ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ಸಾರ್ವಜನಿಕರುದೂರಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ ಮಾತನಾಡಿ.
ಈ ಹಿಂದಿನ ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೊಂಡಿರುವುದು ಸರಿಯಷ್ಟೆ, ಇದರಿಂದ ಪಟ್ಟಣದ ಅಭಿವೃದ್ದಿ ಜೊತೆಗೆ ಸಾಕಷ್ಟು ಅನುದಾನ ಬರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಇದ್ದಜನತೆಗೆ ನಿರಾಸೆಯಾಗಿದೆ.ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಕಚೇರಿಯ ಆಡಳಿತ ವರ್ಗದವರುಯಾರ ನಿಯಂತ್ರಣದಲ್ಲೂಇಲ್ಲದಂತೆ ವರ್ತಿಸುತ್ತಾರೆ.
ಸಾರ್ವಜನಿಕರು ತಮಗೆ ಬೇಕಾದ ದಾಖಲೆಗಳನ್ನು ಪಡೆಯಲುಎಲ್ಲಾ ದಾಖಲೆಗಳನ್ನು ಸಲ್ಲಿಸಿದರೂ ಸಹ ಕೆಲವು ಸಾರ್ವಜನಿಕರಿಗೆ ಅನಾವಶ್ಯಕವಾಗಿ ಪುನಃ ದಾಖಲೆಗಳನ್ನು ಸಲ್ಲಿಸುವಂತೆ ಕಚೇರಿಸಿಬ್ಬಂದಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಕಂಡು ಬರುತ್ತಿದೆ.ಈ ಬಗ್ಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ಕೇಳಿದರೆ ಸಿಬ್ಬಂದಿಗಳನ್ನು ಸಮರ್ಥಿಸಿಕೊಳ್ಳುತ್ತಾರೆ.ಅಗತ್ಯವಾಗಿ ದಾಖಲೆ ಪಡೆಯಬೇಕಾzರೆ ಸಿಬ್ಬಂದಿಗಳು ಸಾವಿರಾರೂ ರೂಪಾಯಿಗಳನ್ನು ಬೇಡಿಕೆಇಟ್ಟು ವಿನಃಕಾರಣ ಸಾರ್ವಜನಿಕರಿಗೆ ತೊಂದರೆ ನಿಡುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ದಾಖಲೆಗಳು ಸಿಗುತ್ತಿವೆ.
ಶಾಸಕರು ಆಯ್ಕೆಯಾದ ಪ್ರಾರಂಭದಲ್ಲಿ ಲಂಚಮುಕ್ತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರೂ ಸಹ ವಾಣಿಜ್ಯ, ವಸತಿ ನಿರ್ಮಾಣ ಹಾಗೂ ಇತರೆ ಕಾರ್ಯಗಳಿಗೆ ಪರವಾನಿಗೆ ಪಡೆಯಲು ಹೆಚ್ಚಿನ ಹಣಕ್ಕೆ ಬೇಡಿಕೆಇಡುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಸ್ವಚ್ಚತೆ, ಕುಡಿಯುವ ನೀರು, ವಿದ್ಯುತ್ ದೀಪ ಹಾಗೂ ಇತರೆ ಸೌಕರ್ಯಗಳನು ಒದಗಿಸುವಲ್ಲಿ ನಿರ್ಲಕ್ಷತೆ ವಹಿಸುತ್ತಿದ್ದಾರೆ.ಈ ವಿಚಾರವಾಗಿ ಶಾಸಕರಿಗೆದೂರವಾಣಿ ಹಾಗೂ ಖುದ್ದಾಗಿ ಬೇಟಿ ಮಾಡಿ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲಎಂದರು.
ಪಟ್ಟಣದಲ್ಲಿರಸ್ತೆ ವಿಸ್ತರಣೆ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಅಪೂರ್ಣಗೊಂಡಿದೆ.ಯುಜಿಡಿ ಹೆಸರಿನಲ್ಲಿಇಡೀ ಪಟ್ಟಣವನ್ನು ಗುತ್ತಿಗೆದಾರರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದರೂ ಅಧಿಕಾರಿಗಳು ಕೈಚೆಲ್ಲಿದ್ದಾರೆ ಎಂದು ದೂರಿದರು.
ಕೂಡಲೇ ಸಂಬಂಧ ಪಟ್ಟ ಮೇಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು.ತಪ್ಪಿದಲ್ಲಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಜೋಗದ ಸುರೇಶ, ಕೋಟೆಕೆರೆ ಮೇಘರಾಜ, ಹುಬ್ಬಳಿ ವೀರಭದ್ರಪ್ಪ, ಜೆ.ಈಶ್ವರಪ್ಪ, ಚನ್ನೇಶಇದ್ದರು.