ನ್ಯಾಮತಿ: ತಾಲ್ಲೂಕು ತಹಶೀಲ್ದಾರ್ ಅವರಿಗೆ ಲೋಕಾಯುಕ್ತ ಹೆಸರಿನಲ್ಲಿಕರೆ ಮಾಡಿ ಬೆದರಿಕೆ ಹಾಕಿದ್ದಆರೋಪಿಯನ್ನು ಪತ್ತೆಹಚ್ಚುವಲ್ಲಿ ನ್ಯಾಮತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಚಿಕ್ಕೋಡಿಯ ಮುರುಗೇಶಕುಂಬಾರ ಬಂಧಿತ ಆರೋಪಿ, ಮಹಾರಾಷ್ಟ್ರರಾಜ್ಯದ ಸಾಂಗ್ಲಿಜಿಲ್ಲೆ ಮೀರಜ್‍ನಲ್ಲಿ ಆರೋಪಿಯನ್ನು ಶುಕ್ರವಾರ ವಶಪಡಿಸಿಕೊಂಡು ನ್ಯಾಮತಿ ಪೊಲೀಸ್‍ಠಾಣೆಗೆಕರೆvಂದು ವಿಚಾರಣೆಗೆ ಒಳಪಡಿಸಲಾಗಿದೆ.ಆರೋಪಿ ಈ ಹಿಂದೆ ಪೊಲೀಸ್ ಇಲಾಖೆ ನೌಕರನಾಗಿದ್ದು,ಕರ್ತವ್ಯಚ್ಯುತಿಅಪಾದನೆಯಿಂದ 2002ರಲ್ಲಿ ಸೇವೆಯಿಂದಅಮಾನತ್ತುಗೊಂಡಿದ್ದು,ಅಧಿಕಾರಿಗಳಿಗೆ ಬೆದರಿಕೆಕರೆ ಮಾಡುವುದು ರೂಢಿಸಿಕೊಂಡಿದ್ದಾನೆ. ತನಿಖೆಯಿಂದ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ ಎಂದು ನ್ಯಾಮತಿ ಪೊಲೀಸ್‍ಇನ್ಸ್‍ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.
ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಸಬ್‍ಇನ್ಸ್‍ಪೆಕ್ಟರ್ ಬಿ.ಎಲ್.ಜಯಪ್ಪನಾಯ್ಕ, ಸಿಬ್ಬಂದಿ ಆನಂದ ಅವರು ಆರೋಪಿಯ ಮೊಬೈಲ್ ಕರೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.