ನ್ಯಾಮತಿ: ಪಟ್ಟಣಕ್ಕೆ ತುಂಗಭದ್ರ ನದಿಯಿಂದ ಸಾರ್ವಜನಿಕರಿಗೆ ದಿನನಿತ್ಯ ಕುಡಿಯಲಿಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ನೀರನ್ನು ಒದಗಿಸಲಾಗುತ್ತಿತ್ತು. ಹೊನ್ನಾಳಿ ಮತ್ತು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಸಮಯ ಪ್ರಜ್ಞೆ ಮತ್ತು ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯಲಿಕ್ಕೆ ನೀರು ತೊಂದರೆ ಆಗಬಾರದು ಎಂದು ಮನಗಂಡು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್ ಅವರಿಗೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ತುಂಗಭದ್ರ ನದಿಗೆ ಭೇಟಿ ನೀಡಿ ವೀಕ್ಷಿಸಿದರು. ಮಳೆಯ ಕೊರತೆಯಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಜಾಕ್ ವೆಲ್ ಗೆ ನೀರು ಹರಿವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಲ್ಲಿ ವ್ಯಥೆ ಉಂಟಾಗುವ ಸಂಭವಿದೆ. ಇದನ್ನು ಮನಗಂಡು ತುಂಗಭದ್ರ ನದಿಯಿಂದ 10ಹೆಚ್ ಪಿ ಮೋಟರ್ ಇನ್ನೊಂದು 15 ಎಚ್ ಪಿ ಮೋಟರ್ ನದಿಯಲ್ಲಿ ಬಿಟ್ಟು ತಾತ್ಕಾಲಿಕವಾಗಿ ತಡೆಗೋಡೆಯನ್ನು ನಿರ್ಮಿಸಿ ಜಾಕ್ ವೆಲ್ ಗೆ ನೇರವಾಗಿ ನೀರನ್ನು ಹರಿಸಿ ಪಟ್ಟಣದ ಜನರಿಗೆ ನೀರನ್ನು ಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಸಾರ್ವಜನಿಕರು ಬೇಸಿಗೆ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ನ್ಯಾಮತಿ ನಗರ ಘಟಕದ ಅಧ್ಯಕ್ಷ ಜಿ ಲೋಕೇಶಪ್ಪ, ನೀರು ಸರಬರಾಜು ಮೇಸ್ತ್ರಿ ನಾಗಪ್ಪ, ಇಂಜಿನಿಯರ್ ದೇವರಾಜ್ ಸಹ ಇದ್ದರು.

Leave a Reply

Your email address will not be published. Required fields are marked *