ಹೊನ್ನಾಳಿ ಪೆ 20:ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ತಲಾಒಂದರಂತೆ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಯಾವ ನಿರ್ದೇಶಕರುಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಹೆಚ್ ಜಿ ಮಂಜುಳಾ ಗಣೇಶ್ ಉಪಾಧ್ಯಕ್ಷರಾಗಿ ಬಸವರಾಜಪ್ಪ ಟಿ ಅವರುಗಳನ್ನ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹೊನ್ನಾಳಿ ಸಿಡಿಓ ಕೆ ಜಿ ನವೀನ್ ಕುಮಾರ್ ಅವರು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬೆನಕಪ್ಪ ಬಿ, ಬೆನಕಪ್ಪ, ಹೆಚ್ ಎಂ ಓಂಕಾರಯ್ಯ, ಶ್ರೀನಿವಾಸ್, ರುದ್ರೇಶ್ ಎಚ್ಜಿ, ಬಿ ರಮೇಶ್, ಬೆನಕೇಶ, ಸಿ ಬಿ, ಶಿವಮ್ಮ ಎ ಕೆ, ಗೌರಮ್ಮ, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಟಿ ಜಿ ಲತಾ,ಹಾಲು ಪರೀಕ್ಷಕ ಮಂಜುನಾಥ ಎಂ ಪಿ, ಮುಖಂಡರಾದ ಹೆಚ್ ಜಿ ಗಣೇಶ್ ಗ್ರಾಮಸ್ಥರು ಸಹ ಉಪಸ್ಥಿತಿಯಲ್ಲಿದ್ದರು.