ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಯಾವೊಂದು ಸರ್ಕಾರಗಳು ಪತ್ರಕರ್ತರ ನೋವಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಕಿವಿ ಇದ್ದು ಕುರುಡರಾಗಿದ್ದು ಪ್ರತಿಯೊಬ್ಬ ಪತ್ರಕರ್ತರಿಗೆ ತಿಳಿದಂತ ವಿಚಾರ. ರಾಜ್ಯದ ಪ್ರಮುಖ ಕೆಲ ಪತ್ರಕರ್ತರ ಸಂಘಟನೆಗಳು ಮಾಲಿಕರಿಂದ ಪೇಸ್ಲಿಫ್ ಗಾಗಿ,ಜೀವವಿಮೆ ಕೊಡಿಸುವುದಕ್ಕೆ ತುಟಿ ಪಿಟಕ್ ಎನ್ನದೆ ಸರ್ಕಾರದ ವಿರುದ್ದ ಧ್ವನಿ ಎತ್ತಿ ಹೋರಾಟ ಮಾಡದೇ ಬರೀ ಅವರ ಕಛೇರಿ ಬಾಗಿಲುಗಳನ್ನು ಕಾದ ಫಲದಿಂದ ಇಲ್ಲಿಯವರೆಗೆ ರಾಜ್ಯದ ಗ್ರಾಮಾಂತರ ಪತ್ರಕರ್ತರಿಗೆ ಬಸ್-ಪಾಸ್ ಮರೀಚಿಕೆಯಾಗಿತ್ತು. ಕಳೆದ ಎರೆಡು ವರ್ಷಗಳಿಂದ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಹೋರಾಟದ ಫಲವಾಗಿ ಇಂದು ಪತ್ರಕರ್ತರ ಮೊಗದಲ್ಲಿ ಕೊಂಚ ಸಂತೋಷ ಮೂಡಿರುವುದಂತೂ ಸತ್ಯ. ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗದಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎರೆಡು ಬೃಹತ್ ಪ್ರಮಾಣದ ಧರಣಿ ಪ್ರತಿಭಟನೆ ಹೋರಾಟಗಳು,2023 ಆಗಸ್ಟ್ 14 ರಂದು ಬೆಂಗಳೂರು ನಗರದ ಫ್ರಿಡಂ ಪಾರ್ಕಾ ನಲ್ಲಿ ನಮ್ಮ ಕಾನಿಪ ಧ್ವನಿ ವತಿಯಿಂದ ಸ್ವಾತಂತ್ರ್ಯ ಬಂದಾಗಿನಿಂದ ನಮಗೆ ಇದುವರೆಗೂ ಸ್ವಾತಂತ್ರ್ಯ ಸಿಗದೆ ಮೂಲಭೂತ ಕಾಣದಾಗಿದೆ ಎಂಬ ತೀಕ್ಷ್ಣವಾದ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ ನವರ ಸರ್ಕಾರ ದಿನಾಂಕ:-21/8/2023 ರಂದು ಗೃಹ ಕಛೇರಿ ಕೃಷ್ಣಾದಲ್ಲಿ ಸಭೆ ಸೇರಿ ಸುಧೀರ್ಘ ಚರ್ಚೆ ಪತ್ರಕರ್ತರ ಸಂಘಟನೆಗಳ ಅಧ್ಯಕ್ಷರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ್ದು ಇತಿಹಾಸ. ತದನಂತರ ರಾಜ್ಯಾಧ್ಯಂತ ನಮ್ಮ ಕಾನಿಪ ಧ್ವನಿ ವತಿಯಿಂದ ಉಚಿತ ಬಸ್-ಪಾಸ್ ಹಾಗೂ ಇನ್ನೀತರ ಬೇಡಿಕೆ ಕುರಿತಂತೆ ರಕ್ತ ದಿಂದ ಸಹಿ ಮಾಡಿದಂತ ಮನವಿಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ರವಾನಿಸಿದ್ದು ಮಾಧ್ಯಮ ಲೋಕದಲ್ಲಿ ಒಂದು ಇತಿಹಾಸವೇ ಸರಿ ಎನ್ನುವಂತೆ ಇತ್ತೀಚೆಗೆ ನಡೆದ ಪತ್ರಕರ್ತರ ರಾಜ್ಯಸಮ್ಮೇಳನದಲ್ಲಿ ಅನೇಕ ದಿನ ಪತ್ರಿಕೆಯ ಮುಖಪುಟದಲ್ಲಿ “ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ನವರಿಗೆ ಪತ್ರಕರ್ತರ ಕೆಲ ಪ್ರಶ್ನೆಗಳು ಎಂಬ ಶೀರ್ಷಿಕೆಯಲ್ಲಿ” ನಾಡಿನ ಹದಿನಾರು ಸಾವಿರ ಪತ್ರಕರ್ತರ ನೋವಿನ ಕುರಿತು ಮೂಡಿದಂತ ನಾನು ಬರೆದ ಹರಿತವಾದ ಲೇಖನವನ್ನು ಗಮನಿಸಿರುವ ಸಾಮಾಜಿಕ ಹರಿಕಾರ ಅಂದಿನ ಸಮ್ಮೇಳನದಲ್ಲಿ ಮುಂದಿನ ಫೆಬ್ರವರಿ 2024 ರ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್-ಪಾಸ್ ಘೋಷಿಸುತ್ತೇನೆ ಎಂಬ ಮಾತನ್ನು ಉಳಿಸಿಕೊಂಡು ಇಂದು ಮಾಧ್ಯಮದವರ ಪಾಲಿಗೆ ಮಾಧ್ಯಮ ರಾವಣರಾಗದೇ, ಮಾಧ್ಯಮ ರಾಮಯ್ಯ ರಾಗಿದ್ದು ಸಂತೋಷದ ಸಂಗತಿ. ಮಗು ಅತ್ತರೆ ತಾಯಿ ಹಾಲು ನೀಡಲು ಮುಂದಾಗುವಳು ಎಂಬುವಂತೆ ಪತ್ರಕರ್ತರ ಸಂಘಟನೆಗಳ ಮುಖಂಡರುಗಳು ಹೋರಾಟ ಮಾಡದೇನೆ ಸವಲತ್ತು ಪಡೆಯಲು ಸಾಧ್ಯವೇ ಎನ್ನುವಂತ ಕೆಲ ಸಂಘಟನೆಯ ರಾಜ್ಯಾಧ್ಯಕ್ಷರು ಬರೀ ಮನವಿ ನೀಡಿ ತಮ್ಮ ಮನವಿಯಿಂದಲೇ ಇದ್ದು ದಕ್ಕಿದ್ದು ಎನ್ನುವಂತೆ ಬಿಂಬಿಸುತ್ತಿರುವುದು ವಿಷಾದಕರ ಜೊತೆಗೆ ನಮ್ಮ ಕಾನಿಪ ಧ್ವನಿ ಹೋರಾಟಕ್ಕೆ ಸ್ಪಂಧಿಸಿರುವ ಮುಖ್ಯಮಂತ್ರಿಗಳು ದಿನಾಂಕ:- 20/1/2024 ರಂದು ಪತ್ರದ ಮುಖೇನಾ ನಿಮ್ಮ ಬೇಡಿಕೆಗಳಿಗೆ ಸ್ಪಂಧಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಪತ್ರ ಬಂದಿದ್ದು ಈ ಪತ್ರದ ಪ್ರತಿ ರಾಜ್ಯದ ಪತ್ರಕರ್ತರ ಗಮನಕ್ಕೆ ತರಬಯಸುತ್ತಿದ್ದೇನೆ. ಒಟ್ಟಾರೆ ಒಂದು ಹಂತದ ಜಯವನ್ನು ಸಾಧಿಸಿರುವ ನಮಗೆ ಮುಂದಿನ ದಿನಮಾನಗಳಲ್ಲಿ ಪತ್ರಕರ್ತರ ಸೇವಾ ಭದ್ರತೆಯ ಪೇಸ್ಲಿಫ್,ಜೀವವಿಮೆ,ಪತ್ರಕರ್ತರ ರಕ್ಷಣಾ ಕಾಯ್ದೆ, ನಿವೃತ್ತರಾದ ಪ್ರತಿಯೊಬ್ಬ ಪತ್ರಕರ್ತರಿಗೂ ಮಾಶಾಸನ ಹಾಗೂ ಟೋಲ್ ಗಳಲ್ಲಿ ಉಚಿತ ವಾಹನ ಪ್ರಯಾಣಕ್ಕಾಗಿ ಹೋರಾಟ ತೀವ್ರಗೊಳಿಸಲು ರೂಪುರೇಷ ನಡೆದಿದೆ ಎಂದು ತಮ್ಮ ಗಮನಕ್ಕೆ ತರಬಯಸುತ್ತಾ ಒಟ್ಟಾರೆ ಹದಿನಾರು ಸಾವಿರ ಪತ್ರಕರ್ತರ ವಿಜಯ ಇದು ಎನ್ನುತ್ತಾ ಮಾನ್ಯ ಮುಖ್ಯಮಂತ್ರಿಗಳಾದ ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ನವರಿಗೆ ನಮ್ಮ ಕಾನಿಪ ಧ್ವನಿ ಸಂಘಟನೆವತಿಯಿಂದ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಆದ ನಾನು ಹಾಗೂ ಪದಾಧಿಕಾರಿಗಳೆಲ್ಲಾ ಹೃದಯ ಪೂರ್ವಕ ನಮನಗಳನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕಾನಿಪ ಧ್ವನಿ ಸಂಘಟನೆ.ಮೊ:-9535290300