ನ್ಯಾಮತಿ: ದೇವರು ಶಸ್ತ್ರಗಳಿಂದ ದುಷ್ಟರನ್ನು ಸಂಹರಿಸುತ್ತಾ ಬಂದರೂ ಕೂಡ ದುಷ್ಟರು ಮತ್ತೆ ಮತ್ತೆ ಹುಟ್ಟಿಬರುವ ಕಾರಣ ಗುರು ಶಸ್ತ್ರಗಳ ಬದಲಿಗೆ ಶಾಸ್ತ್ರಗಳಿಂದ ದುಷ್ಟರಲ್ಲಿನ ದುಷ್ಟ ಗುಣಗಳನ್ನು ತೊಡದುಹಾಕಿ ಸಜ್ಜನರನ್ನಾಗಿ ಮಾಡುವ ಮೂಲಕ ಗುರು ದೇವರಿಗಿಂತ ದೊಡ್ಡವನಾಗುತ್ತಾರೆ. ಎಂದು ಜಂಗಮವಾಡಿ ಮಠ ಕಾಶಿಪೀಠ(ವಾರಣಾಸಿ) ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು. ಹೇಳಿದರು.
ಗೊವಿನಕೋವಿ ಗ್ರಾಮದಲ್ಲಿ ಶ್ರೀ ಹಾಲಸ್ವಾಮಿ ಸೇವಾ ಸಮಿತಿವತಿಯಿಂದ ಹಾಲಸ್ವಾಮಿ ಬೃಹನ್ಮಠದ ನೂತನ ಗುರುಗಳಾಗಿ ಶ್ರೀಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳವರ ಪಟ್ಟಾಧಿಕಾರ ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿ ಹಾಗೂ ಸಮಾರಂಭದ ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಒಬ್ಬ ವ್ಯಕ್ತಿಯನ್ನು ಶಸ್ತ್ರಗಳಿಂದ ಸಾಯಿಸಬಹುದು,ಸತ್ತ ವ್ಯಕ್ತಿ ಮತ್ತೆ ಹುಟ್ಟಿ ಬರಬಹುದು ಜನನ-ಮರಣ ನಿರಂತರವಾಗಿರುತ್ತವೆ ಆದರೆ ದೇವರು ಗುರುವಿನ ರೂಪದಲ್ಲಿ ಶಾಸ್ತ್ರಗಳಿಂದ ವ್ಯಕ್ತಿಯಲ್ಲಿನ ದುರ್ಗಣಗಳನ್ನು ಸಂಹರಿಸಿ ಸಜ್ಜನರನ್ನಾಗಿ ಮಾಡುತ್ತಾ ನೆ ಇದರಿಂದ ಗುರು ಸರ್ವಶ್ರೇಷ್ಠನಾಗುತ್ತಾನೆ ಎಂದು ಹೇಳಿದರು.
ಗುರುವಾದವನಿಗೆ ಒಂದು ಬಾರಿ ವಿರಕ್ತಿ ಭಾವನೆ ಬಂದರೆ ಆತನಿಗೆ ಇಡೀ ಜಗತ್ತೇ ತೃಣಕ್ಕೆ ಸಮಾನವಾಗುತ್ತದೆ ಆತ ತನ್ನ ಜೀವನವನ್ನು ಇಡೀ ಸಮಾಜಕ್ಕೆ ಮೀಸಲಿಡುತ್ತಾನೆ ಈ ಮೂಲಕ ಅವರು ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದ ಅವರು, ಹಾಲಸ್ವಾಮಿ ಮಠಗಳು ಪುತ್ರವರ್ಗ ಮಠ ಪರಂಪರೆ ಹೊಂದಿದ್ದು ಇಂದು ಪಟ್ಟಾಧಿಕಾರ ಪಡೆದ ಗೊವಿನಕೋವಿ ಹಾಲಸ್ವಾಮಿ ಮಠದ ನೂತನ ಗುರುಗಳಾದ ಶ್ರೀಸದ್ಗರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳು ಕೂಡ ಮುಂದೆ ಗೃಹಸ್ಥಾಶ್ರಮಕ್ಕೆ ಕಾಲಿಡಬಹುದು ಎಂದು ಭಾವಿಸಲಾಗಿತ್ತು, ಆದರೆ ದೇವರ ಕೃಪೆಯ ಪ್ರತಿಫಲ ಎಂಬಂತೆ ನೂತನ ಗುರುಗಳು ತಮ್ಮ ಸ್ವಯಂ ಪ್ರೇರಣೆಯಿಂದ ತಾವು ಮುಂದೆ ಗೃಹಸ್ಥಾಶ್ರಮಕ್ಕೆ ತೆರಳದೇ ಈಗಿನತೆಯೇ ಬೃಹ್ಮಚರ್ಯಶ್ರಮದಲ್ಲಿಯೇ ಮುಂದುವರೆಯುವುದಾಗಿ ತಿಳಿಸಿದ್ದು, ತಮಗೆ ಸಂತಸ ತಂದಿದ್ದು, ಪಟ್ಟಾಧಿಕಾರದ ನಂತರ ಸ್ವಯಂಪ್ರೇರಣೆಯಿಂದ ವಿರಕ್ತಿ ಮನೋಭಾವನೆ ತಾಳಿದ್ದು, ಮುಂದೆ ಇವರ ಸೇವೆ ಇಡೀ ಮುನುಕುಲಕ್ಕೆ ,ಸಮಾಜಕ್ಕೆ ಹೆಚ್ಚಿನ ರೀತಿಯಲ್ಲಿ ಲಭಿಸುವಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯP್ಷÀತೆವಹಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆರ್ಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿಯವರು ಮಾತನಾಡಿ,ಗೋವಿನಕೋವಿ ಹಾಲಸ್ವಾಮಿ ಮಠದ ನೂತನ ಸ್ವಾಮೀಜಿಯವರು ಸಾಕಷ್ಟು ವಿದ್ಯಾಸಂಪನ್ನರಾಗಿದ್ದು, ಇವರ ನೇತೃತ್ವದಲ್ಲಿ ಗೋವಿನಕೋವಿ ಮಠ ಉತ್ತರೋತ್ತರವಾಗಿ ಅಭಿವೃದ್ದಿಹೊಂದಲಿದ್ದು, ಇದಕ್ಕೆ ಗ್ರಾಮದ ಹಾಗೂ ಎ¯್ಲÁ ಭಕ್ತರ ಸಹಕಾರ ಅತ್ಯಗತ್ಯ ಹೊನ್ನಾಳಿ ಹಿರೇಕಲ್ಮಠ ಕೂಡ ಸದಾ ಇವರೊಂದಿಗೆ ಇರುತ್ತದೆ ಎಂದು ಹೇಳಿದರು.
ನೂತನವಾಗಿ ಪಟ್ಟಾಧಿಕಾರ ಪಡೆದ ನೂತನ ಸ್ವಾಮೀಜಿಗಳಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿಜಿಗಳು ಧರ್ಮೋಪದೇಶ ನೀಡಿ ಗೋವಿನಕೋವಿಯ ಹಾಲಸ್ವಾಮಿ ಮಠ ಯಾವುದೇ ರಾಜಕೀಯ ಕ್ಷೇತ್ರದಿಂದ ದೂರವಿದ್ದು, ಕೇವಲ ಭಕ್ತರಿಗಾಗಿ ಈ ಮಠ ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಜಿ¯್ಲÁ ಉಸ್ತುವಾರಿ ಸಚಿವ ಎಸï.ಎಸï. ಮಲ್ಲಿಕಾರ್ಜುನ ಅವರ ಧರ್ಮಪತ್ನಿ ಮುಖಂಡೆ ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನï. ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಡಿ.ಜಿ.ಸುರೇಂದ್ರಗೌಡ, ಡಿ.ಜಿ.ವಿಶ್ವನಾಥï,ಡಾ. ಧನಂಜಯ ಸರ್ಜಿ,ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಶಾಂತರಾಜ್ ಪಾಟೀಲï, ಜಿ.ಎಂ.ಸಿz್ದÉೀಶ್ವರ ಪುತ್ರ ಅಮಿತ್ ಮಂಜುನಾಥ ಸ್ವಾಮೀಜಿ , ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಂಪುರ ಹಾಲಸ್ವಾಮಿ ಮಠದ ಸದ್ಗುರು ಶಿವಕುಮಾರ ಹಾಲಸ್ವಾಮಿಜಿ, ದಿಡಗೂರು ಅಣ್ಣಪ್ಪಸ್ವಾಮಿ, ಶ್ರೀ ಹಾಲಸ್ವಾಮಿ ಸೇವಾ ಸಮಿತಿ ಗೌರವಾಧ್ಯP್ಷÀ ಫಾಲಾP್ಷÀಪ್ಪ ಗೌಡ,ಅಧ್ಯP್ಷÀ ರಮೇಶï, ಕಾರ್ಯದರ್ಶಿ ರುದ್ರೇಶï, ಮುಖಂಡರುಗಳಾದ ಎಚï.ಎ.ಗದ್ದಿಗೇಶï,ದಿಡಗೂರು ಎ.ಜಿ., ಪ್ರಕಾಶï, ಶಿಮುಲ್ ಉಪಾಧ್ಯP್ಷÀ ಎಚï.ಕೆ. ಬಸಪ್ಪ,ಎ.ಬಿ,.ಹನುಮಂತಪ್ಪ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಗೋವಿನಕೋವಿ ಹಾಲಸ್ವಾಮಿ ಮಠದ ನೂತನ ಗುರುಗಳ ಪಟ್ಟಾಧಿಕಾರದ ನಿಮಿತ್ತ ಶ್ರೀಮಠದಲ್ಲಿ ಫೆ 20ರಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದು , ಫೆ 22ರ ಗುರುವಾರ ಬೆಳಗ್ಗೆ ನೂತನ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ನಡಯಿತು, ಪ್ರತಿ ದಿನ ಸಂಗೀತ ಕಾರ್ಯಕ್ರಮ ಸೇರಿದಂತೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *