ನ್ಯಾಮತಿ:ಪಟ್ಟಣದಗ್ರಾಮ ಆಡಳಿತ ಅಧಿಕಾರಿಕೆ.ಜಿ.ಗಣೇಶಅವರು ಶುಕ್ರವಾರತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿಆರೋಪಿಯನ್ನು ವಶಕ್ಕೆ ಪಡೆದುತನಿಖೆಕೈಗೊಂಡಿದ್ದಾರೆ.
ತಾಲ್ಲೂಕಿನ ಕುಂಕುವ ಗ್ರಾಮದ ವೀರೇಶಅವರುತಮ್ಮ ಸಹೋದರ ಹರ್ಷಅವರ ಅಂಗವಿಕಲ ಮಾಸಾಶನ ಪ್ರಮಾಣ ಪತ್ರ ಮಾಡಿಸಲು ನ್ಯಾಮತಿ ನಾಡಕಚೇರಿಗೆಅರ್ಜಿ ಸಲ್ಲಿಸಿದ್ದು, ಸದರಿಅರ್ಜಿಯನ್ನುತಮ್ಮ ಲಾಗಿನ್‍ನಿಂದ ಕಳುಹಿಸಲು ರೂ. 6 ಸಾವಿರಕ್ಕೆ ಬೇಡಿಕೆಇಟ್ಟಿದ್ದು, ಅಂತಿಮವಾಗಿರೂ.5 ಸಾವಿರಕ್ಕೆ ಹೊಂದಿಸಿಕೊಂಡಿದ್ದಾರೆ.
ಗಣೇಶಅವರು ಮಾಸಾಶನಅರ್ಜಿಯನ್ನು ಶಿಫಾರಸ್ಸು ಮಾಡಲು ಲಂಚದ ಹಣ ಬೇಡಿಕೆಇಟ್ಟದೂರಿನ ಮೇರೆಗೆದಾವಣಗೆರೆ ಲೋಕಾಯುಕ್ತ ಪೊಲೀಸ್‍ಠಾಣೆಗೆದೂರು ನೀಡಿದ ಹಿನ್ನೆಲೆಯಲ್ಲಿತನಿಖೆಕೈಗೊಂಡುಆರೋಪಿ ಬಸವನಹಳ್ಳಿ ಗ್ರಾಮದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಫಿರ್ಯಾಧಿಕಡೆಯಿಂದರೂ. 5 ಸಾವಿರ ಲಂಚದ ಹಣವನ್ನು ಪಡೆಯುವಾಗದಸ್ತಗಿರಿ ಮಾಡಲಾಗಿದೆ.
ದಾವಣಗೆರೆಲೋಕಾಯುಕ್ತಪೊಲೀಸ್‍ಅಧೀಕ್ಷಕಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್‍ಉಪಾಧೀಕ್ಷರಾದ ಕೆ.ಕಲಾವತಿ, ಪೊಲೀಸ್ ನಿರೀಕ್ಷಕಎಚ್.ಎಸ್.ರಾಷ್ಟ್ರಪತಿ ಮತ್ತು ಮಧುಸೂದನ್ ಸಿ. ಹಾಗೂ ಸಿಬ್ಬಂದಿಗಳಾದ ವೀರೇಶಯ್ಯ, ಸುಂದರೇಶ,ಸುರೇಶ, ಮಲ್ಲಿಕಾರ್ಜುನ, ಧನರಾಜ, ಮಂಜುನಾಥ, ಗಿರೀಶ, ಲಿಂಗೇಶ, ಬಸವರಾಜ, ಕೋಟಿನಾಯ್ಕ, ಬಸವರಾಜಅವರುಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *