ನ್ಯಾಮತಿ:
ತಾಲ್ಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್‍ಅವರಜನ್ಮಸ್ಥಾನದಲ್ಲಿ 285ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರಅವರು ಸಭೆಯನ್ನುದ್ದೇಶಿ ಮಾತನಾಡಿದರು.
ಮುಂ:ದಿನ ವರ್ಷದ ಸೇವಾಲಾಲ್‍ಜಯಂತ್ಯುತ್ಸವ ಸಮಯಕ್ಕೆ ಭಾಯಾಗಡ್‍ಗೆರೈಲು ಸಂಚಾರಆರಂಭ ಮತ್ತು ಭಾಯಾಗಡ್‍ರೈಲು ನಿಲ್ದಾಣಉದ್ಘಾಟನೆ ಮಾಡುವುದಾಗಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಭಾಯಾಗಡ್‍ನಲ್ಲಿ ಸಂತ ಸೇವಾಲಾಲ್‍ಅವರ 285ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಮೊಗ್ಗ ಶಿಕಾರಿಪುರ ರೈಲು ಸಂಚಾರ ಮಾರ್ಗವನ್ನು ಸೂರಗೊಂಡನಕೊಪ್ಪ ಮಾರ್ಗವಾಗಿರಾಣೆಬೆನ್ನೂರಿಗೆ ಸಂಚರಿಸಲುÀರೈಲು ಮಾರ್ಗಕ್ಕೆರೂ.2 ಸಾವಿರಕೋಟಿಅನುದಾನದಲ್ಲಿರೈಲು ಮಾರ್ಗ ನಿರ್ಮಾಣವಾಗಲಿದಎಂದರು.
ಮಾಜಿ ಮುಖ್ಯಮಂತ್ರಿ ಬಿ..ಎಸ್.ಯಡಿಯೂರಪ್ಪಅವರು ಸಂತ ಸೇವಾಲಾಲ್‍ಕ್ಷೇತ್ರಕ್ಕೆ 40 ಕೋಟಿಅನುದಾನವನ್ನು ಪ್ರಥಮವಾಗಿ ನೀಡಿದರು.ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾ ಹೆಚ್ಚಿನಅನುದಾನ ನೀಡಿದರು.ವ್ಯಕ್ತಿಗಳು ಶಾಶ್ವತವಲ್ಲ ನಾವು ಏನು ಮಾಡಿದೆವುಎಂಬುದು ಮುಖ್ಯಎಂಬುದಕ್ಕೆ ಸೇವಾಲಾಲ್‍ಅವರಕ್ಷೇತ್ರವೇ ಸಾಕ್ಷಿಎಂದರು.
ಪವಿತ್ರಯಾತ್ರಕ್ಷೇತ್ರವಾದ ಸೇವಾಲಾಲ್‍ಅವರಜನ್ಮಸ್ಥಾನಕ್ಕೆ ಪಕ್ಷಾತೀತವಾಗಿಎಲ್ಲರೂಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.ಈ ಕ್ಷೇತ್ರಅಯ್ಯಪ್ಪಸ್ವಾಮಿ, ಧರ್ಮಸ್ಥಳ ಪುಣ್ಯಕ್ಷೇತ್ರಗಳಂತೆ ಬೆಳೆಯಬೇಕದೆ.ಸಂತ ಸೇವಾಲಾಲ್‍ದೇವಸ್ಥಾನಕ್ಕೆ ಮಾಲಾಧಾರಿಗಳು ಬರಿಗಾಲಿನಲ್ಲಿ, ಮುಡಿಕಟ್ಟಿಕೊಂಡು ಬರುತ್ತಿರುವಯುವ ಸಮುದಾಯವನ್ನುಕಂಡು ಸಂತಸವಾಯಿತುಎಂದರು.
ಬಂಜಾರ ಸಮುದಾಯದ ಹೆಣ್ಣುಮಕ್ಕಳು ಕವಲೆಹಣ್ಣು, ಬಾರೆಹಣ್ಣು ಬದುಕು ಸಾಗಿಸಿ ಮಕ್ಕಳುಗೆ ವಿದ್ಯಾಭ್ಯಾಸ ನೀಡಿದ್ದರಿಂದಇಂದು ಮಕ್ಕಳು ವಿದ್ಯಾವಂತರಾಗಿ ಪ್ರತಿಯೊಬ್ಬರ ಮನೆಯಲ್ಲಿ ಬೈಕು, ಕಾರು ಹೊಂದಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇದಕ್ಕೆಲ್ಲತಮ್ಮ ತಂದೆತಾಯಿಗಳ ಆಶೀರ್ವಾದ ಕಾರಣಎಂದರು.
ಭಾಯಾಗಡ್‍ನಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯವುದಕ್ಕೆ ಸಮುದಾಯವರುಜಾಗವನ್ನು ಗುರುತಿಸಿ ಮನವಿ ಪತ್ರಕೊಟ್ಟರೆಕೇಂದ್ರದಲಿ ನಾನು ಮತ್ತು ಸಂಸದಡಾ.ಉಮೇಶಜಾಧವ್ ಸೇರಿ ಮಂಜೂರಾತಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡಅವರು, ಸಂತ ಸೇವಾಲಾಲ್‍ಅವರಕ್ಷೇತ್ರಅಭಿವೃದ್ದಿಗೆತಮ್ಮ ಶಾಸಕ ಅವಧಿಯಲ್ಲಿ ಸಾಕಷ್ಟು ಅನುದಾನ, ಬಗರ್‍ಹುಕುಂ ಸಾಗುವಳಿ ಜಮೀನು ನೀಡಿದ್ದು.ಮುಂದೆಯೂ ಸಹ ಕ್ಷೇತ್ರದಅಭಿವೃದ್ಧಿಕಾರ್ಯಕ್ಕೆತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *