ನ್ಯಾಮತಿ: ತಾಲೂಕು ದಾನೇಹಳ್ಳಿ ಗ್ರಾಮದಲ್ಲಿರುವ ತರುಳುಬಾಳು ಜಗದ್ಗುರು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ 2023ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರಾದ ತೀರ್ಥಲಿಂಗಪ್ಪ ಡಿ ದೀಪ ಬೆಳಗಿಸಿದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಾನೇಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ತರಳಬಾಳು ಜಗದ್ಗುರು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಪ್ರಾರಂಭಗೊಂಡು ಇಲ್ಲಿಗೆ 18 ವರ್ಷ ತುಂಬಿ ಎತ್ತರಕ್ಕೆ ಬೆಳೆದಿದ್ದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ಸುಮಾರು 16 ಎಕ್ಕರ ಜಾಗದಲ್ಲಿ ಬೆಳೆದು ನಿಂತು ಅಕ್ಕಪಕ್ಕದ ಗ್ರಾಮದ ಬಡ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
2023ನೇ ಸಾಲಿನ ಸಾಂಸ್ಕøತಿಕ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿಚರಿಸಲಾಯಿತು. ಅದಾದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಜರುಗಿತು. ಪ್ರಾಸ್ತಾವಿಕ ನುಡಿ ಮಲ್ಲೇಶಪ್ಪ ಗಂಜೀನಹಳ್ಳಿ ನಡೆಸಿಕೊಟ್ಟರು.
ಕಮಲ ನೆಹರು ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಧ್ಯಾಪಕ ಕಿರಣ್ ದೇಸಾಯಿ ಅವರು ವಿದ್ಯಾರ್ಥಿಗಳಿಗೆ ಮತ್ತು ಪೆÇೀಷಕರಿಗೆ ಉಪನ್ಯಾಸವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಈಶ್ವರಪ್ಪಗೌಡ ಅರಬಗಟ್ಟೆ, ಪರಮೇಶ್ವರಪ್ಪ ಕೋಡಿಕೊಪ್ಪ, ಮನೋಹರ್ ಕೆ ವಿ, ಜಯಪ್ಪ ಡಿ, ಸತೀಶ್ ಎಂ ,ಹಾಲೇಶಪ್ಪ ಕೆ, ಉಜ್ಜಿನಪ್ಪ ಜಿ, ಜಯಪ್ಪ ಎಂ, ಬಸವರಾಜಪ್ಪ ಕೆ ಸಿ, ಡಾ. ಶಶಿಧರಗೌಡ್ರು ಮತ್ತು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಸೇರಿದಂತೆ ಪೆÇೀಷಕರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.