12ನೇ ಶತಮಾನದಲಿ ಜಗತ್ತಿಗೆ  ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು ಕಲ್ಯಾಣದ ಶರಣರು, ಅವರಲ್ಲಿ ಒಬ್ಬರ್ಲೂ ನಿಜಶರಣ ಅಂಬಿಗರ ಚೌಡಯ್ಯ ಎಂದು ಅಪಾರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.
   ಭಾನುವಾರ ಜಿಲ್ಲಾಡಳಿತ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಇವರ  ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ  ಶ್ರೀಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿಯೇ ಜಾತೀಯತೆ ಮೌಢ್ಯತೆಯನ್ನು ಖಂಡಿಸಿ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟುಕೊಂಡಿರುವ ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಾಕಾರರು ಇವರ ವಚನದಲ್ಲಿನ ತತ್ವದರ್ಶಗಳು ಸಮಾಜಕ್ಕೆ ಇಂದಿಗೂ ಮಾದರಿ.
   ಆಗಿನ ಕಾಲದಲ್ಲಿ ಜನರು ದೇವರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿರಲ್ಲಿಲ್ಲ. ಆಗ ಇಂತಹ ವಚನಕಾರರ ಮೂಲಕ ದೇವರನ್ನು ಕಾಣುತ್ತಿದ್ದರು. ಆ ಸಂದರ್ಭದಲ್ಲಿ ಬಂದವರೇ  ನಿಜ ಶರಣ ಅಂಬಿಗರ ಚೌಡಯ್ಯ ಇವರು  12ನೇ ಶತಮಾನದ ವಚನಕಾರರು, ಸಾಮಾಜಿಕ ವಿಮರ್ಶಕರು ಎಂದರು ಇವರು ತಮ್ಮ ವಿಶಿಷ್ಟವಾದ ಒಗ್ಗಟು ವಚನಗಳಿಗೆ ಹೆಸರುವಾಸಿ ಮತ್ತು ಬೇರೆ ಇತರೆ ವಚನಕಾರರಿಗಿಂತ ಬಿನ್ನರಾದವರು. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದು ದಿಟ್ಟ ನೀಲಿವಿನೊಂದಿಗೆ ನಡೆದವರು.Àು, ಮಹಾಯೋಗಿ ವೇಮನರು  15ನೇ ಶತಮಾನ ಕಂಡ ಅದ್ಭುತ ಶಾಸ್ತ್ರಜ್ಞರಾಗಿದ್ದವರು. ಸಮಾಜದಲ್ಲಿನ ಜಾತೀಯತೆ, ಅಸಮಾನತೆಯನ್ನು ಖಂಡಿಸಿದ ಮಹಾಯೋಗಿ ಎಂದು ಹೇಳಿದರು. ಕನ್ನಡಕ್ಕೆ ಸರ್ವಜ್ಞ, ತಮಿಳಿಗೆ ತಿರುವಳ್ವರ್ ಅವರಂತೆ ತೆಲುಗು ಭಾμÉಗೆ ವೇಮನರೇ ಮಹಾಕವಿ ಎಂಬುದು ಇಂದಿಗೂ ಪ್ರಚಲಿತವಾಗಿದೆ ಎಂದರು.
  ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತಾನಾಡಿ  ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ, ಎಂಬಂತೆ ಅಂಬಿಗರ ಚೌಡಯ್ಯ ಇವರು ರಚಿಸಿದ 15000 ವಚನಗಳ ಪೈಕಿ ಕೆಲವು ವಚನಗಳು ಮಾತ್ರ ಉಳಿದಿವೆ. ಹಾಗೂ ಮಹಾಯೋಗಿ ವೇಮನರ ಸಾಹಿತ್ಯ ಹಾಗೂ ಅವರ ಆದರ್ಶಗಳು ಇಂದಿಗೂ ಈ ಸಮಾಜಕ್ಕೆ ಅಗತ್ಯವಾಗಿದೆ. ಇವುಗಳನ್ನು ಉಳಿಸಿಕೊಳ್ಳುಕೊಂಡು ಅವರ ಆದರ್ಶಗಳನ್ನು ಪಾಲಿಸಿವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
  ಕನ್ನಡ ಪ್ರಾಧ್ಯಾಪಕರಾದ ಸಾಲಿಮನಿ ಮಾರುತಿ ಉಪನ್ಯಾಸ ನೀಡಿದರು.
   ಪುಟಗನಾಳು ಗಂಗಾಮತಸ್ಥರ  ಸಮಾಜ ಉಪಾಧ್ಯಕ್ಷರಾದ ಟಿ.ಮಂಜುನಾಥ, ಜಿಲ್ಲಾ ಗಂಗಾಮತಸ್ಥರ  ಸಮಾಜ ನಿರ್ದೇಶಕರು ಅಂಜಿನಪ್ಪ.ಸಿ.ವಿ ಲೆಕ್ಕಾಪತ್ರಧಿಕಾರಿ ವೆಂಕಟೇಶ್, ರಶ್ಮಿಶಾಲೆಯ ಮುಖ್ಯೋಪಾಧ್ಯರು ಹಾಗೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *