ನ್ಯಾಮತಿ: ತಾಲೂಕು ಸೌಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ತಲಾ ಒಂದರಂತೆ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದ್ದರು.
ಬೇರೆ ಯಾವ ನಿರ್ದೇಶಕರುಗಳು ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಷಣ್ಮುಖಪ್ಪ ಎ, ಉಪಾಧ್ಯಕ್ಷರಾಗಿ ಸುರೇಶ್ ಆಚಾರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ಹೊನ್ನಾಳಿಯ ಸಿಡಿಓ ನವೀನ್ ಕುಮಾರ್ ಅವರು ಘೋಷಣೆ ಮಾಡಿದರು.
ಸೊಸೈಟಿ ನಿರ್ದೇಶಕರುಗಳಾದ ಎಂ ರಾಜು, ಎಬಿ ರಂಗಪ್ಪ ಲೋಕಪ್ಪ ಡಿ ಎಚ್, ಎಂ ಜಿ ಷಣ್ಮುಖಪ್ಪ ಈರಮ್ಮ, ಯಶೋದಮ್ಮ ಎಂಜಿ, ಶಾಂತ ನಾಯ್ಕ, ಕರಬಸಪ್ಪ ಎಂಜಿ, ರಮೇಶ್, ಪ್ರಭುದೇವ್, ಕಾರ್ಯನಿರ್ವಣಧಿಕಾರಿ ಗಣೇಶ ಹೆಚ್, ಸಿಬ್ಬಂದಿ ವರ್ಗದವರು ಸಹ ಇದ್ದರು.