ನ್ಯಾಮತಿ: ಸಾಂಸ್ಕøತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.
ನ್ಯಾಮತಿ ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ಬಸವಣ್ಣನವರು ಜಾತಿ, ಧರ್ಮ ಲಿಂಗ ಬೇಧವಿಲ್ಲದೆ ಸಮಾನತೆ, ಪ್ರಜಾಪ್ರಭುತ್ವ ಕಲ್ಪನೆಯನ್ನು ಕಟ್ಟಿದವರು. 12 ನೇ ಶತಮಾನದಲ್ಲಿ ಬಸವಣ್ಣನವರ ವಚನಗಳು ಸಮಾಜದಲ್ಲಿನ ಅಸಮಾನತೆ, ಅಂಕುಡೊಂಕುಗಳನ್ನು ತಿದ್ದುವಂತದ್ದಾಗಿದ್ದವು ಹಾಗೂ ಇಂದಿಗೂ ವಚನಗಳು ಅತ್ಯಂತ ಪ್ರಸ್ತುತವಾಗಿದೆ.
ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲಿ ಇಂತಹ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಿದ್ದು ಇದರ ಅನ್ವಯ ಇಂದು ಭಾವಚಿತ್ರ ಅನಾವರಣ ಮಾಡಲಾಗಿದೆ. ಬಸವಣ್ಣವರ ಭಾವಚಿತ್ರವನ್ನು ಕಚೇರಿಗಳಲ್ಲಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ಅಧಿಕಾರಿಗಳು, ಸಾರ್ವಜನಿಕರು ಅವರ ವಚನಗಳಲ್ಲಿನ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ರಾಜ್ಯದಲ್ಲಿ ಈ ಕಾರ್ಯಕ್ರಮ ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿ ಹಾಗೂ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು ಜಗತ್ತಿನಲ್ಲಿ ಪ್ರಸಾರವಾಗಲಿ ಎಂದ ಅವರು ಇದಕ್ಕಾಗಿ ನಾವುಗಳು ಅವರ ಜೀವನದ ತತ್ವ, ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

ಉಪ ವಿಭಾಗದ ಅಧಿಕಾರಿ ಹುಲ್ಲಮನೆ ತಿಮ್ಮಣ್ಣನವರು ಮಾತನಾಡಿ 12ನೇ ಶತಮಾನದಲ್ಲಿ ಸಂಸ್ಕøತವನ್ನು ಯಾರು ಕದ್ದು ಕೇಳುತ್ತಿದ್ದರೋ ಅವರ ಕಿವಿಗೆ ಸಿಸಿಯನ್ನ ಹಾಕಬೇಕು ಎಂದು ಕೆಲವೊಂದು ದುಷ್ಟ ಶಕ್ತಿಗಳು ಮಾಡುತ್ತಿದ್ದವು, ಆ ಸಂದರ್ಭದಲ್ಲಿ ಕನ್ನಡದಲ್ಲಿ ದೇವ ಪೂಜೆ ಮಾಡುವ ಕೆಲಸ ಮಾಡಿದರು. ವಚನದ ಮೂಲಕ ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆ, ಸಾಮಾಜಿಕ ಪಿಡುಗು ಹೊಡೆದೋಡಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು ಎಂದು ತಿಳಿಸಿದರು.
ಮಾಜಿ ಶಾಸಕ ಡಿ ಬಿ ಗಂಗಪ್ಪ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿಜಿ ವಿಶ್ವನಾಥ ರವರು ಸಹ ಬಸವಣ್ಣನವರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ, ನ್ಯಾಮತಿ ತಾಲೂಕು ಸಾಧವಿರುವ ಸಮಾಜದ ಅಧ್ಯಕ್ಷರು ಕೊಡಿಕೊಪ್ಪ ಶಿವಣ್ಣ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಗಣೇಶ್ ರಾವ್ ಪಿ, ನಿವೃತ್ತ ಉಪತಹಸಿಲ್ದಾರ ನಾಗರಾಜ್, ಆರ್ ನಾಗಪ್ಪ, ಚೀಲೂರು ವಾಜಿದ್, ಲಿಂಗರಾಜ್ ಹವಳ ದ್, ಆರ್ ಐ ಸಂತೋಷ್, ಸುನಿತಾ ಷಣ್ಮುಖಪ್ಪ. ವನಜಾಕ್ಷಮ್ಮ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *