ನ್ಯಾಮತಿ: ಪಟ್ಟಣದ ಪಾಂಡುರಂಗ ಮಂದಿರದಲ್ಲಿ 36ನೇ ವರ್ಷದ ವಿಠಲ-ರುಖುಮಾಯಿ ದಿಂಡಿಉತ್ಸª ಭಾನುವಾರ ವಿಜೃಂಭಣೆಯಿಂದ ಜರುಗಿತು.
ಈ ಸಲುವಾಗಿ ವಿಠ್ಠಲ-ರುಖುಮಾಯಿ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಬೆಣ್ಣೆಆಲಂಕಾರ ಪೂಜೆ, ಕಾಕಡಾರತಿ ನೆರವೇರಿಸಿದ ನಂತರಆಲಂಕೃತಗೊಂಡ ವಾಹನದಲ್ಲಿ ವಿಠ್ಠಲ-ರುಖುಮಾಯಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ಪುರುಷರು ಮತ್ತು ಮಹಿಳೆಯರು, ಬಾಲಕರು ತಾಳ, ಮೃದಂಗ ಬಾರಿಸುತ್ತ, ಭಕ್ತಿಯಿಂದಕುಣಿಯುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡರು.ಮನೆಗಳ ಮುಂದೆ ಸಂತರ ಪಾದಪೂಜೆ ಮಾಡುವುದುಕಂಡು ಬಂದಿತು.
ಶನಿವಾರರಂಗೋಲಿ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಹಾಗೂ ಪೋತಿ ಸ್ಥಾಪನೆ ನಂತರರಾತ್ರಿಯಿಡಿ ಪಾಳಿ ಭಜನೆ, ಶ್ರೀನಿವಾಸ ಹಂಪಿಹೊಳಿಅವರಿಂದ ವಿಶೇಷ ಗಾಯನ, ಶಿವಮೊಗ್ಗ ದಿಂದ ಆಗಮಿಸಿದ್ದ ಮೃದಂಗ ಕರಿಗಳು, ಭಾರೂಡ್ ಕರಿಗಳು ಭಜನೆ ನಡೆಸಿಕೊಟ್ಟರು.
ದೇವಾಲಯಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಮಾಜಿಶಾಸಕ ಎಂ.ಪಿ.ರೇಣುಕಾಚಾರ್ಯ, ಮೊದಲಾದವರು ಭೇಟಿ ನೀಡಿದರ್ಶನ ಪಡೆದರು.
ದೇವಸ್ಥಾನ ಸಮಿತಿಯಿಂದ ಸಾಮೂಹಿಕ ಅನ್ನ ಸಂತರ್ಪಣೆಏರ್ಪಡಿಸಲಾಗಿತ್ತು. ಈ ಎಲ್ಲಾಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ನಾಮದೇವ ಸಿಂಪಿ ಸಮುದಾಯ, ವಿಠ್ಠಲ-ರುಖುಮಾಯಿ ದಿಂಡಿಉತ್ಸವ ಸಮಿತಿ, ರಾಧಾ ಮಹಿಳಾ ಭಜನಾ ಮಂಡಳಿ, ವಿನಾಯಕ ಸೇವಾ ಸಮಿತಿ, ಛತ್ರಪತಿ ಶಿವಾಜಿ ಸೇನೆ ಹಾಗೂ ವಿಠ್ಠಲ ರುಖುಮಾಯಿ ಸಮುದಾಯ ಭವನಅಭಿವೃದ್ದಿ ಸಮಿತಿಯವರು ವಹಿಸಿದ್ದರು.