ನ್ಯಾಮತಿ: ತಾಲೂಕು ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಭಾನುವಾರ ರಾತ್ರಿ ಮಹಾಶಿವರಾತ್ರಿ ಮತ್ತು ಅಮವಾಸೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಜಾಗರಣೆ ನೆಡೆದವು.
ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿ ನೇತೃತ್ವದಲ್ಲಿ ಶ್ರೀ ಗುಳ್ಳಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ, ಹೋಮ, ಹವನ, ಪೂಜೆ ಮಹಾ ಮಂಗಳಾರತಿ ನಡೆಯಿತು. ಬೆಳಗ್ಗೆ 6 ಗಂಟೆಗೆ ಸಮಯಕ್ಕೆ ತೇಜ ಪಲ್ಲಕ್ಕಿ ಉತ್ಸವ ಪ್ರಮುಖ ರಾಜಭೀದಿಗಳಲ್ಲಿ ಭದ್ರಕಾಳಿ ಸಹಿತ ವೀರಗಾಸೆ, ಚಿಟ್ಟಿ ವಾದ್ಯ, ಸನಾಯಿ, ಭಜನೆ, ಡೊಳ್ಳು ಕುಣಿತದೊಂದಿಗೆ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿ ಧಾರ್ಮಿಕ ಕಾರ್ಯಕ್ಕೆ ಮೆರುಗು ತಂದು ಕೊಟ್ಟರು.
ನಂತರ ತುಂಗಭದ್ರ ನದಿಗೆ ತೆರಳಿ ಮುತ್ತೈದೆಯರಿಂದ ಹೊಳೆ ಪೂಜೆ ನೆರವೇರಿಸಿ ಪುನಃ ಮಠಕ್ಕೆ ಶ್ರೀಗಳು ಪಲ್ಲಕ್ಕಿ ಸಮೇತವಾಗಿ ಬಂದು ಶ್ರೀ ಗುಳ್ಳಮ್ಮ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಶ್ರೀಗಳಿಂದ ಕಾರಣಿಕ ವಾಣಿ “ಹಗ್ಗ,ವಣಿಗೆ ಕರೆಕಷ್ಟ ಮುಕ್ಕಣ್ಣನಿಗೆ ಮೊರೆ ಹಾಲಸ್ವಾಮಿ ಮಹಾರಾಜ್ ಕಿ ಜೈ'(ರೈತರಿಗೆ ಮಳೆ ಬಾರದೆ ಸಂಕಷ್ಟಕ್ಕೆ ಈಡಾಗಿದ್ದಾರೆ ಮಹೇಶ್ವರನಿಗೆ ಮೊರೆ ಹೋಗಿ,)ಮಹಾಲಿಂಗ ಸ್ವಾಮಿ ಕಾರ್ಣಿಕ ನುಡಿ” ಇದಾಗಿತ್ತು.ಗ್ರಾಮದ ಹಿರಿಯರು ಮತ್ತು ಭಕ್ತರು ವಿಶ್ಲೇಷಿಸಿದ್ದಾರೆ ಬಂದಂತ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರಗಿತು.