ನ್ಯಾಮತಿ: ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‍ಅವರ 285ನೇ ಜಯಂತ್ಯುತ್ಸವಕಾರ್ಯಕ್ರಮಕ್ಕೆ ಬುಧವಾರ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಮತ್ತುಇನ್ನಿತರ ಭಕ್ತರು ವಿವಿಧ ವಾಹನಗಳ ಮೂಲಕ ಭಕ್ತರ ಸಮೂಹ ಹರಿದು ಬರುತ್ತಿದೆ.
ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಮಾಲಾಧಾರಿಗಳಲ್ಲಿ ಮಕ್ಕಳು ಒಳಗೊಂಡಂತೆ ದಾರಿಯಲ್ಲಿ ಭಕ್ತಿಯಿಂದ ಸೇವಾಲಾಲ್ ಭಜನೆ, ನೃತ್ಯ ಮಾಡುತ್ತ, ಇಡಿಮುರಿತಲೆಮೇಲೆ ಹೊತ್ತುಆಗಮಿಸುತ್ತಿದ್ದಾರೆ. ಭಾಯಾಗಡ್‍ಗೆ ಬಂದ ನಂತರ ಮೊದಲು ಮರಿಯಮ್ಮದೇವಿ ದರ್ಶನ ನಂತರ ಸೇವಾಲಾಲ್‍ಅವರದರ್ಶನ ಪಡೆದ ಮಾಲಾಧಾರಿಗಳು ಪವಿತ್ರ ವೃಕ್ಷದ ಬಳಿ ಗುರುಗಳ ಸಮ್ಮುಖದಲ್ಲಿ ಮಾಲಾ ವಿಸರ್ಜನೆ ಮಾಡುವುದರೊಂದಿಗೆ ವ್ರತ ನಿಯಮವನ್ನು ಸಂಪನ್ನಗೊಳಿಸಿದರು.
ಮಾಲಾ ವಿಸರ್ಜನೆ ಮಾಡಿದ ನಂತರ ಸ್ವಗ್ರಾಮಗಳಿಗೆ ತೆರಳಿ, ಅಲ್ಲಿ ಸೇವಾಲಾಲ್ ಮತ್ತು ಮರಿಯಮ್ಮಅವರ ಪೂಜೆಯನ್ನು ಮಾಡುತ್ತೇವೆ. ನಮ್ಮ ಶಕ್ತಾನುಸಾರ 5,7 ದಿನಗಳ ಮಾಲೆ ಹಾಕುತ್ತೇವೆ, ಇನ್ನು ಕೆಲವರು ಬೆಳಿಗ್ಗೆ ಬಂದುದೇವಸ್ಥಾನದಲ್ಲಿ ಮಾಲೆ ಹಾಕುತ್ತಾರೆ. ಮಾಲಾಧಾರಿಗಳಾದ ಸಮಯದಲ್ಲಿ ನಾವು ಮನೆಗೆ ಹೋಗುವುದಿಲ್ಲ, ಹೆಂಗಸರು ಮಾಡಿದಅಡುಗೆ ಊಟ ಮಾಡುವುದಿಲ್ಲ, ಎರಡು ಹೊತ್ತು ಸ್ನಾನ ಮಾಡಿ ಪೂಜೆ ಮಾಡುತ್ತೇವೆ. ಸೇವಾಲಾಲ್‍ಕ್ಷೇತ್ರಕ್ಕೆ ಬರುತ್ತಿರುವುದರಿಂದ ನಮಗೆ ಒಳ್ಳೆಯದಾಗಿದೆ ಎಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಾಲಾಧಾರಿಗಳು ಹೇಳುತ್ತಾರೆ. ವಿವಿಧ ತಾಲ್ಲೂಕುಗಳಿಂದ ಬರುವ ಭಕ್ತರಿಗೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ, ಚಿನ್ನಿಕಟ್ಟೆಯಿಂದ ಭಾಯಾಗಡ್‍ವರೆಗೆಆಟೋ ಸೇವೆ ಸೌಲಭ್ಯ ಒದಗಿಸಿದ್ದು, ಮೊಬೈಲ್ ಶೌಚಾಲಯ, ತಾತ್ಕಲಿಕ ಸ್ನಾನಗೃಹ, ವಿಶ್ರಾಂತಿಗಾಗಿಜಮೀನಿನಲ್ಲಿಜಾಗ, ಕುಡಿಯುವ ನೀರು, ಬೆಳಕು, ವೈದ್ಯಕೀಯ ಸೌಲಭ್ಯ ಒಳಗೊಂಡಂತೆ ಮೂಲ ಸೌಲಭ್ಯಒದಗಿಸುವಲ್ಲಿತಾಂಡಅಭಿವೃದ್ದಿ ನಿಗಮ ಮತ್ತುಜಿಲ್ಲಾ ಮತುತಾಲ್ಲೂಕು ಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಪೊಲೀಸ ಇಲಾಖೆ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದು, ವಾಹನಗಳ ನಿಲುಗಡೆ, ವಿವಿಧ ವಾಹನಗಳ ನಿಲುಗಡೆಗೆಕ್ರಮಕೈಗೊಂಡಿದೆ.