ನ್ಯಾಮತಿ ತಾಲೂಕು ಬಣಜಾರ ನೂತನ ಸಮಾಜದ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ನೇಮಕಗೊಂಡು ಪ್ರಾಥಮಿಕ ಪೂರ್ವಭಾವಿ ಸಭೆ ನಡೆಯಿತು. ಶ್ರೀ ಸಂತ ಸೇವಾಲಾಲ್ ದೇವಸ್ಥಾನದ ಸಭಾಂಗಣದಲ್ಲಿ ಪ್ರಾಥಮಿಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಎಂ ಬೋಜಾನಾಯ್ಕ ಸಭೆಯಲ್ಲಿ ಮುಂದೆ ನಡೆಸಬೇಕಾದ ಕಾರ್ಯಕ್ರಮದ ಬಗ್ಗೆ ಉದ್ದೇಶಿಸಿ ಮಾತನಾಡಿದ ಅವರು ಫೆ, 13 14 15 ಮೂರು ದಿನಗಳ ಕಾಲ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ನಮ್ಮ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಯಾವ ರೀತಿ ದೇವಸ್ಥಾನದ ಸಲಹಾ ಸಮಿತಿಯ ಜೊತೆಗೆ, ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಮತ್ತು ಮಾಲಾಧಾರಿಗಳಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಊಟದ ವ್ಯವಸ್ಥೆ, ವಸತಿ ,ಶೌಚಾಲಯ ಸೇರಿದಂತೆ ಇನ್ನು ಹಲವಾರು ಸೌಕರ್ಯಗಳನ್ನು ಸಂಘದ ಸದಸ್ಯರುಗಳು ಜವಾಬ್ದಾರಿ ತೆಗೆದುಕೊಂಡು ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂದು ಚರ್ಚೆ ಮಾಡಲಾಯಿತು ಎಂದುರು. ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗಳು ಮತ್ತು ಮಾಲಾಧಾರಿಗಳು ಶಾಂತ ರೀತಿಯಿಂದ ವರ್ತಿಸಿ ಮಾಲೆಯನ್ನು ವಿಸರ್ಜಿಸಿ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಗೆ ಭಕ್ತಿ ಸಮರ್ಪಿಸಿ ಭಕ್ತಿಗೆ ಪಾತ್ರರಾಗಬೇಕು ಎಂದರು. ಸಮಾಜದ ಮುಖಂಡರಾದ ಶಿವರಾಮ ನಾಯ್ಕ, ಗೌರವಾಧ್ಯಕ್ಷರಾದ ಭೀಮಸೇ ನಾಯ್ಕ, ಉಪಾಧ್ಯಕ್ಷರಾದ ಶಂಕ್ರಾನಾಯ್ಕ, ಕಾರ್ಯದರ್ಶಿ ಸಂತೋಷ್ ನಾಯ್ಕ, ಸಹ ಕಾರ್ಯದರ್ಶಿ ಶಂಕರ ನಾಯ್ಕ, ಸರ್ವ ಸದಸ್ಯಗಳು ಹಾಗೂ ಸಮಾಜದ ಮುಖಂಡರು ಸಹ ಭಾಗಿಯಾಗಿದ್ದರು.