ನ್ಯಾಮತಿ:ತಾಲ್ಲೂಕು ಮಾಚಿಗೊಂಡನಹಳ್ಳಿ ಗ್ರಾಮದ ನಕಾಶೆ ಕಂಡರಸ್ತೆಯನ್ನು ಕೆಲವರುತಂತಿ ಬೇಲಿ ಹಾಕಿ ಒತ್ತುವರಿ ಮಾಡಿರುವುದನ್ನುತೋರಿಸುತ್ತಿರುವರೈತರು.
ನಕಾಶೆ ಕಂಡದಾರಿ ಬಿಡಿಸಿಕೊಡಲು ರೈತರಆಗ್ರಹ
ಗ್ರಾಮದ ಸರ್ವೆ ನಂ 113ರಿಂದ 119ರವರೆಗೆ ಸರ್ಕಾರಿ ನಕಾಶೆ ಕಂಡರಸ್ತೆಯನ್ನು ಕೆಲವರುಒತ್ತುವರಿ ಮಾಡಿತಂತಿ ಬೇಲಿ ಹಾಕಿರುವುದನ್ನುತೆರವು ಮಾಡಿ ಉಳಿದ ರೈತರಿಗೆ ಅನುಕೂಲ ಮಾಡಿಕೊಡುವಂತೆಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಹಿಂದೆ ನಕಾಶೆ ಕಂಡದಾರಿಯಲ್ಲಿಜನ, ಜಾನುವಾರು ಸಂಚರಿಸುತ್ತಿದ್ದರು. ಈಚೆಗೆ ಪ್ರಭಾವಿ ವ್ಯಕ್ತಿಗಳು ರಸ್ತೆಯನ್ನುಒತ್ತುವರಿ ಮಾಡಿ ಬೇಲಿ ಹಾಕಿರುವುದರಿಂದ ಉಳಿದ ರೈತರು, ಜನ ಜಾನುವಾರುಗಳ, ಟ್ರ್ಯಾಕ್ಟರ್, ರೈತಾಪಿ ಕೆಲಸಕ್ಕೆ ಹೋಗಲು ಅಡ್ಡಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ವೆ ಸ್ಕೆಚ್ ಮಾಡಲುಬಂದಾಗಇಲ್ಲಸಲ್ಲದ ಸಬೂಬು ಹೇಳಿ ತಕರಾರು ಮಾಡಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಅಧಿಕಾರಿ, ಹೊನ್ನಾಳಿ ಉಪವಿಭಾಗಾಧಿಕಾರಿ ಹಾಗೂ ಸ್ಥಳೀಯ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಎಂದು ಅಪಾದಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ರಸ್ತೆತೆರವು ಮಾಡಿ¸ದಿÀದ್ದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕುಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆಎಂದುರೈತರಾದ ಕೆ.ಷಣ್ಮುಖಪ್ಪ, ಎಚ್.ಪಿ.ಮಲ್ಲಿಕಾರ್ಜುನ, ಚಂದ್ರಪ್ಪ ಹಾಗೂ ಕರ್ನಾಟಕ ಮಾದಿಗದಂಡೂರ ಸಮಿತಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಚಿಕೊಪ್ಪ ಎಂ.ಎಚ್.ಮಂಜಪ್ಪ ತಿಳಿಸಿದ್ದಾರೆ.