ನ್ಯಾಮತಿ: ತಾಲೂಕು ಕುಂಕುಮ ಗ್ರಾಮದ ಹೂರವಲಯದಲ್ಲಿರುವ ತೋಟದ ಮನೆಯೊಂದರಲ್ಲಿ ದುಷ್ಕರ್ಮಿಗಳು ಪಾಂಡುರಂಗಯ್ಯ ಎಂಬ ವ್ಯಕ್ತಿಗೆ ಕೊಲೆಗೆ ಯತ್ನಿಸಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ 11,30 ಕ್ಕೆ ತಡ ರಾತ್ರಿ ಘಟನೆ ನಡೆದಿದೆ.
ಪಾಂಡುರಂಗಯ್ಯ ಅವರ ಧರ್ಮಪತ್ನಿ ಲಕ್ಷ್ಮಮ್ಮ ಅವರು ನ್ಯಾಮತಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಕುಮ ಗ್ರಾಮದ ತೋಟದ ಮನೆಯೊಂದರಲ್ಲಿ ವಾಸವಿದ್ದ ಲಕ್ಷ್ಮಮ್ಮ ಹಾಗೂ ಪಾಂಡುರಂಗಯ್ಯ ಅವರ ಮನೆಗೆ ರಾತ್ರಿಯ 11:30 ಸಮಯಕ್ಕೆ ಬಂದು ಮೂರು ದುಷ್ಕರ್ಮಿಗಳು ಬಾಗಿಲು ಬಡಿದು, ಎಬ್ಬಿಸಿ ಬೈಕ್ ನಿಂದ ಬಿದ್ದು ಗಾಯವಾಗಿದೆ ಎಂದು ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾರೆ. ದಂಪತಿ ಕೊಟ್ಟ ನೀರನ್ನು ತೆಗೆದುಕೊಂಡು ಸ್ವಲ್ಪ ಹೊತ್ತಿನಲ್ಲಿ ಪುನಃ ಬಂದು ಅರಿಶಿನ ಕೊಡಿ ಎಂದು ಕೇಳಿದ್ದಾರೆ. ನಂತರ ಸಕ್ಕರೆ ಕೊಡಿ ಎಂದು ಪುನಹ ಕೇಳಿದ್ದಾರೆ ಎಂದು ಪೆÇಲೀಸರವರಿಗೆ ತಿಳಿಸಿದ್ದಾರೆ. ನಮ್ಮ ಬಳಿ ಸಕ್ಕರೆ ಇಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡು ಪತಿಯನ್ನು ಕೆಳಕ್ಕೆ ಕೆಡವಿ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ಯಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಪಾಂಡುರಂಗಯ್ಯನವರು ಚಿರಾಡುತ್ತಿರುವ ಶಬ್ದ ಕೇಳಿ ಹೊರಗೆ ಬಂದು ನೋಡಿದೆ. ಒಬ್ಬ ವ್ಯಕ್ತಿ ಪತಿಯ ಕಾಲು ಹಿಡಿದುಕೊಂಡಿದ್ದ, ಇನ್ನೊಬ್ಬ ವ್ಯಕ್ತಿ ಕತ್ತು ಕುಯ್ಯುತ್ತಿದ್ದಿದ್ದನ್ನು ಕಂಡು ಚಿರಾಡಿದಾಗ ಬಿಟ್ಟು ಓಡಿ ಹೋದರು ಎಂದು ಲಕ್ಷ್ಮಮ್ಮ ದೂರದಲ್ಲಿ ತಿಳಿಸಿದ್ದಾರೆ.
ಲಕ್ಷ್ಮಮ್ಮ ತಕ್ಷಣವೇ ಹಾಲೇಶ್ ಅವರ ತಂದೆ ಮಲ್ಲಿಕಪ್ಪ ನವರಿಗೆ ಫೆÇೀನು ಮಾಡಿ ತಿಳಿಸಿದೆನು. ನಂತರ ಆಂಬುಲೆನ್ಸ್ ತರಿಸಿಕೊಂಡು ಶಿವಮೊಗ್ಗ ಮಗ್ಗಾನ ಆಸ್ಪತ್ರೆಗೆ ದಾಖಲಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಸ್ಥಳಕ್ಕೆ ನ್ಯಾಮತಿ ಪೆÇಲೀಸ್ ಇನ್ಸ್ಪೆಕ್ಟರ್ ಜಯಪ್ಪನಾಯ್ಕಅವರು ತಂಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಇದ್ದ ಚಾಕುವನ್ನು ವಶಕ್ಕೆ ಪಡೆದುಕೊಂಡು ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.