ನ್ಯಾಮತಿ: ತಾಲೂಕು ಬೆಳಗುತ್ತಿ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿವರೆಗೆ ಶಿವಮೊಗ್ಗ ಶ್ರೀ ಗೌರಿ ಕಲಾ ಕೇಂದ್ರದ ಶಿಕ್ಷಕಿ ಕವಿತಾ ರಾಣಿ ಮತ್ತು ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಸಿಕೊಟ್ಟರು.
ನಂತರ ತೀರ್ಥರಾಮೇಶ್ವರ ಭಜನಾ ಮಂಡಳಿ ಅವರಿಂದ ಭಜನೆ ಕಾರ್ಯಕ್ರಮ ಜರಗಿತು. ಮಧ್ಯರಾತ್ರಿ ದೇವಸ್ಥಾನವನ್ನು ಶುಚಿಗೊಳಿಸಿ ಬಾಳೆಕಂದು, ಮಾವಿನ ತೋರಣ, ಹೂವಿನಿಂದ ದೇವಸ್ಥಾನ ಸಿಂಗರಿಸಿ ಅಲಂಕರಿಸಿದರು. ತದಾದ ನಂತರ ತೀರ್ಥರಾಮೇಶ್ವರ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ, ಬೆಳಗಿನ ಜಾವ ಮೂರರಿಂದ ಆರು ಗಂಟೆವರೆಗೆ ನಡೆದು ಮಹಾ ಮಂಗಳಾರತಿಯೊಂದಿಗೆ ಮುಕ್ತಾಯಗೊಂಡಿತು. ನಸುಕಿನ ಜಾವದಿಂದ ಸುತ್ತಮುತ್ತಲಿನ ಗ್ರಾಮಸ್ಥರು ತೀರ್ಥರಾಮೇಶ್ವರ ದೇವಸ್ಥಾನಕ್ಕೆ ಭಕ್ತರು ಬಂದು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನದ ವತಿಯಿಂದ ಬಂದಂತ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು ಎಂದು ದೇವಸ್ಥಾನ ಕಮಿಟಿ ಅವರು ತಿಳಿಸಿದರು.