ನ್ಯಾಮತಿ : ತಾಲೂಕು ಹಳೆ ಮಳಲಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ನೂತನ ದೇವಾಲಯ ಪ್ರವೇಶೋತ್ಸವ ವಿಗ್ರಹ ಪ್ರತಿಷ್ಠಾಪನೆ ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭ ಕಾರ್ಯಕ್ರಮ ಜರುಗಿತು. ಶುಭ ಮುಂಜಾನೆ ಗ್ರಾಮದ ಸುಮಂಗಲರಿಂದ ಗಂಗಾ ಪೂಜೆ ನೆರವೇರಿಸಿ ಕುಂಭಾಭಿಷೇಕ ಹಾಗೂ ಕಳಸಕ್ಕೆ ಅಭಿಷೇಕ ಹಾಗೂ ಶ್ರೀ ಶ್ರೀ 1108ನನೇ ಡಾ// ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮತ್ತು ಶ್ರೀ ಜಗದ್ಗುರು ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಇವರು ಅಮೃತ ಹಸ್ತದಿಂದ ಗೋಪುರಕ್ಕೆ ಕಳಸಾರೋಹಣ ಕಾರ್ಯಕ್ರಮ ಜರಗಿತ್ತು. ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು.
ನಂತರ ಮಾತನಾಡಿದ ಅವರು ಬರಗಾಲದ ಸಂದರ್ಭದಲ್ಲಿ ಸಹ ಹಳೆ ಮಳಲಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನವನ್ನು ಕಟ್ಟಿ ಸಿರಿಗೇರಿ ಮಠದ ಶ್ರೀಗಳಿಂದ ಉದ್ಘಾಟಿಸಿದ್ದು ಬಹಳ ಸಂತೋಷದ ವಿಷಯ ಗುರುಗಳ ಆಶೀರ್ವಾದದಿಂದ ಬರಗಾಲ ಸಂದರ್ಭದಲ್ಲಿ ಮಳಲಿ ಗ್ರಾಮಕ್ಕೆ ನೀರಿನ ಕೊರತೆ ಆಗದೆ ಸಮೃದ್ಧಿ ಬದುಕು ಸಾಗಿಸುವಂತಾಗಬೇಕೆಂದರು.


ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯಲ್ಲಿ ಭಕ್ತರ ಕುರಿತು ಆಶೀರ್ವಚನ ನೀಡಿದವರು 1987ರಲ್ಲಿ ನನ್ನನ್ನ ಸಿರಿಗೇರಿ ಮಠಕ್ಕೆ ಪಟ್ಟ ಕಟ್ಟಿ ಮಾಯಕೊಂಡ ಕ್ಷೇತ್ರದ ಆನೆಕೊಂಡ ಗ್ರಾಮದಲ್ಲಿ ದೇವಸ್ಥಾನಕ್ಕೆ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ಮಠದ ಯುವಪಡೆ ಭಕ್ತರು ನನಗೆ ಪತ್ರ ಮುಖಿಯನ್ನು ನೀವುಗಳು ಬಸವೇಶ್ವರ ತತ್ವ ಪಾಲನೆಯನ್ನ ಮಾಡುವವರು ವೀರಶೈವ ಪರಂಪರೆ ದೇವಸ್ಥಾನದ ಕಳಸ ರೋಣಕ್ಕೆ ಹೋಗಿದ್ದೀರಿ ಎಂದು ನನಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಇಂದು ಧಾರ್ಮಿಕ ಸಭೆಯಲ್ಲಿ ಊರಿನ ಮುಂದೆ ಇರುವ ಗುಡಿಸಿಲಗೆ ಹೋಗುವುದಕ್ಕಿಂತ ಊರಿನ ಮಧ್ಯೆ ಇರುವ ದೇವಸ್ಥಾನಕ್ಕೆ ಹೋಗುವುದೇ ಲೇಸು ಎಂದು ಪತ್ರ ಬರೆದಿದ್ದೆ ಎಂದರು.
ಭಕ್ತಿಗೂ ಮತ್ತು ಪ್ರೀತಿಗೂ ಹತ್ತಿರ ಸಂಬಂಧವಿದೆ ಬಸವಣ್ಣನವರ ಹೇಳಿದಂತೆ ಯಾರಿಗೆ ದೇವರ ಮೇಲೆ ಭಕ್ತಿ ಇರಲ್ಲವೋ ಅವನು ಬಡವ. ಭಕ್ತಿ ಇದ್ದವನು ಬಸವಣ್ಣನವರ ದೃಷ್ಟಿಯಲ್ಲಿ ಅವನೇ ಶ್ರೀಮಂತ ಎಂದು ತಿಳಿಸಿದರು. ಪ್ರೀತಿಯ ಕುರಿತು ಮಾತನಾಡಿದ ಶ್ರೀಗಳು ಮಹಾತ್ಮ ಗಾಂಧಿಯವರು ಆರೋಗ್ಯ ಕೆಟ್ಟಾಗ ಆಸ್ಪತ್ರೆಯ ಸೇರಿದ ಸಂದರ್ಭದಲ್ಲಿ ಒಬ್ಬ ಗರ್ಭಿಣಿ ಸ್ತ್ರೀಯು ಹೆರಿಗೆ ಹೋಗುತ್ತಾಳೆ. ಗರ್ಭಿಣಿ ಸ್ತ್ರೀಯರಿಗೆ ಅರವಳಿಕೆ ಇಲ್ಲದೆ ಮಗುವನ್ನು ಜನನ ಮಾಡುವುದು ಅಂದಿನ ಕಾಲದಲ್ಲಿ ಅಷ್ಟು ಸುಲಭದ ಮಾತಾಗಿರಲಿಲ್ಲ, ನಮಗೆ ಪಾದಕ್ಕೆ ಒಂದು ಮುಳ್ಳು ಚುಚ್ಚಿದರೆ ನೋವಾಗುತ್ತದೆ, ಆದರೆ ಅರವಳಿಕೆ ಇಲ್ಲದೆ ಮಗುವನ್ನ ಜನನ ಮಾಡಿಸುವ ಸಂದರ್ಭದಲ್ಲಿ ತಾಯಿ ನೋವನ್ನು ಮಗುವಿನ ಮೇಲೆ ಇರುವ ಪ್ರೀತಿಯಿಂದ ಸಹಿಸುಕೊಳ್ಳುತ್ತಾಳೆ ಎಂದು ಮಹಾತ್ಮ ಗಾಂಧಿಯವರು ತಮ್ಮ ಆತ್ಮಕಥನದಲ್ಲಿ ಬರೆಯುತ್ತಾರೆ ಎಂದು ತಿಳಿಸಿದರು.
ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಶ್ರೀಗಳು ಮಾತನಾಡಿ ದೇವರ ಸ್ಮರಣೆ ಮಾಡಬೇಕಾದರೆ ಭಕ್ತ ಸಜ್ಜನರ ಸಂಘ ಗುರುಗಳ ನಿತ್ಯ ಬದುಕಿನಲ್ಲಿ ನೆನೆದಾಗ ಸಜ್ಜನರಲ್ಲಿ ಭಕ್ತಿ ಬರುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ಬಿ ಎಂ ಚಂದ್ರಮತಿ ಜೆಪಿ ಮಲ್ಲೇಶಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಹಳೆ ಮಳಲಿ ಇವರು ವಹಿಸಿಕೊಂಡಿದ್ದರು.
ನ್ಯಾಮತಿ ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರಾದ ಶಿವಣ್ಣ ಕೋಡಿಕೊಪ್ಪ, ಹೆಜ್ ಎ ಗದ್ದಿಗೇಶಣ್ಣ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿ,ಜಿ ವಿಶ್ವನಾಥ್, ಡಿ,ಎಸ್ ಪ್ರದೀಪ್, ಎಂಪಿ ಷಡಕ್ಷರಿ, ಕೆ ಎಸ್ ರಾಜಪ್ಪ ಜೆಪಿ ರಮೇಶ್ ಪಟೇಲ್, ಎಚ್ ಆರ್ ಮಲ್ಲೇಶಪ್ಪ, ನವೀನ್ ಎಂ ಎಸ್, ಎಂ ರಾಜು ಇನ್ನು ಮುಂತಾದವರು ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *