ನ್ಯಾಮತಿ: ಪಟ್ಟಣದಲ್ಲಿ ಇಂದು ಜವಳಿ ಸಮಾಜ ಸಹಕಾರ ಸಂಘ ನೂತನ ಕಚೇರಿಯ ಉದ್ಘಾಟನೆ ಸಮಾರಂಭ ಮತ್ತು 2022. 23ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಕಚೇರಿ ಉದ್ಘಾಟನೆಯನ್ನು ಗೌರವಾಧ್ಯಕ್ಷರಾದ ಕುಬಸದ ಷಡಕ್ಷರಪ್ಪ ಮತ್ತು ಜಯದೇವಪ್ಪ ಎಂ ನೆರವೇರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಎನ್ ಹೆಚ್ ದೇವಿ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಸವೇಶ್ವರ ಭಾವಚಿತ್ರವನ್ನು ಪ್ರಮುಖ ರಾಜಬೀದಿಗಳಲ್ಲಿ ಸಮಾಜದ ಮುಖಂಡರುಗಳು ಮಹಿಳೆಯರು ಯುವ ಮಿತ್ರರು ಸೇರಿದಂತೆ ಮೆರವಣಿಗೆಯ ಮಾಡಿ ನನ್ನ ಕೈಯಿಂದ ಭಾವಚಿತ್ರ ಅನಾವರಣ ಗೊಳಿಸಿದ್ದು ಸಂತಸ ತಂದಿದೆ ಎಂದುರು.
ಕುಬಸದ ವೀರಪ್ಪನವರ ವೇದಿಕೆ ಅಧ್ಯಕ್ಷತೆ ವಹಿಸಿ ಸಂತೋಷ್ ಕುಮಾರ್ ಯಲಬುರ್ಗಿ ನಂತರ ಮಾತನಾಡಿದ ಅವರು ಬಸವಾದಿ ಶರಣರ ತತ್ವ ಆದರ್ಶಗಳನ್ನು ನೆನಪಿಸಿಕೊಂಡು, ಅಲ್ಲಮ ಪ್ರಭು ಶರಣರ ತತ್ವ ಹೇಳಿದಂತೆ ನಾನು ಸರಿಯಾಗಿದ್ದರೆ ಅವನು ಕೂಡ ಚಿಕ್ಕವನು ಆಗುತ್ತಾನೆ ಎಂದು ಹೇಳುತ್ತಾ, ನ್ಯಾಮತಿ ಪಟ್ಟಣದಲ್ಲಿ ನಮ್ಮ ಸಮಾಜ ಅರವತ್ತರಿಂದ ಎಪ್ಪತ್ತು ಪರ್ಸೆಂಟ್ ಇದೆ, ಆದರೆ ಬಸವರಾಜಪ್ಪ ಎಂಬ ನಮ್ಮ ಸಮಾಜದ ಮುಖಂಡ ಕಾಲಿನಿವೇಶನವನ್ನು ಕೊಟ್ಟಿದ್ದರ ಫಲವಾಗಿ ಆ ಜಾಗದಲ್ಲಿ ಕಟ್ಟಡವನ್ನು ಕಟ್ಟಿ ಇಂದು ಪೂರ್ಣಗೊಂಡು ಉದ್ಘಾಟನೆ ಸಹ ಆಗಿ ಇತಿಹಾಸವಾಗಿ ಮಾರ್ಪಟ್ಟಿದೆ. ಶಿವದಾಸಿ ಮಯ್ಯ, ಶಂಕರದಾಸಿಮಯ್ಯ ನವರು ಬಸವಣ್ಣನವರ ತತ್ವ ಆದರ್ಷಗಳನ್ನು ಪಾಲನೆಯ ಮಾಡಿದಂತ ಶರಣರಾಗಿದ್ದಾರೆ.
ಇವರೆಡರ ತತ್ವವಾದರ್ಷಗಳನ್ನ ನಮ್ಮ ಜವಳಿ ಸಮಾಜ ಸಮಾಜ ಅನುಸರಿಸಿ ಕಾಯಕ ಮಾಡಿ ಬದುಕನ್ನು ಸಾಗಿಸುತ್ತಾ ಬಂದಿದೆ. ಸುಖವಿದ್ದಾಗ 10 ಸಾವಿರ ಜನ, ಸತ್ತಾಗ ಹತ್ತು ಜನ ಇದ್ದರೆ ಏನು ಫಲ, ಸಹಕಾರ ಕ್ಷೇತ್ರದಲ್ಲಿ ಸಾಲ ತೆಗೆದುಕೊಂಡು ಅದೇ ರೀತಿ ಸಂಘಕ್ಕೆ ಸಾಲ ಮರುಪಾವತಿಸಿದಾಗ ಸಹಕಾರ ಸಂಘ ಬೆಳಿಲಿಕ್ಕೆ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಶ್ರೀಮತಿ ವೀಣಾ ಸ್ವಾಗತ ಕೋರಿದರು. ಕೆಎಂ ಬಸವರಾಜ್ ನುಡಿಯನ್ನು ನಡೆಸಿಕೊಟ್ಟರು.
20 22 23ನೇ ಸಾಲಿನ ವರದಿ ಮಂಡನೆಯನ್ನು ಶ್ರೀಮತಿ ಶ್ವೇತಾ ಎಂ ನಡೆಸಿಕೊಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುರುಷರಿಗೂ ಮತ್ತು ಮಹಿಳೆಯರಿಗೆ ಲಿಂಗಾಯತ ಜವಳಿ ಯುವ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಮಮತಾ ಎಂ ಆರ್, ಗಂಗಾಧರ ಕರ್ನೆಲ್ಲಿ, ಶಾರದಾ, ಶಿವಕುಮಾರ್ ಹರೀಶ್, ವಿಶ್ವನಾಥ್, ಲೋಲಾಕ್ಷಿ, ಯಶೋಧ ಇನ್ನು ಮುಂತಾದ ಸಮಾಜದ ಮುಖಂಡರುಗಳು ಸಹ ಭಾಗಿಯಾಗಿದ್ದರು.