ನ್ಯಾಮತಿ: ತಾಲೂಕು ಮಾದಾಪುರ ಗ್ರಾಮದಲ್ಲಿ ಸರ್ವೇ ನಂಬರ್ 58/1 ,3 ಎಕರೆ ಐದು ಗುಂಟೆ ಜಮೀನಿನಲ್ಲಿ 9 ವರ್ಷಗಳಿಂದ ಬೆಳೆದ ಅಡಿಕೆ ತೋಟದಲ್ಲಿ ಎರಡನೇ ಮತ್ತು ಮೂರನೇ ಕೊಯ್ಲು ಕೊಯ್ಯುವ ಇಂಗಾರು ಬೆಳೆಯನ್ನ ಕಿಡಿಗೇಡಿಗಳು ಸುಮಾರು 300 ರಿಂದ 400 ಅಡಿಕೆ ಗಿಡದ ಇಂಗಾರ ಬೆಳೆ ಕೊಯ್ದು ಕಿಡಿಗೇಡಿಗಳು ದುಷ್ಕøತ್ಯ ವೆಸಿಗೆ ರೈತನ ಸಂಕಷ್ಟಕ್ಕೆ ಧೂಡಿದ್ದಾರೆ.
ಮಾದಾಪುರ ಗ್ರಾಮದ ಡಿ ಕೆ ನಿರ್ಮಲಾ ತೋಟಪ್ಪ ಎಂಬ ರೈತನ ತೋಟಕ್ಕೆ ಉದಯವಾಣಿ ಪತ್ರಿಕೆ ವರದಿ ಗಾರರು ಸುದ್ದಿ ಮಾಡಲು ತೆರಳಿದ ಸಂದರ್ಭದಲ್ಲಿ ಅವರು ಅಳಲನ್ನು ತೋಡಿಕೊಂಡಿದ್ದು ಹೀಗೆ, ನಾವು ನಮ್ಮ ಗ್ರಾಮದಲ್ಲಿ ಯಾರ ಹತ್ತಿರ ದ್ವೇಷ ಇಲ್ಲದೆ ಅನೂನ್ಯತೆಯಿಂದ ಬಾಳುತ್ತಿದ್ದೇನೆ. ಸುಮಾರು 9 ವರ್ಷಗಳಿಂದ ಸಾಲ ಶೂಲ ಮಾಡಿ ಅಡಿಕೆಯನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಅಡಕೆ ತೋಟವನ್ನು ಕಟ್ಟಿ ಮೊನ್ನೆ ಮೂರರಿಂದ ನಾಲ್ಕು ಕ್ಕಿಂಟಾಲ ಕೈಗೆ ಅಡಿಕೆ ಸಿಕ್ಕಿತ್ತು. ಮುಂದಿನ ವರ್ಷ ಈ ಅವಧಿಗೆ ಎರಡನೇ ಮತ್ತು ಮೂರನೇ ಕೊಯ್ಲಿಗೆ ಸುಮಾರು 40 ಕ್ಕಿಂಟಾಲ ಅಡಿಕೆ ಬರಬಹುದು ಎಂದು ನಿರೀಕ್ಷೆಯನ್ನು ಮಾಡಿದ್ದೆವು. ಆದರೆ ನಮ್ಮ ತೋಟಕ್ಕೆ ಶನಿವಾರ ರಾತ್ರಿ ದುಷ್ಕರ್ಮಿಗಳು ಬಂದು ಹಿಂಗಾರು ಕಡೆದು ನಮ್ಮ ಬದುಕನ್ನೇ ಕತ್ತಲಲ್ಲಿ ದೂಡಿದ್ದಾರೆ ಎಂದು ಉದಯವಾಣಿ ಪತ್ರಿಕೆ ವರದಿಗಾರ ಅರವಿಂದ್ ಎಸ್ ಅವರಲ್ಲಿ ಅಳಲನ್ನು ತೋಡಿಕೊಂಡರು. ನಂತರ ಕೂಡಲೇ ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರಿಂದ ಪರಿಹಾರವನ್ನು ಕೊಡಿಸುವಂತೆ ಆಗಬೇಕು ಅದರ ಜೊತೆಗೆ ಪೆÇಲೀಸ ಇಲಾಖೆಯವರಿಗೆ ದೂರನ್ನು ಸಹ ದಾಖಲಿಸಿದ್ದು,ದೂರಿನ ಆಧಾರ ಅನ್ವಯ ತಕ್ಷಣವೇ ತನೆಕೆಯನ್ನು ಮಾಡಿ ತಪ್ಪಿತಸ್ಥರನ್ನು ಹಿಡಿದು ಬಂಧಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು. ನ್ಯಾಮತಿ ಪೆÇಲೀಸ್ ಇಲಾಖೆಯವರು ದೂರಿನ ಅನ್ವಯ ಸ್ಥಳವನ್ನು ವೀಕ್ಷಣೆ ಮಾಡಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸ ಒತ್ತಾಯಿಸಿದರು. ಪೆÇಲೀಸ್ ಇನ್ಸ್ಪೆಕ್ಟರ್ ರವಿ ಇ,ಯವರು ಸ್ಥಳವನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಹುಡುಕಿ ಬಂದಿಸುತ್ತೇವೆ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ರೈತರಾದ ನಾಗರಾಜಪ್ಪ, ದೊಡ್ಡೇಶಪ್ಪ, ಹಾಲನಗೌಡ ಸಹ ಉಪಸ್ಥಿತಿಯಲ್ಲಿದ್ದರು.