ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆಇಂದು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಹ ನಡೆಯಿತು.

ಅಧ್ಯಕ್ಷರ ಗಾದೆಗೆ ಜಿ ಪರಮೇಶ್ವರಪ್ಪ ಉಪಾಧ್ಯಕ್ಷರ ಗಾದೆಗೆ ಲಕ್ಷ್ಮಿ ಬಿ (ಕನಕ ಕರಿ)ನಾಮಪತ್ರ ಅರ್ಜಿಯನ್ನು ಸಲ್ಲಿಸಿದರು. ಬೇರೆ ಯಾವ ನಿರ್ದೇಶಕರುಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ಚುನಾವಣಾ ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಜಿ ಪರಮೇಶ್ವರಪ್ಪ ಉಪಾಧ್ಯಕ್ಷರಾಗಿ ಲಕ್ಷ್ಮಿ ಬಿ(ಕನಕರಿ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ಹಾಗೂ ರಿಟನಿರ್ಂಗ್ ಅಧಿಕಾರಿ ಶ್ರೀಮತಿ ನಿವೇದಿತ ಘೋಷಣೆ ಮಾಡಿದರು.

ನಿರ್ದೇಶಕರುಗಳಾದ ಸಿದ್ದೇಶ್, ವಿ ಎಚ್ ರುದ್ರೇಶ್, ಆನಂದಪ್ಪ ಹೆಚ್, ದಾನಪ್ಪ ಎಸ್, ಯು ಎಸ್ ನಾಗರಾಜಪ್ಪ, ಶಾರದಾ ಹೆಚ್ಚ್, ಸಿ, ಸುಜಾತ, ಕಾರ್ಯದರ್ಶಿ ವಿ ಆರ್ ವೀರೇಶ್. ಹಾ, ಪರೀಕ್ಷಕರು ರಾಹುಲ್, ಎಂ ಎಚ್, ಮೈಲಾರಪ್ಪ ಇನ್ನು ಮುಂತಾದವರು ಸಹ ಇದ್ದರು.

Leave a Reply

Your email address will not be published. Required fields are marked *