ನ್ಯಾಮತಿ: ೬೬/೧೧ ಕೆವಿ, ಕತ್ತಿಗೆ ವಿದ್ಯುತ್ ವಿತರಣಾ ಕೇಂದ್ರದ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕೆಲಸ ಶನಿವಾರ ದಿ, 17 ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಹಮ್ಮಿಕೊಂಡಿದ್ದು ಸದರಿ ವಿದ್ಯುತ್ ವಿತರಣಾ, ವಿದ್ಯುತ್ ವಿತರಣೆ ಯಾಗುವ ಬೆಳಗುತ್ತಿ, ಮಲ್ಲಿಗೆನಹಳ್ಳಿ ಜಿನಹಳ್ಳಿ ಗುಡ್ಡಿಹಳ್ಳಿ, ಹೊಸಕೊಪ್ಪ ಮತ್ತು ನೆರಿಗೆನಕೆರೆ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯೆತೆಯಾಗಲಿದ್ದು, ಗ್ರಾಹಕರು ಎಂದೆನಂತೆ ಸಹಕರಿಸುವಂತೆ ಮನವಿಯನ್ನ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಶ್ರೀನಿವಾಸ್ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ದಿನ ಬೆಸ್ಕಾಂ ನ್ಯಾಮತಿ ಉಪ ವಿಭಾಗ ಕಚೇರಿಯಲ್ಲಿ ಶನಿವಾರ ದಿ, 17ರ ಮಧ್ಯಾಹ್ನ 3:00ರಿಂದ ಸಂಜೆ 5:30ರ ವರೆಗೆ ನ್ಯಾಮತಿ ಉಪವಿಭಾಗ ಕಚೇರಿಯಲ್ಲಿ ಕುಂದು ಕೊರತೆ ಸಭೆ ಏರ್ಪಡಿಸಲಾಗಿದ್ದು, ಗ್ರಾಹಕರು ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಬೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ.