ನ್ಯಾಮತಿ: ತಾಲೂಕು ದಾನೆಹಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಮಾಹಿತಿಯ ಕಾರ್ಯಗಾರ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ತರಬೇತಿಯ ಕಾರ್ಯಗಾರದ ಉದ್ಘಾಟನೆಯನ್ನು ಡಾ, ಜ್ಯೋತಿ ನೆರವೇರಿಸಿ ನಂತರ ಮಾತನಾಡಿದವರು ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದು, ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕ್ಯಾನ್ಸರ್ ಕಾಯಿಲೆ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಶಿವಮೊಗ್ಗದ ಐ,ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಂದೀಪ್ ಹಾಗೂ ಮುರುಳಿಯವರು ಕಣ್ಣಿನ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಗಾರದಲ್ಲಿ ಸ್ತ್ರೀ ಬಂದು ಒಕ್ಕೂಟದ ಅಧ್ಯಕ್ಷರಾದ ಜಿ,ಪಿ ಸುನಿತಾ, ಸಂಸ್ಥೆಯ ಕಾರ್ಯಕರ್ತೆ ಲಿಲ್ಲಿಲೋಫೇಸ ಅವರು ನಿರೂಪಿಸಿದರು. ಸ್ವಾಗತವನ್ನು ಗೀತಾ ನಡೆಸಿಕೊಟ್ಟರು.