ನ್ಯಾಮತಿ: ತಾಲೂಕು ಹಳೆ ಮಳಲಿ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ಅಕ್ರಮ ಮರಳು ಸಂಗ್ರಹಿಸಿ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದ ಮೇಲೆ ನ್ಯಾಮತಿ ಪೆÇಲೀಸ್ ಮತ್ತು ಕಂದಾಯ ಇಲಾಖೆಯೊಂದಿಗೆ ಶಿವಮೊಗ್ಗ ದಾವಣಗೆರೆ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ 5:30 ರಿಂದ 11 ಗಂಟೆ ಒಳಗೆ ಜಂಟಿಯಾಗಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಗಣಿ ಇಲಾಖೆ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ 310 ಮೆಟ್ರಿ ಟನ್ ಮರಳು, ಒಂದು ಜೆಸಿಬಿ, ಟ್ರ್ಯಾಕ್ಟರ್ ಜಪ್ತಿ ಮಾಡಿ 50,000 ದಂಡ ಹಾಕಿ ಪ್ರಕರಣವನ್ನು ನ್ಯಾಮತಿ ಪೆÇಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಅಕ್ರಮ ದಾಸ್ತಾನು ಮಾಡಿದ್ದ ಮರಳನ್ನ ಪೆÇಲೀಸ್ ವಸಕ್ಕೆ ನೀಡಲಾಗಿದ್ದು ನಿಯಮಾನಸಾರವಾಗಿ ವಿಲವಾರಿ ಮಾಡಲಾಗುವುದು ಎಂದು ಗಣಿ ಮತ್ತುವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹಿರಿಯ ಭೂ ವಿಜ್ಞಾನಿ ನವೀನ್, ದಾವಣಗೆರೆ ಜಿಲ್ಲೆಯ ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ರಶ್ಮಿ. ಗಣಿ ಅಧಿಕಾರಿಗಳಾದ ಶಿವಪ್ರಸಾದ್, ಚೈತ್ರ, ಗೋವಿನ ಕೋವಿ ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್ಪೆಕ್ಟರ್ ಸಂತೋಷ್, ಪೆÇಲೀಸ್ ಇಲಾಖೆಯ ಕೆ ಮಂಜಪ್ಪ, ಸಿದ್ದಪ್ಪ ಸಹ ಘಟನಾ ಸ್ಥಳದಲ್ಲಿ ಇದ್ದರು.