ನ್ಯಾಮತಿ: ಪಟ್ಟಣದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೆ,ಪಿ ನಡ್ದಾರವರ ಅಪೇಕ್ಷೆ ಮೇರೆಗೆ ವಿಕಸಿತ ಭಾರತಕ್ಕಾಗಿ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಯಿತು. ಭಾರತೀಯ ಜನತಾ ಪಾರ್ಟಿ ಮಾಜಿ ಅಧ್ಯಕ್ಷ ಎ,ಬಿ ಹನುಮಂತಪ್ಪ ಮತ್ತು ಪಟ್ಟಣದ ಪಕ್ಷದ ಮುಖಂಡರೊಂದಿಗೆ ಜೊತೆಗೂಡಿ ಮತ್ತೆ ಬಿಜೆಪಿ ಮತ್ತೆ ಮೋದಿ ಎಂಬ ಗೋಡೆ ಬರ ಮಾಡುವುದರ ಮೂಲಕ ಜಾಗೃತಿ ಮೂಡಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ವಿ ಚೆನ್ನಪ್ಪ, ಬಿಜೆಪಿಗೆ ಉಪಾಧ್ಯಕ್ಷ ಎಂ,ಯು ನಟರಾಜ್, ಪ್ರಧಾನ ಕಾರ್ಯದರ್ಶಿ ಸಿಕೆ ರವಿ, ಮಾ, ಗ್ರಾ, ಪಂ, ಸದಸ್ಯರಾದ ಯಶೋಧಮ್ಮ, ಸತೀಶ್, ಹಾಗೂ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಸಹ ಭಾಗಿಯಾಗಿದ್ದರು.