ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ 1986ರ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿವೃತ್ತಿ ಹೊಂದಿದ ಶಿಕ್ಷಕರು ಕೆ ಬಿ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 1986 ಸಾಲಿನ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಗಳು ನಮ್ಮ ಕೈಯಿಂದ ಶಿಕ್ಷಣವನ್ನು ಪಡೆದು ನೂರಾರು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸುಮಾರು 38 ವರ್ಷಗಳ ನಂತರ ಇಂತಹ ಗುರುವಂದನ ಕಾರ್ಯಕ್ರಮ ಏರ್ಪಡಿಸಿದ್ದು ಬಹಳ ಸಂತಸದ ವಿಷಯ, ಗುರುವಂದನ ಕಾರ್ಯಕ್ರಮದ ರೂವಾರಿಗಳಿಗೆ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು. ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಪ್ರಥಮವಾಗಿ ಬಂದು ವೃತ್ತಿ ಪ್ರಾರಂಭ ಮಾಡಿ ಪ್ರಥಮವಾಗಿ ಅನ್ನ ನೀಡಿದ ಸಂಸ್ಥೆಯಾಗಿದೆ. ಜೀವನ ಪಯರ್ಂತ ಅನ್ನ ಕೊಟ್ಟಂತ ಸಂಸ್ಥೆಯನ್ನು ಮರೆಯಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ 1966 ಜೂನ್ 27 ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿ ಜೀನಹಳ್ಳಿ ಗೌಡ್ರು ದನದ ಮನೆಯಲ್ಲಿ ಶಿಕ್ಷಕ ವೃತ್ತಿಯನ್ನು ಸೇವೆ ಆರಂಭಿಸಿ ಅಂದಿನ ದಿವಸ ಮುಖ್ಯೋಪಾಧ್ಯಾಯರಾದ ಕೆ ಶಿವಪ್ಪನವರ ಶಿಸ್ತಿನ ಸಿಪಾಯಿಯಂತಿದ್ದರು ಅವರ ಜೊತೆಗೆ ಶಿಕ್ಷಕರ ವೃತ್ತಿಯನ್ನ ಮಾಡುವುದು ಸುಲಭದ ಮಾತಾಗಿರಲಿಲ್ಲ, ಏಕೆಂದರೆ ಅಂದಿನ ಗುರು ಪರಂಪರೆಯ ಶಿಕ್ಷಣ ಇದ್ದಿದ್ದರಿಂದ ಅವರು ಕಟ್ಟುನಿಟ್ಟಾಗಿದ್ದ ಫಲವಾಗಿ ಇಂದು ಗುರುವಂದನ ಕಾರ್ಯಕ್ರಮಕ್ಕೆ ಅರ್ಹನಾಗಿದ್ದೇನೆ ಎಂದು ಅವರನ್ನು ನೆನೆದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ದಿ, ರಾಮಪ್ಪನವರು ಕೊಡುಗೆಯಿಂದಲೇ ಜೀನಹಳ್ಳಿ ಕತ್ತಿಗೆ, ಮಾದನಹಳ್ಳಿ ಹರಳಹಳ್ಳಿ ಕೆಂಚಿಕೊಪ್ಪ ಹಳ್ಳಿಗಳ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಶಿಕ್ಷಣ ಸಂಸ್ಥೆಯನ್ನು ತೆರೆದು ಶಿಕ್ಷಣವನ್ನ ನೀಡಿದ್ದರ ಫಲವಾಗಿ ನಮಗೆ ಗುರುವಂದನೆ ಪಡೆಯಲಿಕ್ಕೆ ಕತ್ತಿಗೆ ರಾಮಪ್ಪನವರು ಹಳೆಯ ವಿದ್ಯಾರ್ಥಿಗಳ ಕಾರಣ ಎಂದು ನೆನಪು ಮಾಡಿಕೊಂಡರು. ಗುರುವಂದನೆ ಪಡೆದಂತ ಶಿಕ್ಷಕರುಗಳಾದ ಕೆ ಬಿ ಬಸವರಾಜಪ್ಪ, ಪಿ ಟಿ ತೀರ್ಥಪ್ಪ ಕೆಕೆ ಕರಿಬಸಪ್ಪ, ಪರಮೇಶ್ವರಪ್ಪ ಎಸ್ ಹೆಚ್ ಪಿ, ಕಟೌಕರ್ ಸಿರಿವಂತೆ, ಇ ಪಿ ಪ್ರಕಾಶ್, ಜೀನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರುಗಳಿಗೆ ಹಾಗೂ ಸೈನಿಕರಿಗೆ ವೈದ್ಯರಿಗೆ ಸಿಆರ್ ಪಿ ಎಫ್ ಯೋಧರಿಗೆ ರೈತರಿಗೆ ಇನ್ನೂ ಹಲವಾರು ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿಕೊಂಡ ಮೋಹನ್ ಜೇನಹಳ್ಳಿ ಗೌಡ್ರು, ಬಿಇಒ ನಂಜರಾಜ್, ಯೋಗೇಶ್ ಮಾಳಗಿ, ಸುರೇಶ್ ಗೆಜ್ಜೆರಿ, ವಿಶ್ವನಾಥ್ ಜೀನಹಳ್ಳಿ, ಚೆನ್ನೇಶ್ ಕೆ, ಕೆ ಸಿ ವೇದಮೂರ್ತಿ, ಸರ್ವ ಮಂಗಳ, ಇಂದಿರಮ್ಮ ಇನ್ನು ಮುಂತಾದವರು ಹಳೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *