ನ್ಯಾಮತಿ:ನಾಡಿನ ಹಿರಿಯ ಸಾಹಿತಿಗಳ ಸ್ಮರಣೆಕಾರ್ಯಕ್ರಮಅಗತ್ಯವಾಗಿ ನಡೆಯಬೇಕಿದೆಎಂದು ಹೊನ್ನಾಳಿಯ ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ ಹೇಳಿದರು.
ಪಟ್ಟಣದಲ್ಲಿಗುರುವಾರತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ 2024ನೇ ಇಸವಿಯಸವಿಗನ್ನಡ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾಡಿನ ಸ್ಮರಣೀಯ ಸಾಹಿತಿಗಳು ವಾಸವಿದ್ದ ಮನೆಗಳು ಮೂರು ಗುಂಪುಗಳಾಗಿವೆ.ಕೆಲವು ಸಾಹಿತಿಗಳ ಮನೆಗಳು ಪ್ರವಾಸಿ ತಾಣಗಳಾಗಿವೆ, ಕೆಲವು ಸಾಹಿತಿಗಳ ಮನೆಗಳು ಗುರುತು ಸಿಗದಂತಾಗಿವೆ. ಮತ್ತೇ ಕೆಲವು ಸಾಹಿತಿಗಳ ಮನೆಗಳು ವಾಣಿಜ್ಯ ಕೇಂದ್ರಗಳಾಗಿವೆ ಎಂದು ವಿಷಾಧಿಸಿದರು.
ಸಾಸ್ವೇಹಳ್ಳಿ ಹಿರಿಯ ಸಾಹಿತಿಗಳಾದ ಸಾಸ್ವೇಹಳ್ಳಿ ಕೆ.ಪಿ.ದೇವೇಂದ್ರಯ್ಯ, ಹೊನ್ನಾಳಿ ಡಿ.ಶಿವರುದ್ರಪ್ಪ ಮಾತನಾಡಿ, ಕನ್ನಡ ಸವಿಗನ್ನಡ ದಿನದರ್ಶಿಕೆ ಹೊರತಂದರುವುದು ಶ್ಲಾಘನೀಯ ಕೆಲಸ, ಪ್ರತಿಯೊಬ್ಬರ ಮನೆಯಲ್ಲೂಕನ್ನಡ ಅಂಕಿಗಳ ದರ್ಶನವಾಗಬೇಕುಎಂದರು.
ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶರಾವ, ನಾಮನಿರ್ದೇಶಿತ ಸದಸ್ಯ ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ, ನಿವೃತ್ತ ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಪತ್ರಿಕೆ ಸಂಪಾದಕಅರುಣಕುಮಾರ ಮಾಸಡಿ, ಶಿವ ಬ್ಯಾಂಕ್‍ಅಧ್ಯಕ್ಷಚಂದ್ರೇಗೌಡ, ಬೆಳಗುತ್ತಿ ಹೋಬಳಿ ಘಟಕದಅಧ್ಯಕ್ಷಕವಿರಾಜ, ಗೋವಿನಕೋವಿ ಘಟಕದಅಧ್ಯಕ್ಷಡಿ.ಜಿ.ಆನಂದ, ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತುತಾಲ್ಲೂಕುಘಟಕದಅಧ್ಯಕ್ಷ ಸಿ.ಕೆ.ಬೋಜರಾಜ, ಮಹಿಳಾ ಕಾಂಗ್ರೆಸ್‍ಘಟಕದಅಧ್ಯಕ್ಷೆ ವನಜಾಕ್ಷಮ್ಮ, ಗೌರವ ಕಾರ್ಯದರ್ಶಿಗಳಾದ ಎಸ್.ಜಿ.ಬಸವರಾಜಪ್ಪ, ಬಿ.ಜಿ.ಚೈತ್ರಾ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗಧೀಶ, ಎಂ.ಲೋಕೇಶ್ವರಯ್ಯ, ವೆಂಕಟೇಶನಾಯ್ಕ,ಚಂದನಜಂಗ್ಲಿ, ಮುರುಡಪ್ಪ, ಗ್ರಂಥಪಾಲಕಿ ಸುಮಲತಾ, ಬಳೆಗಾರ ಕವಿತಾ, ವರ್ತಕ ಹೊಮ್ಮರಡಿಕಾಂತರಾಜ, ಆರುಂಡಿ ನಾಗರಾಜಪ್ಪ, ಮಂಜಪ್ಪ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಕನ್ನಡಅಜೀವ ಸದಸ್ಯರುಇದ್ದರು.

Leave a Reply

Your email address will not be published. Required fields are marked *