ಹೊನ್ನಾಳಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ಜಿಲ್ಲೆಯ 6 ತಾಲ್ಲೂಕಗಳ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಸುಮಾರು 2 ರಿಂದ 5 ವರ್ಷ ಮೇಲ್ಪಟ್ಟು ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳಲ್ಲಿ 1,116 ಪ್ರಕರಣಗಳನ್ನು ವಿಲೇವಾರಿ ಮಾಡಿ ಆದೇಶ ಹೊರಡಿಸಿರುತ್ತಾರೆ. ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 202 ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಲಾಗಿದ್ದು ಒಟ್ಟು 1,318 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ.
ಕಂದಾಯ ಸಚಿವರ ನಿರ್ದೇಶನದ ಮೇರೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಾರದಲ್ಲಿ 3 ದಿನ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ 2 ದಿನ ಕಡ್ಡಾಯವಾಗಿ ನ್ಯಾಯಾಲಯಗಳ ಕಲಾಪಗಳನ್ನು ನಡೆಸಿ 90 ದಿನಗಳ ನಂತರದ ಎಲ್ಲಾ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.
ಮುಟೇಷನ್ ಪ್ರಕರಣಗಳ ವಿಲೇವಾರಿ : ಜಿಲ್ಲೆಯಲ್ಲಿ ಜಮೀನಿನ ಹಕ್ಕು ಬದಲಾವಣೆ, ಮ್ಯುಟೇಷನ್ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ನೋಟಿಸ್ ಸಹಿತ ಪ್ರಕರಣಗಳಲ್ಲಿ ನೋಟಿಸ್ ಅವಧಿ ಮುಕ್ತಾಯದ ನಂತರ ವಿಲೇವಾರಿ ಸರಾಸರಿ ದಿನಗಳನ್ನು ಕಳೆದ 6 ತಿಂಗಳಲ್ಲಿ 21 ದಿನದಿಂದ 13 ದಿನಗಳಿಗೆ ಇಳಿಸಲಾಗಿದ್ದು ಶೀಘ್ರ ವಿಲೇವಾರಿಗೆ ಕ್ರಮವಹಿಸಲಾಗಿದೆ.
ನೊಟೀಸ್ ಅವಧಿ (7 ದಿನ) ಮುಕ್ತಾಯವಾದ 3 ದಿನಗಳೊಳಗೆ ಹಾಗೂ ಪೌತಿ, ವಿಲ್ ಆಧಾರಿತ ಖಾತೆ ಬದಲಾವಣೆ ಪ್ರಕರಣಗಳಲ್ಲಿ ನೊಟೀಸ್ ಅವಧಿ (15 ದಿನ) ಮುಕ್ತಾಯವಾದ ನಂತರ 3 ದಿನಗಳೊಳಗಾಗಿ ಮ್ಯುಟೇಷನ್ ವಿಲೇವಾರಿ ಮಾಡಲು ಕ್ರಮವಹಿಸಲಾಗುತ್ತಿದೆ. ನೋಟಿಸ್ ರಹಿತ ಪ್ರಕರಣಗಳಾದ ಆಧಾರ, ಭೋಗ್ಯ ಮತ್ತು ಬಿಡುಗಡೆ , ಪೆÇೀಡಿ ಹಾಗೂ ಕೋರ್ಟ್ ಆದೇಶ, ಭೂ ಪರಿವರ್ತನೆ ಪ್ರಕರಣಗಳಲ್ಲಿ 1 ದಿನಗಳೊಳಗಾಗಿ ವಿಲೇಪಡಿಸಲಾಗುತ್ತಿದ್ದು ಆದ್ಯತೆ ಮೇರೆಗೆ ನಿಗಧಿತ ಕಾಲಾವಧಿಯೊಳಗೆ ಕ್ರಮವಹಿಸಲಾಗುತ್ತಿದೆ.
ಸರ್ಕಾರಿ ಜಮೀನು ಟ್ಯಾಗ್: ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಜಮೀನುಗಳು, ಪಿಟಿಸಿಎಲ್ (Pಖಿಅಐ) ವ್ಯಾಪ್ತಿಗೊಳಪಡುವ ಮಂಜೂರಿದಾರರ ಜಮೀನು ಹಾಗೂ ಇತರೆ ವರ್ಗಗಳ (ಓoಟಿ Pಖಿಅಐ) ವ್ಯಾಪ್ತಿಗೊಳಪಡುವ ಮಂಜೂರಿದಾರರ ಜಮೀನುಗಳಲ್ಲಿ ಅಕ್ರಮ ಖಾತೆ ವಹಿವಾಟುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಟ್ಟು 43,794 ಜಮೀನುಗಳ ವಿವರಗಳನ್ನು ಗುರುತಿಸಿ, ಭೂಮಿ ತಂತ್ರಾಂಶದಲ್ಲಿ ಪ್ರಾಗ್ (ಲಾಕ್) ಮಾಡಲಾಗಿದ್ದು ಅಕ್ರಮ ವಹಿವಾಟು ನಡೆಯದಂತೆ ತಡೆಹಿಡಿಯಲಾಗಿದೆ. ಈ ಪೈಕಿ 18,829 ಸರ್ಕಾರಿ ಜಮೀನುಗಳು, 20,416 ಪಿಟಿಸಿಎಲ್ ವ್ಯಾಪ್ತಿಯ ಜಮೀನುಗಳು ಮತ್ತು 4549 ಇತರೆ ವರ್ಗಗಳಿಗೆ ಸೇರಿದವರ ಜಮೀನುಗಳನ್ನು ಒಳಗೊಂಡಿರುತ್ತದೆ.
ಇ-ಆಫೀಸ್: ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಕಛೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಸೆಪ್ಟೆಂಬರ್ ಮಾಹೆಯಿಂದ ಇ-ಆಫೀಸ್ ನಲ್ಲಿ ಕಾರ್ಯನಿರ್ವಹಣೆ ಕಡ್ಡಾಯಗೊಳಿಸಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಟ್ಟು 2,08,180 ಅರ್ಜಿಗಳನ್ನು, ದಾವಣಗೆರೆ ಹಾಗೂ ಹೊನ್ನಾಳಿ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಇ-ಆಫೀಸ್ ಮೂಲಕ 5,103 ಅರ್ಜಿಗಳನ್ನು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಒಟ್ಟು 6,881 ಅರ್ಜಿ ವಿಲೇವಾರಿ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,20,164 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಮುಂದುವರೆದ ಭಾಗವಾಗಿ ನಾಡಕಛೇರಿ ಮತ್ತು ರಾಜಸ್ವ ನಿರೀಕ್ಷಕರ ಕಛೇರಿಯಲ್ಲಿ ಇ-ಆಫೀಸ್ ಅನುμÁ್ಠನಕ್ಕೆ ಕ್ರಮವಹಿಸಲಾಗಿದೆ.
ಕಂದಾಯ ಗ್ರಾಮ ರಚನೆ: ಜಿಲ್ಲೆಯಲ್ಲಿ ಗುರುತಿಸಲಾಗಿರುವ 80 ಜನವಸತಿಗಳ ಪೈಕಿ ಈಗಾಗಲೇ 46 ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಬಾಕಿ ಉಳಿದ 34 ಜನ ವಸತಿಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ದಾಖಲೆಗಳ ಪರಿಶೀಲಿನೆ ಕೈಗೊಂಡು ಒಟ್ಟು 30 ಜನವಸತಿಗಳ ಪ್ರಸ್ತಾವನೆಗಳನ್ನು ಪ್ರಾಥಮಿಕ ಅಧಿಸೂಚನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನುಳಿದ 4 ಜನವಸತಿಗಳು ಖಾಸಗಿ ಜಮೀನಿನಲ್ಲಿ ಸ್ಥಾಪನೆಗೊಂಡಿದ್ದು ಖಾಸಗಿ ಜಮೀನುಗಳನ್ನು ಸರ್ಕಾರಕ್ಕೆ, ನಿಹಿತಗೊಳಿಸಲು ಕರ್ನಾಟಕ ಭೂಸುಧಾರಣೆ ಕಾಯ್ದೆಯಡಿ ಜಿಲ್ಲಾ ಮಟ್ಟದಲ್ಲಿ ಅಧಿಸೂಚನೆ ಹೊರಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಸಾಮಾಜಿಕ ಭದ್ರತಾ ಯೋಜನೆ : ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಕಳೆದ 6 ತಿಂಗಳಲ್ಲಿ 9,532 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರುವ ನಿಟ್ಟಿನಲ್ಲಿ 24,422 ಪಿಂಚಣಿದಾರರ ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಜೋಡಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ತಡೆಹಿಡಿಯಲಾದÀ 800 ಫಲಾನುಭವಿಗಳ ಪಿಂಚಣಿ ಹಾಗೂ ವಿವಿಧ ಕಾರಣಗಳಿಂದ ರದ್ದಾದ 2,109 ಪ್ರಕರಣಗಳನ್ನು ಚಾಲ್ತಿಗೊಳಿಸಲಾಗಿದೆ. 200 ಪಿಂಚಣಿದಾರರ ಆಧಾರ್ ಸೀಡಿಂಗ್ ಮಾಡಲಾಗಿದೆ. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 562 ಪ್ರಕರಣಗಳಲ್ಲಿ ಸಹಾಯಧನ ವಿತರಿಸಲು ಹಾಗೂ 7 ರೈತರ ಆತ್ಮಹತ್ಯೆ ಪ್ರಕರಣಗಳು, 5 ರೈತರ ಆಕಸ್ಮಿಕ ಮರಣ, ಹಾವು ಕಡಿತ ಪ್ರಕರಣಗಳು ಮತ್ತು 20 ಬಣವೆ ನಷ್ಟ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ.
ಕಂದಾಯ ದಾಖಲೆಗಳ ಡಿಜಿಟಲೀಕರಣ: ಜಿಲ್ಲೆಯ ತಾಲ್ಲೂಕು ಕಛೇರಿಗಳಲ್ಲಿನ ಕಂದಾಯ ದಾಖಲೆಗಳು ಮತ್ತು ಕಡತಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು ಪ್ರಸ್ತುತ ದಾವಣಗೆರೆ ಹಾಗೂ ಹರಿಹರ ತಾಲ್ಲೂಕುಗಳ ಡಿಜಿಟಲೀಕರಣ ಕಾರ್ಯ ಪುಗತಿಯಲ್ಲಿದೆ.
ಜನತಾದರ್ಶನ ಅರ್ಜಿಗಳ ವಿಲೇವಾರಿಯಲ್ಲಿ ರಾಜ್ಯಕ್ಕೆ ಪ್ರಥಮ ಜಿಲ್ಲೆ.: ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಜನತಾದರ್ಶನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಂಡು ಒಟ್ಟು 1,599 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸ್ವೀಕರಿಸಿ, ಒಟ್ಟು 1,516 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, ವಿಲೇವಾರಿಯಲ್ಲಿ ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ..
48 ವರ್ಷಗಳಿಂದ ಬಾಕಿ ಇದ್ದ ಗ್ರಾಮಠಾಣ ಇ-ಸ್ವತ್ತು ಪ್ರಕರಣದ ಇತ್ಯರ್ಥ: ಚನ್ನಗಿರಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ 48 ವರ್ಷಗಳ ಹಿಂದೆ ಸ್ಥಳಾಂತರಗೊಂಡ ಆಲೂರು ಗ್ರಾಮವು ಗ್ರಾಮಠಾಣ ವ್ಯಾಪ್ತಿಗೆ ಸೇರದ ಕಾರಣ, ಇ-ಸ್ವತ್ತು ಪಡೆಯಲು ಸಾಧ್ಯವಾಗದೇ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತವಾಗಿದ್ದು, ಪ್ರಕರಣವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಜನವಸತಿ ಇದ್ದ ಜಮೀನುಗಳನ್ನು ಗ್ರಾಮಠಾಣ ಎಂದು ಭೂದಾಖಲೆಗಳಲ್ಲಿ ನಮೂದಿಸಲಾಗಿದೆ. ಹಾಗೂ ದಾವಣಗೆರೆ ತಾಲ್ಲೂಕು ಕಡ್ಲೆಬಾಳು ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುಮಾರು 40 ವರ್ಷದಿಂದ ಮಾಳಗೊಂಡನಹಳ್ಳಿಯಲ್ಲಿ ವಾಸಿಸುತ್ತಿದ್ದ ಜನವಸತಿ ಪ್ರದೇಶವನ್ನು ಗಾಮಠಾಣ ವಿಸ್ತರಣೆ ಮಾಡಿ ಅಮ್ಮತನಗರ ಗ್ರಾಮವನ್ನಾಗಿ ಇಸ್ವತ್ತು ವಿತರಣೆ ಮಾಡಲಾಗಿದೆ.
ಸ್ಮಶಾನ ಒತ್ತುವರಿ ತೆರವು: ದಾವಣಗೆರೆ ತಾಲ್ಲೂಕು ಬೆಳವನೂರು ಗ್ರಾಮದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮಸ್ಮರ ಬೇಡಿಕೆಯಂತೆ ಬೆಳವನೂರು ಮತ್ತು ತುರ್ಚಘಟ್ಟ ಗ್ರಾಮದ ಸ್ಮಶಾನಗಳನ್ನು ಅಳತೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಿಸಿ ಗ್ರಾಮಸ್ಥರ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರೂಟ್ ತತ್ರಾಂಶ: ಜಿಲ್ಲೆಯ ರೈತರು ಬರ ಪರಿಹಾರದ ಇನ್‍ಫುಟ್ ಸಬ್ಸೀಡಿ ಪಡೆಯಲು ಜಮೀನಿನ ವಿವರವನ್ನು ಫೂಟ್ಸ್ ತತ್ರಾಂಶಕ್ಕೆ ಕಡ್ಡಾಯವಾಗಿ ದಾಖಲಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,86,330 ಪ್ಲಾಟ್‍ಗಳು ಇದ್ದು, ಅದರಲ್ಲಿ ಈಗಾಗಲೇ 3,61,280 ಪ್ಲಾಟ್‍ಗಳು ಪ್ರೂೀಟ್ಸ್‍ನಲ್ಲಿ ನೊಂದಾಯಿಸಲಾಗಿರುತ್ತದೆ. ಬಾಕಿ ಉಳಿದ 1,25,050 ಪ್ಲಾಟ್ ಗಳು ತತ್ರಾಂಶದಲ್ಲಿ ನೊಂದಾಯಿಸಲು ಆಂದೋಲನದ ರೀತಿಯಲ್ಲಿ ಯೋಜನೆ ರೂಪಿಸಿ ಎಲ್ಲಾ ಪ್ಲಾಟ್ ಗಳನ್ನು ಫೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ಉಳಿದ ಎಲ್ಲಾ ಪ್ಲಾಟ್‍ಗಳನ್ನು ಸೇರ್ಪಡೆ ಮಾಡಲು ಕಂದಾಯ, ಕೃಷಿ, ಪಶುಸಂಗೋಪನಾ ಇಲಾಖೆಗಳಿಂದ ಅಗತ್ಯ ಕ್ರಮವಹಿಸಲಾಗಿದೆ.
ದಾವಣಗೆರೆ ಜಿಲ್ಲೆಯು ಪ್ರಸ್ತುತ ಅತಿಹೆಚ್ಚು ಪ್ಲಾಟ್‍ಗಳನ್ನು ನೊಂದಣಿ ಮಾಡಿದ್ದು, ಶೇಕಡವಾರು ಪ್ರಗತಿಯಲ್ಲಿ ರಾಜ್ಯದಲ್ಲಿಯೇ 3 ನೇ ಸ್ಥಾನದಲ್ಲಿರುತ್ತದೆ. ರೈತರು ತಮ್ಮ ಪ್ಲಾಟ್‍ಗಳನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸಲು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ರೇμÉ್ಮ ಇಲಾಖೆ, ಪಶು ಸಂಗೋಪನೆ ಇಲಾಖೆಗಳನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
